ಮಾವಿನ ಎಲೆಯಿಂದ ಮಧುಮೇಹ ಸುಧಾರಿಸುತ್ತೆ..!

ಮಾವಿನ ಎಲೆಗಳನ್ನು ಪ್ರತಿಯೊಬ್ಬರು ಹೆಚ್ಚಾಗಿ ಮದುವೆ, ಹಬ್ಬ ಕಾರ್ಯಕ್ರಮಗಳಲ್ಲಿ ತೋರಣಗಳಿಗೆ ಬಳಸುತ್ತೇವೆ. ಮಾವಿನ ಎಲೆಯಿಲ್ಲದೆ ಮನೆಗಳಲ್ಲಿ ಯಾವ ಹಬ್ಬನೂ ಆಗುವುದಿಲ್ಲ. ಹಳ್ಳಿಗಳಲ್ಲಿ ಅಷ್ಟು ಮಾವಿನ ಎಲೆಗಳ ಅವಶ್ಯಕತೆ ತುಂಬಾ ಇದೆ. ಆದರೆ ಇದು ಆರೋಗ್ಯಕ್ಕೂ ಒಳ್ಳೆಯದರು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.

ಹೌದು ಮಾವಿನ ಎಲೆಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ನಮ್ಮ ದೇಹಕ್ಕೆ ಅಗತ್ಯವಿರುವ ಫ್ಲೇವನಾಯ್ಡ್ಗಳು ಮತ್ತು ಫಿನಾಲ್ಗಳಂತಹ ಉತ್ಕರ್ಷಣ ನಿರೋಧಕಗಳಿವೆ. ಆರೋಗ್ಯ ತಜ್ಞರ ಪ್ರಕಾರ, ಮಾವಿನ ಎಲೆಗಳು ಮಧುಮೇಹ ಸೇರಿದಂತೆ ಅನೇಕ ರೋಗಗಳನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿವೆ. ಹಾಗಾದರೆ, ಮಾವಿನ ಎಲೆಗಳ ಆರೋಗ್ಯ ಪ್ರಯೋಜನಗಳು ಯಾವುವು? ಉತ್ತಮ ಆರೋಗ್ಯಕ್ಕಾಗಿ ಮಾವಿನ ಎಲೆಗಳನ್ನು ಹೇಗೆ ಬಳಸುವುದು ಎಂದು ತಿಳಿದುಕೊಳ್ಳೊಣ

ಮಾವಿನ ಎಲೆಗಳಲ್ಲಿ ಆರೋಗ್ಯ ಮದ್ದು
* ಮಧುಮೇಹ: ಮಧುಮೇಹಿಗಳಿಗೆ ಮಾವಿನ ಎಲೆಗಳು ವರದಾನವಾಗಿದೆ. ಮಾವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
* ಬಿಪಿ: ಮಾವಿನ ಎಲೆಗಳು ಸಕ್ಕರೆಯನ್ನು ಮಾತ್ರವಲ್ಲದೆ ಬಿಪಿಯನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿವೆ. ಮಾವಿನ ಎಲೆಗಳ ನೀರನ್ನು ಕುದಿಸಿ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
* ಹೊಟ್ಟೆ ಹುಣ್ಣು: ಹೊಟ್ಟೆ ಹುಣ್ಣಿಗೆ ಚಿಕಿತ್ಸೆ ನೀಡಲು ಮಾವಿನ ಎಲೆಗಳು ತುಂಬಾ ಪರಿಣಾಮಕಾರಿ.
* ಕ್ಯಾನ್ಸರ್: ಮಾವಿನ ಎಲೆಗಳಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಸಮೃದ್ಧವಾಗಿವೆ. ಕ್ಯಾನ್ಸರ್ ನಂತಹ ರೋಗಗಳಿಗೆ ಮುಖ್ಯ ಕಾರಣವಾದ ಫ್ರೀ ರ್ಯಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟುವ ಸಾಮರ್ಥ್ಯವನ್ನು ಮಾವಿನ ಎಲೆಗಳು ಹೊಂದಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

An Update On Practical Online Mathematics For Kids Solutions

Sat Mar 11 , 2023
Have you ever observed that your kids tend to neglect about 2-three months of mathematics during interim breaks? Right solutions win additional time, and the questions are dynamically generated, so children get new questions every time they play. This may be frustrating for college Math Practice Websites students who prefer […]

Advertisement

Wordpress Social Share Plugin powered by Ultimatelysocial