ದೊಡ್ಡ ಮಗನಿಗೆ ಗೋಲ್ಡ್​ ಮೆಡಲ್​ ಕೊಟ್ಟಿದ್ದೆ. ಕಿರಿಯ ಮಗ ನವೀನ್​ ಹೀಗಾದ. ದುಃಖಿಸಿದ ರಾಜ್ಯಪಾಲರು

ಹಾವೇರಿ: ಯೂಕ್ರೇನ್​ನಲ್ಲಿ ಶೆಲ್‌ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್‌ ಗ್ಯಾನಗೌಡರ್‌ ನಿವಾಸಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭೇಟಿ ನೀಡಿ ಸಾಂತ್ವನ ಹೇಳಿದರು. ಯಾವುದಕ್ಕೂ ಹೆದರದೇ ಧೈರ್ಯದಿಂದಿರಿ.

 

ನಿಮ್ಮ ಜೊತೆಗೆ ನಾವಿದ್ದೇವೆ. ಸರಕಾರ ಗಟ್ಟಿಯಾಗಿ ನಿಲ್ಲಲಿದೆ ಎಂದು ರಾಜ್ಯಪಾಲರು ಧೈರ್ಯ ತುಂಬಿದರು.

ನವೀನ್‌ ತಂದೆ ಶೇಖರಗೌಡ ಮತ್ತು ತಾಯಿ ವಿಜಯಲಕ್ಷ್ಮೀ ಸೇರಿದ ಕುಟುಂಬಸ್ಥರಿಗೆ ಕೈ ಮುಗಿದು ನಮಸ್ಕರಿಸಿ ಸಾಂತ್ವನ ಹೇಳಿದರು. ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು, ಮಾರ್ಚ್ 21 ರಂದು ನವೀನ್‌ ಮೃತದೇಹ ಬಂದಾಗ ನಾನೂ ಬರಬೇಕು ಎಂದುಕೊಂಡಿದ್ದೆ. ಆದರೆ, ಮಧ್ಯಪ್ರದೇಶದಲ್ಲಿ ಮೊದಲೇ ಕಾರ್ಯಕ್ರಮ ನಿಗದಿ ಆಗಿದ್ದರಿಂದ ಬರಲು ಆಗಲಿಲ್ಲ. ಯಾವುದಕ್ಕೂ ಹೆದರಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು.

ಈ ವೇಳೆ ಮಾತನಾಡಿದ ಶೇಖರಗೌಡ ಅವರು, ಮಾರ್ಚ್​ 1ರಂದು ನವೀನ್​ ಮೃತಪಟ್ಟಾಗ ಆ ದಿನವೇ ರಾಜ್ಯಾಪಾಲರು ಕರೆ ಮಾಡಿ ಮಾತನಾಡಿದ್ದರು. ನನ್ನ ಹಿರಿಯ ಮಗ ಹರ್ಷನಿಗೆ ಇದೇ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು. ಕಿರಿಯ ಮಗನಿಗೆ ಹೀಗಾಗಿ ಹೋಯಿತು ಎಂದು ರಾಜ್ಯಪಾಲರು ದುಃಖಿಸಿದರು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಿಕಿ ಪಾಂಟಿಂಗ್ ನನ್ನ ಭುಜದ ಸುತ್ತ ತನ್ನ ತೋಳುಗಳನ್ನು ಹಾಕಿ ಹೇಳಿದರು, 'ಒಂದು ದಿನ, ನೀವು ಭಾರತಕ್ಕಾಗಿ ಆಡುತ್ತೀರಿ

Thu Mar 24 , 2022
ಇಂಡಿಯನ್ ಪ್ರೀಮಿಯರ್ ಲೀಗ್ ಬಹಳಷ್ಟು ಭಾರತೀಯ ಆಟಗಾರರ ವೃತ್ತಿಜೀವನವನ್ನು ರೂಪಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ನಂತರ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಬೆಳಕಿಗೆ ಬಂದರು. ರೋಹಿತ್ ಶರ್ಮಾ ನಗದು-ಸಮೃದ್ಧ ಲೀಗ್‌ನಲ್ಲಿ ನಾಯಕತ್ವ ಕೌಶಲ್ಯಗಳನ್ನು ಸುಧಾರಿಸುವ ಇನ್ನೊಬ್ಬ ಆಟಗಾರ, ಮತ್ತು ಅವರು ಈ ಸಮಯದಲ್ಲಿ ಭಾರತವನ್ನು ಸ್ವರೂಪಗಳಲ್ಲಿ ಮುನ್ನಡೆಸುತ್ತಿದ್ದಾರೆ. ಅವೇಶ್ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೊನೆಯ ಋತುವಿನಲ್ಲಿ 24 ವಿಕೆಟ್‌ಗಳನ್ನು ಗಳಿಸುವ ಮೂಲಕ […]

Advertisement

Wordpress Social Share Plugin powered by Ultimatelysocial