2022ರ ಆರಂಭದಲ್ಲಿ ಮೂರು ರಾಶಿಗಳ ಮೇಲೆ ಶನಿದೇವನ ಕೃಪಾಕಟಾಕ್ಷ

ಶನಿ ದೇವರ ವಕ್ರದೃಷ್ಟಿ ಬೀರಿದರೆ ಜೀವನದಲ್ಲಿ ಪಡಬಾರದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅದೇ ಉತ್ತಮ ಪರಿಣಾಮ ಬೀರಿದರೆ ಸಕಲ ಸಂಪತ್ತು ನಿಮ್ಮದಾಗಲಿದೆ. 2022ರಲ್ಲಿ ಈ ಮೂರು ರಾಶಿಗಳ ಶನಿ ಪ್ರಭಾವ ತೀವ್ರವಾಗಿರುತ್ತದೆ.

ರಾಶಿ ಚಕ್ರ ಚಿಹ್ನೆಗೆ ಅನುಗುಣವಾಗಿ ಫಲಾಫಲ ಸಿಗಲಿದೆ.

ಕೆಲಸದಲ್ಲಿ ಪ್ರಗತಿ, ಉತ್ತಮ ಅವಕಾಶಗಳು ಸಿಗಲಿವೆ. ಅಂದಹಾಗೆ ಏಪಿಲ್‌ ನಂತರ ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶವಾಗುವುದರಿಂದ ಸಾಕಷ್ಟು ಬದಲಾವಣೆಗಳಾಗಲಿದೆ. ಅಂದಹಾಗೆ 2022ರಲ್ಲಿ ಈ ಮೂರು ರಾಶಿಯವರ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ.

 

ಮೇಷ ರಾಶಿ
ಈ ರಾಶಿಯವರ ಬಗ್ಗೆ ಹೇಳುವುದಾದರೆ ಶನಿಯ ಆಗಮನ ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಲಿದೆ. ಅವರ ಜೀವನ ಸಾಕಷ್ಟು ಸಂತೋಷದಿಂದ ಕೂಡಿರಲಿದೆ. ಹಣದ ಕೊರತೆ ಇರುವುದಿಲ್ಲ. ಇಷ್ಟಾರ್ಥಗಳು ನೆರವೇರಲಿದೆ. ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಉದ್ಯೋಗದಲ್ಲಿ ಬಡ್ತಿ, ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.

 

ವೃಷಭ ರಾಶಿ
ಏಪ್ರಿಲ್‌ ನಂತರ ಮಕರ ರಾಶಿಯಿಂದ ಕುಂಭ ರಾಶಿಗೆ ಶನಿದೇವನ ಪ್ರವೇಶವಾದ ಬಳಿಕ ಈ ರಾಶಿಯವರಿಗೆ ಸಾಕಷ್ಟು ಒಳಿತಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣ ಗಳಿಸುವ ದೊಡ್ಡ ಅವಕಾಶ ಹುಡುಕಿಕೊಂಡು ಬರಲಿದೆ. ಸ್ಥಗಿತಗೊಂಡಿದ್ದ ಕಾರ್ಯಗಳು ಪೂರ್ಣಗೊಳ್ಳಲಿದೆ. ಮನೆ, ವಾಹನ ಖರೀದಿ ಮಾಡುವ ಬಗ್ಗೆ ಯೋಚಿಸುವಿರಿ. ಸಂತೋಷದಿಂದ ಜೀವನ ನಡೆಸುವಿರಿ.

 

ಧನು ರಾಶಿ
ಈ ರಾಶಿಯವರ ಬಗ್ಗೆ ಹೇಳುವುದಾದರೆ ಶನಿಯ ಪ್ರಭಾವ ಉತ್ತಮವಾಗಿರುತ್ತದೆ. ಆಸ್ತಿ ಸಿಗಲಿದೆ. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಿರಿ. ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿಬರಲಿದೆ. ಏಪ್ರಿಲ್ ನಂತರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಾಲ ತೀರಿಸು ಅಂತ ಪತ್ರ ಬರೆದು ಮಂಗಳೂರಿನಲ್ಲಿ ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆ

Sun Dec 26 , 2021
ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಬಿಟೆಕ್ ವಿದ್ಯಾರ್ಥಿಯ ಶವ ಮಂಗಳೂರಿನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪತ್ತೆಯಾಗಿದೆ. ಮೃತನನ್ನು ಬಿಹಾರ ಮೂಲದ ಸೌರವ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಈತ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿದ್ಯಾಭ್ಯಾಸ ಮಾಡುತ್ತಿದ್ದ. ಸೌರವ್ ಸಾವಿಗೂ ಮುನ್ನ ತಂದೆಗೆ ಬರೆದಿರುವ ಡೆತ್ ನೋಟ್ ನಲ್ಲಿ 1 ಲಕ್ಷ ರೂ. ಸಾಲ ತೀರಿಸುವಂತೆ ಮನವಿ ಮಾಡಿದ್ದಾನೆ. ಸೌರವ್ ಬ್ಯಾಂಕ್ ಖಾತೆಯಲ್ಲಿ 46,000 […]

Advertisement

Wordpress Social Share Plugin powered by Ultimatelysocial