‘ಧನಂಜಯ ಎಷ್ಟೇ ದೊಡ್ಡ ನಟರಾದರೂ ಬಹಳ ಸರಳವಾಗಿರುತ್ತಾರೆ

ನಟಿ ಅದಿತಿ ಪ್ರಭುದೇವ ಕೆಲ ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಮದುವೆಯಾದ ಮೇಲೆ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ‘ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿ ಗುಡ್ಡ’. 2022ರಲ್ಲಿ ಅವರ ಒಂದಷ್ಟು ಸಿನಿಮಾಗಳು ಬಿಡುಗಡೆಯಾದರೂ, ಈ ಚಿತ್ರದಲ್ಲಿನ ಅವರ ಪಾತ್ರ ವಿಭಿನ್ನವಾಗಿದೆಯಂತೆ ‘2022 ನನಗೆ ಬಹಳ ವಿಶೇಷ ಎನಿಸುತ್ತದೆ. ನನ್ನ ಐದು ಸಿನಿಮಾಗಳು ಬಿಡುಗಡೆಯಾಗಿವೆ. ಇದರ ಜತೆಗೆ ವೈಯಕ್ತಿಕ ಜೀವನದಲ್ಲಿ ಬೇರೆ ಘಟ್ಟವನ್ನು ತಲುಪಿದ ವರ್ಷ. ಈ ಎಲ್ಲಾ ಕಾರಣದಿಂದಾಗಿ ನಾನು 2022 ಅನ್ನು ಮರೆಯುವ ಹಾಗಿಲ್ಲ. ಐದು ಸಿನಿಮಾಗಳಲ್ಲಿ ನಾಯಕಿಯಾಗಿದ್ದೆ ಎಂಬುದು ಸಹ ಖುಷಿಯ ವಿಚಾರ’ ಎಂದಿದ್ದಾರೆ ಅದಿತಿ‘ಜಮಾಲಿಗುಡ್ಡ ಸಿನಿಮಾದಲ್ಲಿ ಕಥೆಯೇ ಹೀರೋ. ನಿರ್ದೇಶಕರು ಬಂದು ನನಗೆ ಕಥೆ ಹೇಳಿದಾಗ ಬಹಳ ಇಂಪ್ರೆಸ್‌ ಆಯಿತು. ಈ ಕ್ಯಾರೆಕ್ಟರ್‌ಗೆ ಒಂದಷ್ಟು ಶೇಡ್‌ಗಳಿವೆ. ರುಕ್ಮಿಣಿ ಎನ್ನುವ ಮುಗ್ಧ ಯುವತಿಯ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ರೀತಿ ಹಲವು ಯುವತಿಯರು ಇರುತ್ತಾರೆ. ತಮ್ಮ ಜೀವನಕ್ಕಾಗಿ ಎಷ್ಟೇ ಕಷ್ಟವಿದ್ದರೂ ಒಂದು ಕಡೆ ಕೆಲಸ ಮಾಡಿಕೊಂಡು ಇರುತ್ತಾರೆ. ಉಳಿದೆಲ್ಲಾ ಚಿತ್ರಗಳಿಗಿಂತಲೂ ನನ್ನ ಲುಕ್‌, ಡೈಲಾಗ್‌ ಸೇರಿದಂತೆ ಹಲವು ವಿಚಾರಗಳಲ್ಲಿಇದು ಬೇರೆಯದೇ ರೀತಿಯಲ್ಲಿದೆ’ ಎಂದಿದ್ದಾರೆ ಅದಿತಿ ‘ರಂಗನಾಯಕಿ ಸಿನಿಮಾದ ನಂತರ ನನಗೆ ರುಕ್ಮಿಣಿ ಪಾತ್ರ ಸಿಕ್ಕಾಪಟ್ಟೆ ಕಾಡಿತು ಮತ್ತು ಚಾಲೆಂಜಿಂಗ್‌ ಆಗಿತ್ತು. ಹಳ್ಳಿ ಹುಡುಗಿಯ ಪಾತ್ರವಾದ್ದರಿಂದ ನನಗೆ ಇದು ಕನೆಕ್ಟ್ ಕೂಡ ಆಯಿತು. ನಾನು ಸಹ ಹಳ್ಳಿಯಿಂದಲೇ ಬಂದವಳು. ರುಕ್ಮಿಣಿ ಯಾವಾಗಲೂ ಕೃಷ್ಣನ (ಧನಂಜಯ) ಪ್ರೀತಿಯತ್ತ ಹೋಗುತ್ತಿರುತ್ತಾಳೆ. ಆಕೆಗೆ ಕೃಷ್ಣನೇ ಎಲ್ಲವೂ ಆಗಿರುತ್ತಾನೆ. ಸಿನಿಮಾ ಎಂಬುದು ನನಗೆ ಜೀವನ. ನನ್ನ ಮನಸ್ಸಿಗೆ ಹತ್ತಿರವಾದಂತಹ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತೇನೆ. ಅದು ಜನರಿಗೆ ಇಷ್ಟವಾಗುತ್ತದೆ. ಉತ್ತಮ ಕಲಾವಿದರ ಜತೆ ನಟಿಸುತ್ತಿರುವುದು ಸಹ ನನ್ನ ನಟನೆಯನ್ನು ಉತ್ತಮಗೊಳಿಸಿಕೊಳ್ಳಲು ಸಹಾಯ ಮಾಡಿದೆ. ರುಕ್ಮಿಣಿ ಸಹ ಅಂತಹದ್ದೊಂದು ಪಾತ್ರ’ ಎನ್ನುವುದು ಅದಿತಿಯವರ ಮಾತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ವರುಣ್ ಕಟ್ಟೀಮನಿ ನಿರ್ದೇಶನದ ಜವಾರಿ ಭಾಷೆಯ ‘ಬಯಲುಸೀಮೆ’ ರಿಲೀಸ್ ಗೆ ರೆಡಿ.

Wed Dec 28 , 2022
ಭಾಷೆಯ ಗಡಿ ಎಂಬ ಎಲ್ಲೆಯನ್ನು ಮೀರಿದ್ದು ಸಿನಿಮಾ. ಅದರ ಉದ್ದೇಶ ಒಂದೇ ಮನರಂಜನೆ. ಇದೀಗ ಅದೇ ಮನರಂಜನೆ ಉದ್ದೇಶ ಇಟ್ಟುಕೊಂಡು ಉತ್ತರ ಕರ್ನಾಟಕದ ಜವಾರಿ ಭಾಷೆಯ ಘಮ ಹೊತ್ತ ‘ಬಯಲು ಸೀಮೆ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.ವರುಣ್ ಕಟ್ಟೀಮನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬಯಲುಸೀಮೆ’ ಸಿನಿಮಾ ಹೆಸರೇ ಸೂಚಿಸುವಂತೆ ಪಕ್ಕಾ ಉತ್ತರ ಕರ್ನಾಟಕ ಸೊಗಡಿರುವ ಚಿತ್ರ. ರಗಡ್ ಕಥೆ ಈ ಸಿನಿಮಾದ ಜೀವಾಳ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರದ ಕಥಾವಸ್ತು. […]

Advertisement

Wordpress Social Share Plugin powered by Ultimatelysocial