BENGALURU:ವಾಹನ ಸವಾರರೇ ಎಚ್ಚರ, ISI ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದ್ರೆ ಬೀಳುತ್ತೆ ದಂಡ;

ಬೆಂಗಳೂರಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ (Two wheeler) ಸವಾರು ಆಫ್​ ಹೆಲ್ಮೆಟ್​ (Half helmet) ಧರಿಸಿಯೇ ಓಡಾಡ್ತಾರೆ. ಸುರಕ್ಷತೆಯ ಅರಿವಿಲ್ಲದೇ ಅದೆಷ್ಟೋ ಮಂದಿ ಆಫ್​ ಹೆಲ್ಮೆಟ್​ ಧರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಸುರಕ್ಷತೆಗಾಗಿಯೇ ಸಂಚಾರಿ ಪೊಲೀಸ್ (Traffic police) ಅಧಿಕಾರಿಗಳು ಗುಣಮಟ್ಟದ ಹೆಲ್ಮೆಟ್​ ಧರಿಸಲು ಸಲಹೆ ನೀಡ್ತಾರೆ.
ಆದ್ರೆ ನಮ್ಮ ಜನ ಮಾತ್ರ ಎಲ್ಲಿ ಹೆಲ್ಮೆಟ್​ ಧರಿಸದೆ ರೋಡಿಗಿಳಿದ್ರೆ ಪೊಲೀಸರು ದಂಡ (penalty) ಹಾಕ್ತಾರೋ ಅಂತ ಗೊಣಗುತ್ತಾ ಕಳಪೆ ಗುಣಮಟ್ಟದ ಹೆಲ್ಮೆಟ್ ಹಾಕಿ ಓಡಾಡ್ತಾರೆ. ಆದ್ರೆ ಇನ್ಮುಂದೆ ಇದು ನಡೆಯಲ್ಲ, ISI ಮಾರ್ಕ್​ ಇಲ್ಲದ ಹೆಲ್ಮೆಟ್ ಗಳನ್ನು ಬ್ಯಾನ್ ​ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ISI ಇಲ್ಲದ ಹೆಲ್ಮೆಟ್‌ಗಳ ಮೇಲೆ ಅಮಾನತುಗೊಂಡಿದ್ದ ನಿಷೇಧವನ್ನು ಟ್ರಾಫಿಕ್ ಪೊಲೀಸರು ಮತ್ತೆ ತರಲಿದ್ದಾರೆ. ಇನ್ಮುಂದೆ ಆಫ್​ ಹೆಲ್ಮೆಟ್ ಹಾಕಿ ರೋಡಿಗಿಳಿದ್ರೆ ದಂಡ ಬೀಳೋದು ಗ್ಯಾರೆಂಟಿ.

ಯಾವಾಗ ಜಾರಿಯಾಗುತ್ತೆ ಹೊಸ ರೂಲ್ಸ್​?

ರಾಜ್ಯದಲ್ಲಿ ಮತ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆ ಪೊಲೀಸ್​ ಇಲಾಖೆ ISI ಮಾರ್ಕ್​ ಇಲ್ಲದ ಹೆಲ್ಮೆಟ್​ಗಳನ್ನು ಬ್ಯಾನ್​ ಮಾಡಲು ಮುಂದಾಗಿದೆ. ಮುಂದಿನ 15 ದಿನಗಳ ಕಾಲ ಜನರಿಗೆ ಜಾಗೃತಿ ನೀಡಲಾಗುತ್ತೆ. ಆಫ್​ ಹೆಲ್ಮೆಟ್ ಧರಿಸೋ ಸವಾರರಿಗೆ ಎಚ್ಚರಿಕೆ ನೀಡಲಾಗುತ್ತೆ. ಬಳಿಕ ISI ಮಾರ್ಕ್​ ಇಲ್ಲದ ಹೆಲ್ಮೆಟ್​ಗಳನ್ನ ಧರಿಸುವವರಿಗೆ ದಂಡ ವಿಧಿಸಲಾಗುತ್ತೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್ ರವಿಕಾಂತೇಗೌಡ ತಿಳಿಸಿದ್ದಾರೆ. ಬೆಂಗಳೂರು ಹೆಲ್ಮೆಟ್ ರಹಿತ ಸವಾರರಿಗೆ 500 ರೂ ದಂಡ ವಿಧಿಸಲಾಗುತ್ತೆ. ಇದು ಹಿಂಬದಿ ಸವಾರರಿಗೂ ಅನ್ವಯಿಸುತ್ತೆ ಎಂದು ರವಿಕಾಂತೇಗೌಡ ಹೇಳಿದ್ದಾರೆ.

ಈ ಹಿಂದೆ ನಿಷೇಧ ವಾಪಸ್ ಪಡೆದಿದ್ದು ಯಾಕೆ?
ISI ಮಾರ್ಕ್ ಇಲ್ಲದ ಹೆಲ್ಮೆಟ್‌ಗಳ ಮೇಲಿನ ನಿಷೇಧವನ್ನು ಈ ಹಿಂದೆ ಟ್ರಾಫಿಕ್​ ಪೊಲೀಸ್ ಇಲಾಖೆ ಜಾರಿಗೊಳಿಸಿತು. ಆದರೆ ಈ ನಿಯಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಹಲವು ಪ್ರತಿಭಟನೆ ನಂತರ ನಿಷೇಧವನ್ನ ಹಿಂತೆಗೆದುಕೊಳ್ಳಲಾಯಿತು. ಇದಕ್ಕೆ ಕಾರಣ ಸ್ವತಃ ಪೊಲೀಸ್ ಸಿಬ್ಬಂದಿ ಅರ್ಧ ಅಥವಾ ಕ್ಯಾಪ್ ಹೆಲ್ಮೆಟ್ ಧರಿಸೋದು.

ರಾಜ್ಯದಲ್ಲಿ ಹೆಚ್ಚಿದ ಆಕ್ಸಿಡೆಂಟ್ ಕೇಸ್
ನಿಮ್ಹಾನ್ಸ್‌ನ ಡಾ ಗೌತಮ್ ಅವರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ #AskBTP ಸೆಷನ್‌ನಲ್ಲಿ ಮಾತನಾಡಿದ ರವಿಕಾಂತೇಗೌಡ ಈ ಕಾರ್ಯಕ್ರಮ ರಸ್ತೆ ಬಳಕೆದಾರರಲ್ಲಿ ಜಾಗೃತಿ ಮೂಡಿಸುವ ಮೊದಲ ಹೆಜ್ಜೆಯಾಗಿದೆ. ಮುಂದೆ, ನಾವು ರಸ್ತೆಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ ನಂತರ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಳಪೆ ಮಟ್ಟದ ಹೆಲ್ಮೆಟ್​ಗಳಿಂದ ಸಾವು-ನೋವು ಹೆಚ್ಚುತ್ತಿರುವುದರಿಂದ ನಿಷೇಧವನ್ನು ಜಾರಿಗೊಳಿಸುವ ಸಮಯ ಬಂದಿದೆ ಅಂತ ರವಿಕಾಂತೇಗೌಡ ತಿಳಿಸಿದ್ದಾರೆ.

ಈ ರಾಜ್ಯದಲ್ಲಿ ಹೆಲ್ಮೆಟ್ ಮೌಂಟೆಡ್ ಕ್ಯಾಮೆರಾ ಧರಿಸುವಂತಿಲ್ಲ, ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು!
ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕಡಿಮೆ ಗುಣಮಟ್ಟದ ಹೆಲ್ಮೆಟ್ ಧರಿಸಿರುವ ಬಗ್ಗೆ ಜನರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ರವಿಕಾಂತೇಗೌಡ, ಕಳೆದ ವರ್ಷ ಇದೇ ಅಪರಾಧಕ್ಕಾಗಿ 1,656 ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹೆಲ್ಮೆಟ್ ಅಗತ್ಯ ತೂಕ ಮತ್ತು ಆಯಾಮಗಳನ್ನು ನಿಗದಿಪಡಿಸಬೇಕಿದ್ದು, ಟ್ರಾಫಿಕ್ ಪೊಲೀಸರು ಸಂಬಂಧಿಸಿದ ಸರ್ಕಾರಿ ಇಲಾಖೆಗೆ ಪತ್ರ ಬರೆದಿದ್ದಾರೆ.

ISI ಹೆಲ್ಮೆಟ್ ನಿಮಗೆ ನೀಡುತ್ತೆ ಉತ್ತಮ ರಕ್ಷಣೆ
“ಪ್ರಬಲವಾದ ISI ಹೆಲ್ಮೆಟ್‌ಗಳು ಅಪಘಾತಗಳ ವಿರುದ್ಧ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಹೆಲ್ಮೆಟ್‌ಗಳು ಸಾವಿನ ವಿರುದ್ಧ 40-50% ರಕ್ಷಣೆ ನೀಡುತ್ತವೆ ತೀವ್ರಗಾಯಕ್ಕೆ 72% ರಕ್ಷಣೆಯನ್ನು ಒದಗಿಸುತ್ತವೆ ಎಂದು ರಸ್ತೆ ಸುರಕ್ಷತೆಯ ಕುರಿತು ಸಂಶೋಧನೆ ನಡೆಸಿದ ಡಾ.ಗೌತಮ್ ತಿಳಿಸಿದ್ದಾರೆ. 2021ರಲ್ಲಿ, ಹೆಲ್ಮೆಟ್ ಧರಿಸದ ಒಟ್ಟು 113 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ 84 ಮಂದಿ ಸವಾರರಾಗಿದ್ದರೆ, 29 ಮಂದಿ ಹಿಂಬದಿ ಸವಾರರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

DIRECTOR:ಸ್ಯಾಂಡಲ್ ವುಡ್ ನಿರ್ಮಾಪಕ ಉಮಾಪತಿ ಕೊಲೆಯತ್ನ ಪ್ರಕರಣ;

Sun Jan 23 , 2022
ಬೆಂಗಳೂರು : ನಿರ್ಮಾಪಕ ಉಮಾಪತಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ 16 ಹಾಗೂ 17ನೇ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ದರ್ಶನ್ ಹಾಗೂ ಸಂಜು ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದೆ. 2020ರ ಡಿಸೆಂಬರ್​ನಲ್ಲಿ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಪಕ ಉಮಾಪತಿ, ಸಹೋದರ ದೀಪಕ್, ರೌಡಿಶೀಟರ್ ಸೈಕಲ್ ರವಿ ಹತ್ಯೆಗೆ ಸಂಚು ರೂಪಿಸಿ ಮಾರಕಾಸ್ತ್ರ ಹಿಡಿದು 15ಕ್ಕಿಂತ […]

Advertisement

Wordpress Social Share Plugin powered by Ultimatelysocial