ದಿಶಾ ರಮೇಶ್ ನಟನೆಯ ‘ದಿ’ ಟ್ರೈಲರ್ ಬಿಡುಗಡೆ.

ಹಿರಿಯ ಕಲಾವಿದ, ರಂಗಭೂಮಿ ಪೋಷಕ  ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ನಾಯಕಿಯಾಗಿ ಕಾಣಿಸಿಕೊಂಡಿರುವ ” ದಿ”  ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಬಾರಿ ಸದ್ದು ಮಾಡಿದೆ.ವಿನಯ್ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗಿಯೂ ಕಾಣಸಿಕೊಂಡಿದ್ದಾರೆ.ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದೆ.ಲವ್ ಸ್ಟೋರಿ ಜೊತೆಗೆ  ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಮುಕ್ಕಾಲು ಭಾಗ  ಕಾಡಿನಲ್ಲಿ ಚಿತ್ರೀಕರಣಗೊಂಡಿದೆ ಎಂದರು ನಿರ್ದೇಶಕ ವಿನಯ್. ಸ್ನೇಹಿತರೆಲ್ಲ ಸೇರಿ ಚಿತ್ರ ನಿರ್ಮಾಣ ಮಾಡಿದ್ದೇವೆ. ‘ದಿ’ ಅಂದ್ರೆ ದಿವ್ಯ ಮತ್ತು ದೀಪಕ್. ಜೀವನದಲ್ಲಿ ಆಕಸ್ಮಿಕ ಘಟನೆಗಳು, ವೀಕೆಂಡ್ ನಲ್ಲಿ ಔಟಿಂಗ್ ಗೆಂದು ಕಾಡಿಗೆ ಹೋದ ಕ್ಯೂಟ್ ಲವರ್ಸ್ ಜೀವನದಲ್ಲಿ ಏನೇನು ಆಗುತ್ತೆ, ಅವರಿಗೆ ಗೊತ್ತಿಲ್ಲದೇ ಅವರ ಜೀವನದಲ್ಲಿ ಇನ್ಯಾರ ಪ್ರವೇಶ ಆಗುತ್ತೆ, ಮುಂದೆ ಆ ಲವರ್ಸ್ ಏನ್ ಆಗ್ತಾರೆ ಅನ್ನೋದು ಚಿತ್ರದ ಜೀವಾಳ ಎಂದರು.ಚಿತ್ರದಲ್ಲಿ ಆರು ಮುಖ್ಯ ಪಾತ್ರಗಳಿವೆ. ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ತೆರೆಗೆ ತರುವ ಉದ್ದೇಶವಿದೆ ಎಂದರು. ನಾಯಕಿ ದಿಶಾ ಮಾತನಾಡಿ ‘ದೇವರ ನಾಡಲ್ಲಿ’ ಚಿತ್ರ ಮಾಡಿದ್ದೆ‌. ಬಿಡುಗಡೆಗೆ ಸಿದ್ದವಿರುವ‘ಎಸ್. ಎಲ್. ವಿ’ ಚಿತ್ರದಲ್ಲಿ ನಟಿಸಿದ್ದೇನೆ.  ಲವ್ ಸ್ಟೋರಿ ಸಿನಿಮಾ. ತುಂಬಾ ಸರಳವಾಗಿ ಸಾಗುತ್ತೆ, ಆದರೆ ಹಲವು ತಿರುವುಗಳಿವೆ.ಚಿತ್ರವನ್ನು ಕಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು. ನಾಗೇಂದ್ರ ಅರಸ್ ಮಾತನಾಡಿ ಕಥೆ ಡಿಫ್ರೆಂಟ್ ಆಗಿದೆ. ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.ತುಮಕೂರು, ಮೈಸೂರು, ಮೂಡುಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಬೆಂಗಳೂರು, ಕೇರಳದಲ್ಲಿ ‘ ಚಿತ್ರೀಕರಣ ನಡೆಸಲಾಗಿದೆ. ಆಲನ್ ಭರತ್ ಕ್ಯಾಮೆರಾ, ಯುಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನವಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಲಮಂಡಳಿ ಪೈಪ್ ಲೈನ್ ಒಡೆದು ಕುಸಿದ ರಸ್ತೆ.

Mon Jan 30 , 2023
ಆರು ಅಡಿ ಅಳ, ಮೂರು ಅಡಿ ಅಗಲ ಬಾಯ್ದೆರೆದ ಗುಂಡಿ 15 ದಿನದ ಹಿಂದೆ ಪುಟ್ಟ ಗುಂಡಿ ರಸ್ತೆ ಇತ್ತು ಮೊನ್ನೆ ಲಾರಿ ಹೋದ ಮೇಲೆ ದೊಡ್ಡ ಗುಂಡಿಯಾಗಿ ಮಾರ್ಪಾಡು ಜಲಮಂಡಳಿ ಸಿಬ್ಬಂದಿ ಆಗಮನ ಜೆಸಿಬಿ ಮೂಲಕ ರಸ್ತೆ ದುರಸ್ತಿ ಕಾರ್ಯ ಆರಂಭ ದೊಡ್ಡ ಗುಂಡಿ ಬಿದ್ದರೂ ಕ್ಯಾರೆ ಅಂತಿಲ್ಲ ಈಗ ರಸ್ತೆ ಗುಂಡಿ ಬಿದ್ದ ಪಕ್ಕದಲ್ಲಿಯೇ ಮತ್ತೊಂದು ಗುಂಡಿ ಎರಡು ತಿಂಗಳಾದ್ರೂ ಮುಚ್ಚದ ರಸ್ತೆ ಗುಂಡಿ ಶಾಲೆ ಮುಂಭಾಗವೇ […]

Advertisement

Wordpress Social Share Plugin powered by Ultimatelysocial