ಈ ಚಪ್ಪಲಿಯ ಬೆಲೆ ಗೊತ್ತೆ?

 

 

ಟ ವಿಜಯ್‌ ಅತಿ ದೊಡ್ಡ ಮೊತ್ತದ ಸಂಭಾವನೆ ಪಡೆವ ಭಾರತದ ಕೆಲವೇ ಸ್ಟಾರ್ ನಟರಲ್ಲಿ ಒಬ್ಬರು. ದಕ್ಷಿಣ ಭಾರತದಲ್ಲಿಯಂತೂ ವಿಜಯ್‌ ಅವರಷ್ಟು ಸಂಭಾವನೆಯನ್ನು ರಜನೀಕಾಂತ್ ಸಹ ಪಡೆಯುವುದಿಲ್ಲ ಎನ್ನಲಾಗುತ್ತದೆ.ಭಾರಿ ಸಂಭಾವನೆ ಪಡೆದರೂ ಸಹ ವಿಜಯ್ ತಮ್ಮ ಸಿಂಪ್ಲಿಸಿಟಿಗೆ, ಸರಳತೆಗೆ ಜನಪ್ರಿಯರು.ಅದು ಹೌದೆಂದೂ ಎನಿಸುತ್ತದೆ. ಯಾವುದೇ ಕಾರ್ಯಕ್ರಮಕ್ಕೆಂದು ವಿಜಯ್ ಬಂದಾಗ ಬಹಳ ಸರಳವಾಗಿ ಬರುತ್ತಾರೆ. ಡಿಸೈನರ್ ಉಡುಪುಗಳಾಗಲಿ, ಸೂಟ್‌ಗಳಾಗಲಿ ಧರಿಸದೆ, ಸಾಧಾರಣ ಶರ್ಟ್-ಪ್ಯಾಂಟ್ ಚಪ್ಪಲಿ ಧರಿಸಿ ವಿಜಯ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಾರೆ.ಆದರೆ ವಿಜಯ್‌ರ ಈ ‘ಸರಳತೆ’ ಸಹ ಅದೆಷ್ಟು ದುಬಾರಿ ಎಂಬುದು ಹೆಚ್ಚು ಜನರಿಗೆ ಅರಿವಿರಲಿಕ್ಕಿಲ್ಲ. ಸಾಮಾನ್ಯ ಬಟ್ಟೆ, ಚಪ್ಪಲಿಯಂತೆ ಕಾಣುವ ವಿಜಯ್‌ ಧರಿಸುವ ಬಟ್ಟೆ, ಚಪ್ಪಲಿಗಳು ಸಹ ಭಾರಿ ದುಬಾರಿ ಆಗಿವೆ.ಇತ್ತೀಚೆಗೆ ನಟ ವಿಜಯ್‌, ಅಂಗವಿಕಲ ಅಭಿಮಾನಿಯೊಬ್ಬನನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಫೋಟೊಕ್ಕೆ ಫೋಸ್ ನೀಡಿರುವ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಸಹ ವಿಜಯ್ ಬಹಳ ಸರಳವಾಗಿ ಒಂದು ಸಾಮಾನ್ಯ ಶರ್ಟ್, ಕಪ್ಪು ಬಣ್ಣದ ಪ್ಯಾಂಟು ಕಾಲಿಗೆ ಸಾಮಾನ್ಯ ಎನಿಸುವ ಸ್ಲಿಪ್ಪರ್ ಧರಿಸಿದ್ದಾರೆ. ನೋಡಲು ಬಹಳ ಸಾಮಾನ್ಯದಂತೆ ಕಾಣುವ ಆ ಚಪ್ಪಲಿಯ ಬೆಲೆ ಕಡಿಮೆಯೇನಲ್ಲ.ಸಾಮಾನ್ಯ ವ್ಯಕ್ತಿ ಒಂದು ಜೊತೆ ಚಪ್ಪಲಿಗೆ ಕೊಡಬಹುದಾದ ಹಣವೆಷ್ಟು? 500 ರಿಂದ ಆರಂಭಿಸಿ ಸುಮಾರು 1000 ಅಥವಾ ಇನ್ನೂ ತುಸು ಹಣ ಹೆಚ್ಚಿತ್ತೆಂದರೆ 2000 ವರೆಗೂ ಕೊಡಬಹುದು. ಆದರೆ ವಿಜಯ್ ಧರಿಸಿರುವ ಚಪ್ಪಲಿಯ ಬೆಲೆ ಬರೋಬ್ಬರಿ 6000 ರುಪಾಯಿಗಳು. ವಿಜಯ್ ಧರಿಸಿರುವುವು ಬಿರ್ಕೆನ್ ಸ್ಟಾಕ್ ಹೆಸರಿನ ಬ್ರ್ಯಾಂಡ್‌ನ ಚಪ್ಪಲಿಗಳು, ಭಾರತೀಯರ ಸ್ಟೈಲ್‌ಗೆ ಹೊಂದಿಕೆ ಆಗುವ ಗುಣಮಟ್ಟದ ಚಪ್ಪಲಿಗಳನ್ನು ಈ ಬ್ರ್ಯಾಂಡ್ ತಯಾರಿಸುತ್ತದೆ. ವಿಜಯ್ ಧರಿಸಿರುವ ಚಪ್ಪಲಿಯೆ ಹೆಸರು ‘ಮಯಾರಿ ಬಿರ್ಕೊ’ ಎಂದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

"ಗುಲ್ಟು" ನವೀನ್ ಶಂಕರ್ "ಮೂಲತಃ ನಮ್ಮವರೇ".

Thu Dec 15 , 2022
“ಗುಲ್ಟು” ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನವೀನ್ ಶಂಕರ್ ನಾಯಕನಾಗಿ ನಟಿಸಿರುವ ಚಿತ್ರ “ಮೂಲತಃ ನಮ್ಮವರೇ”.ಕಿರಣ್ ಗೋವಿಂದರಾಜ್ ನಿರ್ಮಿಸಿ, ಚೇತನ್ ಭಾಸ್ಕರಯ್ಯ ನಿರ್ದೇಶಿಸಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚಿಗೆ ನಡೆಯಿತು.ರಂಗಭೂಮಿ ನಂಟಿರುವ ನನಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ. ಹಿಂದೆ ಕೆಲವು ಕಿರುಚಿತ್ರಗಳ ನಿರ್ದೇಶಿಸಿದ್ದೇನೆ‌‌. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಕಥೆ ಸಿದ್ದವಾದ ನಂತರ, ನಾಯಕನ‌ ಹುಡುಕಾಟದಲ್ಲಿದ್ದಾಗ ನವೀನ್ ಸಿಕ್ಕರು. ಆಗಷ್ಟೇ ಅವರ ” ಗುಲ್ಟು” ಚಿತ್ರ […]

Advertisement

Wordpress Social Share Plugin powered by Ultimatelysocial