ಸದ್ಯದಲ್ಲೇ ಬರಲಿದೆ “ದೊಡ್ಡಹಟ್ಟಿ ಬೋರೇಗೌಡ” ಚಿತ್ರದ ಹಾಡು.

ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ “ದೊಡ್ಡಹಟ್ಟಿ ಬೋರೇಗೌಡ” ಚಿತ್ರ ಟ್ರೇಲರ್ ಮೂಲಕ ಜನಮನ ಗೆದ್ದಿದೆ. 2021 ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬಿಡುಗಡೆಗೂ ಪೂರ್ವದಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಹಾಡೊಂದು ಜನವರಿ 30 ರ ಸೋಮವಾರ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿರುವ ಈ ಹಾಡನ್ನು “ಸರಿಗಮಪ” ಖ್ಯಾತಿಯ ಮೆಹಬೂಬ್ ಸಾಬ್ ಹಾಡಿದ್ದಾರೆ.ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಬಿ.ಸಿ.ಶಶಿಕುಮಾರ್ ಹಾಗೂ ಕೆ.ಎಂ.ಲೋಕೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.”ತರ್ಲೆ ವಿಲೇಜ್”,”ಪರಸಂಗ” ಚಿತ್ರಗಳನ್ನು ನಿರ್ದೇಶಿಸಿದ್ದ ಕೆ‌.ಎಂ.ರಘು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಳ್ಳಿಯ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಲಾವಿದರಿಗೆ ಮೂರು ತಿಂಗಳು ವಿಶೇಷ ತರಬೇತಿ ನೀಡಲಾಗಿದೆ. ಶಿವಣ್ಣ ಬೀರಹುಂಡಿ,
ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವೀನಸ್ ನಾಗರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿ ಜೈಲಿಗೆ ಹೋದ ಪ್ರಯಾಣಿಕ!

Fri Jan 27 , 2023
ದುಬೈಯಿಂದ ಭಾರತಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿ ಜೈಲಿಗೆ ಹೋಗಿದ್ದಾನೆ! ವಿಮಾನ ವಿಳಂಬದಿಂದ ಅಸಮಧಾನಗೊಂಡಿದ್ದ ಮೋತಿ ಸಿಂಗ್ ರಾಥೋಡ್ ಈ ರೀತಿ ಟ್ವೀಟ್ ಮಾಡಿದ್ದಾರೆ. ದುಬೈನಿಂದ ಜೈಪುರಕ್ಕೆ ಮೋತಿ ಸಿಂಗ್ ಪ್ರಯಾಣಿಸುತ್ತಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ದೆಹಲಿಯತ್ತ ಹೊರಟಿತ್ತು. ಎಸ್ ಜಿ 58 ವಿಮಾನದ ಮೂಲಕ ದೆಹಲಿ ವಿಮಾನಕ್ಕೆ ಬಂದಿಳಿದಿದ್ದು, ಎಲ್ಲ ಕ್ಲಿಯರೆನ್ಸ್ ನಂತರ ಮತ್ತೆ ಜೈಪುರ್‌ಗೆ […]

Advertisement

Wordpress Social Share Plugin powered by Ultimatelysocial