ಈ ಮೂರು ಸೊಪ್ಪು ಸೇವಿಸಿದರೆ ಸಾಕು ನಿಯಂತ್ರಣಕ್ಕೆ ಬರುತ್ತದೆ ಡಯಾಬಿಟೀಸ್.

 

 

 

ಮಧುಮೇಹವು ಒಬ್ಬ ವ್ಯಕ್ತಿಯನ್ನು ಒಳಗಿನಿಂದಲೇ ಕುಗ್ಗಿಸಿಬಿಡುತ್ತದೆ. ಮಧುಮೇಹವಿದ್ದಾಗ ನಿಶ್ಯಕ್ತಿ ಬಹಳವಾಗಿ ಕಾಡುತ್ತದೆ. ಪದೇ ಪದೇ ಬಾಯಾರುವುದು, ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕು ಅನ್ನಿಸುವುದು, ಸ್ವಲ್ಪ ಕೆಲಸ ಮಾಡಿದರೂ ಅತಿಯಾಗಿ ಸುಸ್ತಾಗುವುದು ಹೀಗೆ ನಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.

ಆದರೂ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೂ ಸಾಕು ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹಿಗಳು ಯಾವಾಗಲೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇದು ಅಷ್ಟು ಕಷ್ಟದ ಕೆಲಸವೂ ಅಲ್ಲ.

ಈ ಎಲೆಗಳನ್ನು ತಿನ್ನುವ ಮೂಲಕ ಸಕ್ಕರೆ ಮಟ್ಟ ನಿಯಂತ್ರಿಸಬಹುದು :
ಆಹಾರ ತಜ್ಞರ ಪ್ರಕಾರ ,ಮಧುಮೇಹ ರೋಗಿಗಳು3 ರೀತಿಯ ಹಸಿರು ಎಲೆಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ಸುಲಿನ್ ಪ್ಲಾಂಟ್:
ಡಯೆಟಿಷಿಯನ್ ಆಯುಷಿ ಪ್ರಕಾರ, ಪ್ರತಿದಿನ ಸುಮಾರು ಒಂದು ತಿಂಗಳ ಕಾಲ ಇನ್ಸುಲಿನ್ ಸಸ್ಯದ ಎಲೆಯನ್ನು ಅಗಿಯುತ್ತಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು. ಹೀಗೆ ಮಾಡುವುದಕ್ಕೆ ಮೊದಲು ಸಸ್ಯದ ಎಲೆಗಳನ್ನು ಹಲವಾರು ದಿನಗಳವರೆಗೆ ಸೂರ್ಯನಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ಪುಡಿ ಮಾಡಿ ಸೇವಿಸಬೇಕು. ಈ ಸಸ್ಯದ ಎಲೆಗಳಲ್ಲಿ ಪ್ರೋಟೀನ್‌ ಉತ್ಕರ್ಷಣ ನಿರೋಧಕಗಳು, ಆಸ್ಕೋರ್ಬಿಕ್ ಆಮ್ಲ, ಬೀಟಾ ಕ್ಯಾರೋಟಿನ್, ಕಬ್ಬಿಣ, ಕೊರೊಸೊಲಿಕ್, ಟೆರ್ಪಿನಾಯ್ಡ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಪೋಷಕಾಂಶಗಳು ಕಂಡುಬರುತ್ತವೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಸಬ್ಬಸಿಗೆ ಸೊಪ್ಪು :
ಮಧುಮೇಹದಿಂದ ಬಳಲುತ್ತಿರುವವರಿಗೆ, ಸಬ್ಬಸಿಗೆ ಸೊಪ್ಪು ವರದಾನವೇ ಸರಿ. ಇದನ್ನು ನಿಯಮಿತವಾಗಿ ಸೇವಿಸಬೇಕು. ಆಗ ಮಾ ತ್ರರಕ್ತದಲ್ಲಿನ ಗ್ಲೂಕೋಸ್ಮಟ್ಟವನ್ನು ಸುಲಭವಾಗಿ ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಈ ಸಸ್ಯವನ್ನು ಮನೆಯಲ್ಲಿ ಬೆಳೆಸಬಹುದು. ಬೇರೆ ಬೇರೆ ರೀತಿಯ ಅಡುಗೆಯಲ್ಲಿ ಈ ಸೊಪ್ಪನ್ನು ಬಳಸಬಹುದು.

ಅಲೋವೆರಾ :
ಅಲೋವೆರಾ ಎಲೆಗಳಿಂದ ತೆಗೆದ ಜೆಲ್ ಅನ್ನು ಸೌಂದರ್ಯ ವರ್ಧಕವಾಗಿ ಬಳಸಿರಬಹುದು. ಆದರೆ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡಾ ಕಡಿಮೆ ಮಾಡಬಹುದು. ನಿಯಮಿತವಾಗಿ ಆಲೋವಿರಾ ಎಲೆಗಳಿಂದ ತೆಗೆದ ಜೆಲ್ ಸೇವಿಸುತ್ತಿದ್ದರೆ ಶೀಘ್ರದಲ್ಲಿಯೇ ವ್ಯತ್ಯಾಸ ತಿಳಿಯುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

‘ಬಿಗ್ ಬಾಸ್’ ಸ್ಪರ್ಧಿಗಳ ಸಂಕ್ರಾಂತಿ ಸಂಭ್ರಮದ ಫೋಟೋಗಳು

Fri Jan 13 , 2023
‘ಬಿಗ್ ಬಾಸ್’ ಮನೆಯಲ್ಲಿ ಇದ್ದಷ್ಟು ದಿನ ಆತ್ಮೀಯತೆ, ಸ್ನೇಹ ಇದ್ದೇ ಇರುತ್ತೆ. ‘ಬಿಗ್ ಬಾಸ್’ ಮನೆಯಿಂದ ಹೊರಬಂದ್ಮೇಲೂ ಅದೇ ಸ್ನೇಹ, ಆತ್ಮೀಯತೆ ಮುಂದುವರಿಯೋದು ಅಪರೂಪ. ಇತ್ತೀಚೆಗಷ್ಟೇ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಸ್ಪರ್ಧಿಗಳಾದ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಭೇಟಿಯಾಗಿದ್ದರು. ಇದೀಗ ಕಾವ್ಯಶ್ರೀ ಗೌಡ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ರನ್ನರ್ ರಾಕೇಶ್ ಅಡಿಗ ಹಾಗೂ ವಿನ್ನರ್ ರೂಪೇಶ್ ಶೆಟ್ಟಿ […]

Advertisement

Wordpress Social Share Plugin powered by Ultimatelysocial