Breaking news:ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ?

 ದಕ್ಷಿಣ ಭಾರತದ ಪ್ರಸಿದ್ಧ ನಟ ನಾಗಚೈತನ್ಯರೊಂದಿಗೆ ನಾಲ್ಕು ವರ್ಷಗಳ ದಾಂಪತ್ಯ ನಡೆಸಿದ್ದ ನಟಿ ಸಮಂತಾ ಕಳೆದ ಅಕ್ಟೋಬರ್‌ 2ರಂದು ದಾಂಪತ್ಯ ಮುರಿದುಕೊಂಡಿದ್ದಾಗಿ ಘೋಷಿಸಿದ್ದರು. ಆದರೆ ಇದೀಗ ಆ ಜೋಡಿ ಮತ್ತೆ ಒಂದಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಅದಕ್ಕೆ ಕಾರಣ ಸಮಂತಾರ ನಡೆ. ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕವೇ ವಿಚ್ಛೇದನ ವಿಚಾರವನ್ನು ತಿಳಿಸಿದ್ದ ಸಮಂತಾ ಇದೀಗ ಆ ಪೋಸ್ಟ್‌ ಅನ್ನೇ ಡಿಲೀಟ್‌ ಮಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಪೋಸ್ಟ್‌ ಡಿಲೀಟ್‌ ಮಾಡಿದ್ದಕ್ಕೆ ಕಾರಣ ಏನು ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ಹೀಗೆ ಮಾಡಿರುವುದರಿಂದಾಗಿ ಅವರಿಗೆ ಪತಿಯ ಮೇಲಿನ ಮುನಿಸು ಕಡಿಮೆಯಾಗಿದ್ದು, ಮತ್ತೆ ಅವರಿಬ್ಬರು ಒಂದಾಗಬಹುದು ಎನ್ನುವ ಆಸೆ ಅಭಿಮಾನಿಗಳದ್ದು. ವಿಚ್ಛೇದನದ ಬಗ್ಗೆ ನಾಗಚೈತನ್ಯ ಅವರು ಮಾಡಿದ್ದ ಪೋಸ್ಟ್‌ ಮಾತ್ರ ಹಾಗೆಯೇ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಶ್ರೀದೇವಿ ಪುತ್ರಿ ಜಾಹ್ನವಿ;

Sat Jan 22 , 2022
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗಾ ಗ್ಲಾಮರಸ್ ಫೋಟೊಗಳನ್ನಷ್ಟೇ ಅಲ್ಲ. ಬಿಕಿನಿ ಪೋಟೊಗಳನ್ನೂ ಹಾಕಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಜಾಹ್ನವಿ ಕಪೂರ್ ಬಿಕಿನಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ಮತ್ತೊಂದು ಬಿಕಿನಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ ಶ್ರೀದೇವಿ ಪುತ್ರ ಬಾಲಿವುಡ್‌ನ ಉದಯೋನ್ಮುಖ ನಟಿ. ಈಗಷ್ಟೇ ಬಾಲಿವುಡ್‌ನಲ್ಲಿ ನೆಲೆಯೂರಿರುವ ಜಾಹ್ನವಿ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸದಾ […]

Advertisement

Wordpress Social Share Plugin powered by Ultimatelysocial