ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:

ಇಂದು ಕೆಡಿಬಿ ಸಭೆ ನಡೆಸಿದ್ದೇನೆ. ಜನರ ಅಹವಾಲುಗಳನ್ನು ಆಲಿಸಿ ಅಧಿಕಾರಿಗಳ ಜತೆ ಪಾರದರ್ಶಕವಾಗಿ ಸಭೆ ನಡೆಸಿದ್ದೇನೆ. ಸರ್ಕಾರಿ ಕಚೇರಿಗಳ ಎಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅಧಿಕಾರಿಗಳ ಕೆಲಸ ಪರಾಮರ್ಶೆ ಮಾಡಲು, ಅಧಿಕಾರಿಗಳ ಕಾರ್ಯಕ್ರಮಗಳೇನು ಎಂಬ ಮಾಹಿತಿ ತಿಳಿಸಲು ಸೂಚನೆ ನೀಡಿದ್ದೇನೆ.

ಸಾರ್ವಜನಿಕರ ದೂರು ಹೆಚ್ಚಾಗಿದ್ದ ಪರಿಣಾಮ, ಶನಿವಾರ ರಜಾದಿನವಾದರೂ ಇಂದು ಬಂದು ಸಭೆ ಮಾಡಿದ್ದೇನೆ. ವ್ಯವಸ್ಥೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ.

ಈ ಸಭೆಗೆ ಬಂದವರು ಬಿಜೆಪಿ ಘನ ಸರ್ಕಾರ ನೇಮಿಸಿರುವ ಸದಸ್ಯರಾಗಿದ್ದಾರೆ. ಸರ್ಕಾರ ಎಲ್ಲ ಹುದ್ದೆಗಳಿಗೆ ಬೆಲೆ ನಿಗದಿ ಮಾಡಿರುವ ಪರಿಣಾಮ ಈ ರೀತಿ ಆಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಗೋಡೆ, ಮೇಜುಗಳನ್ನು ಮುಟ್ಟಿದರೆ ದುಡ್ಡು, ದುಡ್ಡು ಎಂಬ ಸದ್ದು ಬರುತ್ತಿದೆ. ಇದಕ್ಕೆ ನಮ್ಮ ತಾಲೂಕು ದೊಡ್ಡ ಸಾಕ್ಷಿಯಾಗಿದೆ.

ಜಮೀರ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವನ್ನು ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿಗೆ ತಿಳಿಸಲಾಗುವುದು. ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಗೇಪಲ್ಲಿ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ !?..

Sun Jul 24 , 2022
ಬಾಗೇಪಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಿದ್ಧು ಗೆ ಆಹ್ವಾನ .. ಸ್ವತಃ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಹ್ವಾನ .. ಬಾಗೇಪಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಆಸಕ್ತಿ ತೋರಿದ್ದಾರೆ .. ಅವರು ಈ ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸುವುದು ನನ್ನ ಸೌಭಾಗ್ಯ ಎಂದ ಶಾಸಕ ಸುಬ್ಬಾರೆಡ್ಡಿ .. ಬಾಗೇಪಲ್ಲಿ ಕ್ಷೇತ್ರ ಬಿಟ್ಟುಕೊಡಲು ನಾನು ಸಿದ್ಧ .. ಗುಡಿಬಂಡೆ ಪಟ್ಟಣದಲ್ಲಿ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಹೇಳಿಕೆ […]

Advertisement

Wordpress Social Share Plugin powered by Ultimatelysocial