ಹಾಲು ಒಕ್ಕೂಟ ಕ್ಯಾಂಪ್ ಆಫೀಸ್ ನಿರ್ಮಾಣಕ್ಕೆ ನಿವೇಶನ ಖರೀದಿಯಲ್ಲಿ ಅವ್ಯವಹಾರ ಬೈರೆಡ್ಡಿ ಆರೋಪ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಕ್ಯಾಂಪ್ ಆಫೀಸ್ ಸ್ಥಳೀಯ ಕಚೇರಿ ನಿರ್ಮಾಣ ಮಾಡಲು ನಿವೇಶನ ಖರೀದಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಹಾಲಿ ನಿರ್ದೇಶಕ ಹನುಮೇಶ್ ರವರ ವಿರುದ್ಧ ಮಾಜಿ ನಿರ್ದೇಶಕ ಪಾಳ್ಯ ಬೈರೆಡ್ಡಿ ಆರೋಪಿಸುತ್ತಿದ್ದಾರೆ ಪಟ್ಟಣದ ಹೊರವಲಯದ ಪನಸಮಾಕನಹಳ್ಳಿ ಗ್ರಾಮದ ಬಳಿ ಒಕ್ಕೂಟದ ಹೆಸರಿನಲ್ಲಿ 10 ಎಕರೆ ಜಮೀನು ಇದ್ದು ಪಟ್ಟಣದಿಂದ ಕೇವಲ 2 ರಿಂದ 2.5 ಕಿ.ಮೀ ಅಂತರದಲ್ಲಿರುವ ಜಾಗದಲ್ಲಿ ನಿರ್ಮಾಣ ಮಾಡಬಹುದಿತ್ತು ಆದರೆ ಹಾಲಿ ನಿರ್ದೇಶರ ಸಂಬಂದಿಗಳು ನಿವೇಶನವನ್ನು 3040 ಅಡಿ ಖರೀದಿಸಿದ್ದು ಒಂದು ಸ್ಕೊಯರ್ ಫೀಟ್ 2200 ರೂಪಾಯಿಗೆ ನಿಗದಿ ಮಾಡಿ ಬೋರ್ಡ್ ಮೀಟಿಂಗ್ ನಲ್ಲಿ ಅನುಮೋದನೆ ಮಾಡಿಸಿದ್ದಾರೆ ಆದರೆ ಕ್ಯಾಂಪ್ ಆಫೀಸ್ ಗೆ ಖರೀದಿ ಮಾಡಿರುವ ನಿವೇಶನದ ಒಂದು ಸ್ಕೊಯರ್ ಫೀಟ್ 600ರಿಂದ 800 ರೂಪಾಯಿಗಳ ಬೆಲೆಯಿದ್ದು ನಿವೇಶನ ಖರೀದಿಯಲ್ಲಿ 30 ರಿಂದ 35 ಲಕ್ಷ ಅವ್ಯವಹಾರವಾಗಿದೆಯೆಂದು ಮಾಜಿ ಹಾಲು ಒಕ್ಕೂಟದ ನಿರ್ದೇಶಕ ಬೈರೆಡ್ಡಿ ಆರೋಪಿಸಿ ಕೂಡಲೇ ಒಕ್ಕೂಟದವರು ಹಾಗೂ ಆರ್ ಸಿ ಎಸ್ ನವರು ಕೂಡಲೇ ರದ್ದು ಮಾಡಬೇಕೆಂದು ಮನವಿ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ಸವ 2023 ಫೆಬ್ರವರಿ 24 ರಿಂದ 26ರ ತನಕ ಕಲಬುರಗಿಯಲ್ಲಿ ನಡೆಯಲಿದೆ.

Fri Feb 3 , 2023
ಉತ್ಸವ 2023 ಫೆಬ್ರವರಿ 24 ರಿಂದ 26ರ ತನಕ ಕಲಬುರಗಿಯಲ್ಲಿ ನಡೆಯಲಿದೆ. ಉತ್ಸವದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಉತ್ಸವದ ಸಂಪೂರ್ಣ ಖರ್ಚು-ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಭರಿಸಲಿದೆ. ಕಲ್ಯಾಣ ಕರ್ನಾಟಕದ ಕಲೆ, ಸಂಸ್ಕೃತಿ ಹಾಗೂ ಸ್ಥಳೀಯ ಪರಂಪರೆ ಅನಾವರಣಗೊಳಿಸುವ ಮೂರು ದಿನಗಳ ಕಲ್ಯಾಣ ಕರ್ನಾಟಕ ಉತ್ಸವವನ್ನು ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ಕಲಬುರಗಿಯಲ್ಲಿ ವಿ. ವಿ. ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ […]

Advertisement

Wordpress Social Share Plugin powered by Ultimatelysocial