ಚಿನ್ನಕ್ಕಿಂತ ಅತ್ಯಮೂಲ್ಯವಾದ ವಸ್ತು ಎಂದರೆ ‘ವಜ್ರ’

ಚಿನ್ನಕ್ಕಿಂತ ಅತ್ಯಮೂಲ್ಯವಾದ ವಸ್ತು ಎಂದರೆ ‘ವಜ್ರ’. ಅದಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾದರೂ, ಅಂತಾರಾಷ್ಟ್ರೀಯವಾಗಿ ಮಾತ್ರ ವಜ್ರದ ಮಾಫಿಯಾ ಜೋರಾಗಿದೆ. ಆಫ್ರಿಕಾದಲ್ಲೆ ಹೆಚ್ಚಾಗಿ ಸಿಗುವ ವಜ್ರಗಳು ದೊಡ್ಡ ತುಂಡಾಗಿ, ಸಣ್ಣ ತುಂಡುಗಳಾಗಿ ದೊರೆಯುತ್ತವೆ.ನೈಸರ್ಗಿಕವಾಗಿ ಕಲ್ಲಿದ್ದಲಿನಿಂದ ತಯಾರಾಗುವ ಇವುಗಳ ಬೆಲೆ ವಿಪರೀತ ಹೆಚ್ಚು.ಅತ್ಯಂತ ಗಟ್ಟಿ ವಸ್ತು ಎಂಬ ಹೆಗ್ಗಳಿಕೆಯು ವಜ್ರದ್ದೇ ಆಗಿದೆ. ವಿಶ್ವದಲ್ಲಿ ಐದು ವಜ್ರಗಳು ಭಾರಿ ಪ್ರಸಿದ್ಧ. ಆ ಪೈಕಿ ‘ಎನಿಗ್ಮಾ’ ಎಂಬ ವಜ್ರವು ಜಗತ್ತಿನಲ್ಲೇ ಅತ್ಯಂತ ದೊಡ್ಡ ವಜ್ರ ಎನಿಸಿದೆ. 555.55 ಕ್ಯಾರಾಟ್‌ಗಳದ್ದಾಗಿದೆ. 2006ರಲ್ಲಿ ಈ ವಜ್ರವು ಗಿನ್ನೆಸ್‌ ದಾಖಲೆಗೆ ಸೇರಿತು. ವಿಶೇಷ ಎಂದರೆ ಈ ವಜ್ರ ನಿರ್ಮಾಣವಾಗಿದ್ದು ಉಲ್ಕೆಯೊಂದು ಭೂಮಿ ಅಪ್ಪಳಿಸಿದ್ದರಿಂದ ಎನ್ನಲಾಗುತ್ತಿದೆ. ಅಂದಾಜು ಬೆಲೆ 32 ಕೋಟಿ ರೂ. ಎಂದು ನಿಗದಿಪಡಿಸಲಾಗಿಗೋಲ್ಡನ್‌ ಜ್ಯುಬಿಲಿ ಎನ್ನುವುದು ಜಗತ್ತಿನಲ್ಲೇ ಎರಡನೇ ಅತ್ಯಂತ ದೊಡ್ಡ ವಜ್ರ, 545.67 ಕೆರಾಟ್‌ ಇರುವ ಇದು ಥಾಯ್ಲೆಂಡ್‌ನ ಮಾಜಿ ದೊರೆ ಕಿಂಗ್‌ ಭೂಮಿಬೊಲ್‌ಗೆ ಅಚ್ಚುಮೆಚ್ಚಾಗಿತ್ತಂತೆ.ಮೂರನೇ ಅತ್ಯಂತ ದೊಡ್ಡ ವಜ್ರವು 530.20 ಕೆರಾಟ್‌ ಇದ್ದು, ಅದರ ಹೆಸರು ‘ಕಲ್ಲಿನಾನ್‌-1’. ವಜ್ರದ ಗಣಿಯ ಮಾಲೀಕ ಥಾಮಸ್‌ ಕಲ್ಲಿನಾನ್‌ ಅವರ ಸ್ಮರಣಾರ್ಥ ಈ ಹೆಸರು ವಜ್ರಕ್ಕೆ ಸಿಕ್ಕಿದೆ.ಮುಂದಿನ ದೊಡ್ಡ ವಜ್ರದ ಖ್ಯಾತಿಯನ್ನು ಹೊಂದಿರುವುವು ಎಕ್ಸಲ್‌ಸಿಯಾರ್‌ (972 ಕೆರಾಟ್‌) ಮತ್ತು ಕೊಹಿನೂರ್‌ (105.6 ಕೆರಾಟ್‌). ಆಂಧ್ರಪ್ರದೇಶದ ಕೊಲ್ಲೂರು ಗಣಿಯಲ್ಲಿ12ನೇ ಶತಮಾನದಲ್ಲಿ ಕೊಹಿನೂರ್‌ ಸಿಕ್ಕಿತ್ತು. 1849ರಲ್ಲಿ ಈ ವಜ್ರವು ಬ್ರಿಟನ್‌ ರಾಣಿ ವಿಕ್ಟೋರಿಯಾ ವಶಕ್ಕೆ ಹೋಯಿತು. ಈ ವಜ್ರದ ವಾರಸುದಾರತ್ವಕ್ಕಾಗಿ ಭಾರತ, ಪಾಕಿಸ್ತಾನ, ಇರಾನ್‌ ಮತ್ತು ಅಫಘಾಸನಿಸ್ತಾನ ಸರಕಾರಗಳು ಬೇಡಿಕೆ ಇಟ್ಟಿವೆ. ಆದರೆ, ಬ್ರಿಟನ್‌ ಸರಕಾರವು ಕಾನೂನಾತ್ಮಕವಾಗಿಯೇ ವಜ್ರವು ರಾಣಿಗೆ ಸೇರಿದೆ ಎಂದು ವಾದಿಸುತ್ತಲೇ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಸಗುಲ್ಲಾ ಮಾಡುವುದು ಹೇಗೆ: ಮಾರುಕಟ್ಟೆ ಶೈಲಿಯ ರಸಗುಲ್ಲಾ ಮಾಡಲು ಸಲಹೆಗಳು ಮತ್ತು ತಂತ್ರಗಳು

Sat Feb 12 , 2022
  ಇದನ್ನು ರಸಗುಲ್ಲಾ ಅಥವಾ ರೋಶೋಗೊಲ್ಲ, ಮಿಠಾಯಿ ಅಥವಾ ಮಿಷ್ಟಿ ಎಂದು ಕರೆಯಿರಿ, ಇದು ಸಿಹಿ ರುಚಿಯನ್ನು ಹೊಂದಿರುತ್ತದೆ. ಹೆಸರಷ್ಟೇ ಅಲ್ಲ, ರಸಗುಲ್ಲಾದ ಇತಿಹಾಸವೂ ವಿವಾದದಲ್ಲಿ ಮುಳುಗಿದೆ. ಬಂಗಾಳಿಗಳ ಪ್ರಕಾರ, ನೋಬಿನ್ ಚಂದ್ರ ದಾಸ್ 17 ನೇ ಶತಮಾನದಲ್ಲಿ ಎಲ್ಲೋ ರಸಗುಲ್ಲಾವನ್ನು ರಚಿಸಿದರು. ಪೋರ್ಚುಗೀಸರು ಭಾರತೀಯರನ್ನು ಕಾಟೇಜ್ ಚೀಸ್‌ಗೆ ಸಿಕ್ಕಿಸಿದ್ದರು. ಈ ಕಾಟೇಜ್ ಚೀಸ್ ಅಥವಾ ಚನ್ನದ ಮೃದುತ್ವವು ಬಂಗಾಳದ ಸಿಹಿ-ತಯಾರಕರನ್ನು ಪೆಟ್ಟಿಗೆಯಿಂದ ಹೊರಗೆ ಯೋಚಿಸುವಂತೆ ಮಾಡಿತು ಮತ್ತು ಮುಂಬರುವ […]

Advertisement

Wordpress Social Share Plugin powered by Ultimatelysocial