ದಿನೇಶ್ ಕಾರ್ತಿಕ್‌ಗಾಗಿ ಈ ತ್ಯಾಗಕ್ಕೆ ಸಿದ್ಧವಾಗಿದ್ದ ನಾಯಕ:

 

ಭಾನುವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಈ ಆವೃತ್ತಿಯಲ್ಲಿಯೇ ಎಸ್‌ಆರ್‌ಹೆಚ್ ವಿರುದ್ಧ ಅನುಭವಿಸಿದ್ದ ಹೀನಾಯ ಸೋಲಿಗೆ ಆರ್‌ಸಿಬಿ ಸೇಡು ತೀರಿಸಿಕೊಂಡಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ ಪಂದ್ಯವನ್ನು ಸಂಪೂರ್ಣವಾಗಿ ಅಂತಿಮ ಕ್ಷಣದವರೆಗೂ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಆರಂಭಿಕನಾಗಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ನಿಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದರು. ಆದರೆ ಒಂದು ಹಂತದಲ್ಲಿ ತಾನು ದಿನೇಶ್ ಕಾರ್ತಿಕ್‌ಗಾಗಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳೂವ ಬಗ್ಗೆ ಯೋಚಿಸಿದ್ದೆ ಎಂದಿದ್ದಾರೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್. ಪಂದ್ಯದ ಮುಕ್ತಾಯದ ಬಳಿಕ ಫಾಫ್ ಈ ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದರು.

ಹಾಗಾದರೆ ಫಾಪ್ ಡು ಪ್ಲೆಸಿಸ್ ಎಸ್‌ಆರ್‌ಹೆಚ್ ವಿರುದ್ಧದ ಗೆಲುವಿನ ನಂತರ ಹೇಳಿದ್ದೇನು? ಮುಂದೆ ಓದಿ..

ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡಿಕೆಈ ಬಾರಿಯ ಆವೃತ್ತಿಯಲ್ಲಿ ಅಂತಿಮ ಹಂತದಲ್ಲಿ ಆರ್‌ಸಿಬಿ ತಂಡದ ಸ್ಕೋರ್ ಗತಿಯನ್ನು ಹೆಚ್ಚಿಸುವಲ್ಲಿ ದಿನೇಶ್ ಕಾರ್ತಿಕ್ ಬಹಳ ದೊಡ್ಡ ಪಾತ್ರವಹಿಸುತ್ತಿದ್ದಾರೆ. ಬಹುತೇಕ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ತಮ್ಮ ಅನುಭವವನ್ನು ಅದ್ಭುತವಾಗಿ ಬಳಸಿಕೊಂಡು ಮಿಂಚಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ಡಿಕೆ ಕೇವಲ 8 ಎಸೆತಗಳನ್ನು ಎದುರಿಸಿ ಭರ್ಜರಿ 30 ರನ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕಾರಣದಿಂದಾಗಿ ಆರ್‌ಸಿಬಿ 193 ರನ್‌ಗಳ ಬೃಹತ್ ಗುರಿಯನ್ನು ನೀಡಲು ಸಾಧ್ಯವಾಗಿತ್ತು. ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ಫಾಫ್ ಡು ಪ್ಲೆಸಿಸ್ ಭಾರೀ ಮೆಚ್ಚುಗೆಯ ಮಾತುಗಳನ್ನು ಆಡಿದರು. ಅಲ್ಲದೆ ಕುತೂಹಲಕಾರಿ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ.

ಡಿಕೆಗಾಗಿ ವಿಕೆಟ್ ಒಪ್ಪಿಸಲು ಚಿಂತಿಸಿದ್ದ ಫಾಫ್

“ದಿನೇಶ್ ಕಾರ್ತಿಕ್ ಅದ್ಭುತವಾಗಿ ಸಿಕ್ಸರ್ ಬಾರಿಸುತ್ತಿದ್ದಾರೆ. ಅಂತಿಮ ಹಂತದಲ್ಲಿ ಅವರು ಕ್ರೀಸ್‌ಗೆ ಇಳಿಯುವುದನನ್‌ಉ ನಾವು ಬಯಸುತ್ತಿದ್ದೆವು. ಆತ ಕ್ರೀಸ್‌ಗೆ ಇಳಿದು ಸಾಧ್ಯವಾದಷ್ಟು ಹೆಚ್ಚು ಕಾಲ ಬ್ಯಾಟಿಂಗ್ ಮಾಡುವುದನ್ನು ಬಯಸಿದ್ದೆವು. ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಔಟ್ ಆಗಲು ಪ್ರಯತ್ನಿಸುತ್ತಿದ್ದೆ. ಯಾಕೆಂದರೆ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ಗೆ ಇಳಿಯಬೇಕೆಂಬುದು ನನ್ನ ಆಲೋಚನೆಯಾಗಿತ್ತು. ಅಲ್ಲದೆ ನಾನು ರಿಟೈರ್ಡ್ ಔಟ್ ಆಗುವ ಬಗ್ಗೆಯೂ ಯೋಚಿಸಿದ್ದೆ. ಅಷ್ಟರಲ್ಲಿ ನಾವು ಒಂದು ವಿಕೆಟ್ ಕಳೆದುಕೊಂಡೆವು. ಡಿಕೆ ಅದ್ಭುಯವಾದ ಫಾರ್ಮ್‌ನಲ್ಲಿದ್ದಾರೆ. ಇದು ಕಠಿಣವಾದ ಪಿಚ್ ಆಗಿತ್ತು. ಸಾಕಷ್ಟು ಆಟಗಾರರು ಆರಂಭದಲ್ಲಿ ಚೆಂಡನ್ನು ಎದುರಿಸಲು ಪರದಾಡಿದ್ದರು” ಎಂದಿದ್ದಾರೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್.

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಫಾಫ್

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಭರ್ಜರಿ ಫಾರ್ಮ್ ಪ್ರದರ್ಶಿಸಿ ಮಿಂಚಿದ್ದಾರೆ. ಆಂಭಿಕ ಆಟಗಾರನಾಗಿ ಇಳಿದು ಫಾಫ್ 50 ಎಸೆತಗಳನ್ನು ಎದುರಸಿ 73 ರನ್‌ಗಳನ್ನು ಕಲೆ ಹಾಕುವ ಮೂಲಕ ತಂಡದ ದೊಡ್ಡ ಮೊತ್ತದಲ್ಲಿ ದೊಡ್ಡ ಪಾತ್ರವಹಿಸಿದರು. ಎರಡನೇ ವಿಕೆಟ್‌ಗೆ ಯುವ ಆಟಗಾರ ರಜತ್ ಪಾಟೀದಾರ್ ಜೊತೆಗೆ ಫಾಫ್ ಶತಕದ ಜೊತೆಯಾಟವನ್ನು ಆಡಿದರು.

ಬೌಲಿಂಗ್‌ನಲ್ಲಿ ಹಸರಂಗ ಮ್ಯಾಜಿಕ್

ಇನ್ನು ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ವನಿಂದು ಹಸರಂಗ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಮಿಂಚಿದ್ದಾರೆ. ನಾಲ್ಕು ಓವರ್‌ಗಳಲ್ಲಿ ಶ್ರೀಲಂಕಾದ ಈ ಬೌಲರ್ ಕೇವಲ 18 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಯಾವ ಹಂತದಲ್ಲಿಯೂ ಎಸ್‌ಆರ್‌ಹೆಚ್ ತಿರುಗಿ ಬೀಳಲು ಸಾಧ್ತವಾಗದಂತೆ ಮಾಡಿದರು. ಜೋಶ್ ಹೇಜಲ್‌ವುಡ್ ಕೂಡ ಈ ಪಂದ್ಯದಲ್ಲಿ 2 ವಿಕೆಟ್ ಸಂಪಾದಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ!

Mon May 9 , 2022
ಮಧ್ಯ ಪ್ರದೇಶ: ಹಣ (Money) ಕಳೆದು ಹೋಗಿದೆ, ಚಿನ್ನ (Gold), ಆಭರಣ (Jewelry) ಕಳುವಾಗಿದೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು (Vehicles) ಕಳುವಾಗಿದೆ ಅಂತ ಜನಸಾಮಾನ್ಯರು ದಿನನಿತ್ಯ ಪೊಲೀಸರಿಗೆ (Police) ದೂರು (Complaint) ಕೊಡುವುದನ್ನು ಕೇಳಿದ್ದೇವೆ. ಕೆಲವು ಕೇಸ್‌ಗಳಲ್ಲಿ (Case) ಕಳೆದು ಹೋದ ವಸ್ತುಗಳನ್ನು ಪೊಲೀಸರು ಹುಡುಕಿ ಕೊಟ್ಟು, ಕಳ್ಳರಿಗೆ ಹೆಡೆಮುರಿ ಕಟ್ಟಿರುತ್ತಾರೆ. ಆದರೆ ಕೆಲವು ಪ್ರಕರಣದಲ್ಲಿ ಕಳ್ಳರೂ ಸಿಗೋದಿಲ್ಲ, ಕಳ್ಳತನವಾದ ವಸ್ತುವೂ ಸಿಗುವುದಿಲ್ಲ. ಆದರೆ ಮಧ್ಯ ಪ್ರದೇಶದಲ್ಲೊಂದು (Madhya […]

Advertisement

Wordpress Social Share Plugin powered by Ultimatelysocial