ಕೋಟಿ, ಕೋಟಿ ಇಲ್ಲದೆ ಸಿನಿಮಾ ಮಾಡಲು ಸಾಧ್ಯವೇ ಇಲ್ಲವೇನೋ ಎನ್ನವಷ್ಟರ ಮಟ್ಟಿಗೆ ಸಿನಿಮಾಗಳಿಗೆ ದುಡ್ಡು ಸುರಿದ:ಪ್ರಶಾಂತ್ ನೀಲ್

ಇತ್ತೀಚೆಗೆ ಸಿನಿಮಾರಂಗದಲ್ಲಿ, ಚಿತ್ರಗಳ ಮೇಲೆ ಹೂಡುವ ಬಂಡವಾಳ ಹೆಚ್ಚಾಗಿದೆ. ಕೋಟಿ, ಕೋಟಿ ಇಲ್ಲದೆ ಸಿನಿಮಾ ಮಾಡಲು ಸಾಧ್ಯವೇ ಇಲ್ಲವೇನೋ ಎನ್ನವಷ್ಟರ ಮಟ್ಟಿಗೆ ಸಿನಿಮಾಗಳಿಗೆ ದುಡ್ಡು ಸುರಿಯಲಾಗುತ್ತಿದೆ. ಈ ಸಾಲಿಗೆ ಈಗ ನಟ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರ ಕೂಡ ಸೇರಿಕೊಂಡಿದೆ.

ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ ಸರಣಿ ಚಿತ್ರಗಳ ಬಳಿಕ ತೆಲುಗು ಸ್ಟಾರ್ ನಟ ಪ್ರಭಾಸ್‌ಗೆ ಸಿನಿಮಾ ಮಾಡುತ್ತಿದ್ದಾರೆ. ಸಲಾರ್ ಸಿನಿಮಾದ ಮೂಲಕ ಈ ಜೋಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಸಲಾರ್ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಬಂಡವಾಳ ಹಾಕಿದ್ದು, ದೊಡ್ಡ ಬಜೆಟ್ ನಲ್ಲಿ ಸಿನಿಮಾ ತಯಾರಾಗುತ್ತಿದೆ.

ಈ ಚಿತ್ರದ ಬಗ್ಗೆ ಹೊಸದೊಂದು ಸುದ್ದಿ ಹೊರ ಬಂದಿದೆ. ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಚಿತ್ರತಂಡ ಎಷ್ಟು ಹಣ ಖರ್ಚು ಮಾಡುತ್ತಿದೆ ಎನ್ನುವ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಿದೆ.

‘ಸಲಾರ್’ ಕ್ಲೈಮ್ಯಾಕ್‌ಗಾಗಿ 75 ಕೋಟಿ ರೂ!
ಅರೆರೆ ಇದೇನಪ್ಪಾ ಇದು 75 ಕೋಟಿ ಅಂದರೆ ಇದರಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡಿ ಮುಗಿಸಬಹುದು ಅಂತ ಅನಿಸುತ್ತೆ. ಅಷ್ಟೇ ಯಾಕೆ ಒಂದು ದೊಡ್ಡ ಬಜೆಟ್‌ನ ಸಿನಿಮಾಗೆ ಇಷ್ಟೊಂದು ಬಂಡವಾಳ ಹಾಕಲಾಗುತ್ತಿದೆ ಅಂದರೂ ಕೂಡ ನಂಬಬಹುದು. ಆದರೆ ಕೇವಲ ಕ್ಲೈಮ್ಯಾಕ್ಸ್ ಚಿತ್ರೀರಣಕ್ಕೆ ಇಷ್ಟೊಂದು ಬಂಡವಾಳ ಹಾಕುತ್ತಾರೆ ಎಂದರೆ ಅಚ್ಚರಿ ಆಗದೇ ಇರದು. ಆದರೂ ಕೂಡ ಹೀಗೊಂದು ಸುದ್ದಿ ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಕ್ಲೈಮ್ಯಾಕ್ಸ್ ಸಲುವಾಗಿ ‘ಸಲಾರ್’ ಚಿತ್ರತಂಡ 75 ಕೋಟಿ ರೂ ಬಜೆಟ್ ನಿಗದಿ ಪಡಿಸಿದೆಯಂತೆ.

‘ಸಲಾರ್’ ಒಟ್ಟು ಬಜೆಟ್ 150 ಕೋಟಿ!

ಸಲಾರ್ ಸಿನಿಮಾಗಾಗಿ ಒಟ್ಟು 150 ಕೋಟಿ ರೂ ಬಜೆಟನ್ನು ನಿಗದಿ ಮಾಡಲಾಗಿದೆ. ಈ ಬಗ್ಗೆ ಚಿತ್ರ ಸೆಟ್ಟೇರಿದಾಗಲೇ ಸುದ್ದಿ ಹಬ್ಬಿತ್ತು. ಚಿತ್ರದಲ್ಲಿ ಪ್ರಭಾಸ್, ಶೃತಿ ಹಾಸನ್ ಸೇರಿದಂತೆ ಹಲವು ಹೆಸರಾಂತ ಕಲಾವಿದರು ಇದ್ದಾರೆ. ಜೊತೆಗೆ ಸಿನಿಮಾಗಾಗಿ ದೊಡ್ಡ ಸೆಟ್‌ಗಳನ್ನು ಹಾಕಲಾಗಿದೆ. ಹಾಗಾಗಿ ಸಿನಿಮಾಗೆ ದೊಡ್ಡ ಮಟ್ಟದ ಬಜೆಟನ್ನೇ ಹಾಕಲಾಗಿದೆ. ಆದರೆ ಈ ಒಟ್ಟಾರೆ 150 ಕೋಟಿ ರೂ ಬಜೆಟ್‌ನಲ್ಲಿ ಕ್ಲೈಮ್ಯಾಕ್ಸ್‌ಗೆ 75 ಕೋಟಿ ಇಡಲಾಗಿದ್ಯಾ? ಅಥವಾ ಇದನ್ನು ಬಿಟ್ಟು ಪ್ರತ್ಯೇಕವಾಗಿ ಸಲಾರ್ ಕ್ಲೈಮ್ಯಾಕ್ಸ್‌ಗೆ 75 ಕೋಟಿ ಹಣ ಖರ್ಚು ಮಾಡಲಾಗುತ್ತಿದೆಯಾ ಎನ್ನುವುದನ್ನು ಚಿತ್ರ ತಂಡ ಸ್ಪಷ್ಟ ಪಡಿಸಬೇಕಷ್ಟೆ.

ಏಪ್ರಿಲ್‌ನಲ್ಲಿ ‘ಸಲಾರ್ ರಿಲೀಸ್’ ದಿನಾಂಕ!

ಇನ್ನು ‘ಸಲಾರ್’ ಸಿನಿಮಾ ಅದಾಗಲೇ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿದೆ. ಏಪ್ರಿಲ್ 14ಕ್ಕೆ ‘ಸಲಾರ್’ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಆದರೆ ಈ ದಿನಾಂಕದಂದು ಸಿನಿಮಾ ರಿಲೀಸ್ ಆಗುವುದು ಬಹುತೇಕ ಅನುಮಾನ. ಯಾಕೆಂದರೆ ಇದೇ ದಿನಾಂಕಕ್ಕೆ ‘kgf 2’ ಚಿತ್ರ ರಿಲೀಸ್ ಆಗುತ್ತಿದೆ. ಅಲ್ಲದೇ ‘ಸಲಾರ್’ ಚಿತ್ರದ ಶೂಟಿಂಗ್ ಕೂಡ ಬಾಕಿ ಇದ್ದು, ಸಿನಿಮಾ ಏಪ್ರಿಲ್‌ ಒಳಗಡೆ ಮುಗಿಯುವುದು ಕೂಡ ಅನುಮಾನವೇ.

RRR ಕ್ಲೈಮ್ಯಾಕ್ಸ್‌ಗೆ 80 ಕೋಟಿ!

ಇನ್ನು ಇತ್ತೀಚೆಗೆ ಇದೇ ರೀತಿ ಕ್ಲೈಮ್ಯಾಕ್‌ ಬಜೆಟ್ ವಿಚಾರಕ್ಕೆ ಸುದ್ದಿ ಆಗಿತ್ತು RRR ಚಿತ್ರ. ಚಿತ್ರದ ಒಟ್ಟು ಬಜೆಟ್ 400 ಕೋಟಿ ಎಂದು ಅಂದಾಜಿಸಲಾಗಿದೆ. ಅದರಲ್ಲಿ 90 ಕೋಟಿ ರೂ. ಹಣವನ್ನು ಚಿತ್ರತಂಡ ಕೇವಲ ಕ್ಲೈಮ್ಯಾಕ್ಸ್‌ಗಾಗಿಯೇ ಖರ್ಚು ಮಾಡಿದೆ ಅಂತೆ. ಒಟ್ಟು 40 ನಿಮಿಷಗಳ ಸಮಯ ಚಿತ್ರದ ಕ್ಲೈಮ್ಯಾಕ್ಸ್ ಇದೆ ಅಂತೆ. ಹಾಗಾಗಿ ನಟ ರಾಮ್‌ ಚರಣ್ ತೇಜ ಮತ್ತು ಜೂ.ಎನ್‌ಟಿಆರ್ ಅವರ ಅದ್ದೂರಿ ಸಾಹಸವನ್ನು ಕ್ಲೈಮ್ಯಾಕ್ಸ್‌ನಲ್ಲಿ ಕಣ್ತುಂಬಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಓಮಿಕ್ರಾನ್ ರೂಪಾಂತರದ ವಿರುದ್ಧ ಪ್ರತಿಕಾಯ ಔಷಧಗಳು ಕಡಿಮೆ ಪರಿಣಾಮಕಾರಿ;

Mon Jan 31 , 2022
ಆಂಟಿವೈರಲ್ ಮಾತ್ರೆಗಳು ಓಮಿಕ್ರಾನ್ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ಅಧ್ಯಯನವು ತೋರಿಸಿದೆ ಮತ್ತು ರೋಗಿಗಳಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಸಂಶೋಧನೆಗಳು ಆಂಟಿಬಾಡಿ ಚಿಕಿತ್ಸೆಗಳು ಓಮಿಕ್ರಾನ್ ರೂಪಾಂತರದ ವಿರುದ್ಧ ಕಡಿಮೆ ಪರಿಣಾಮಕಾರಿ ಎಂದು ತೋರಿಸಿರುವ ಹಿಂದಿನ ಸಂಶೋಧನೆಗಳನ್ನು ದೃಢೀಕರಿಸುತ್ತವೆ. ಔಷಧ ತಯಾರಕರು ಓಮಿಕ್ರಾನ್ ರೂಪಾಂತರದ ವಿರುದ್ಧ ಗುರಿಯಾಗಿಟ್ಟುಕೊಂಡು ಹೊಸ ಪ್ರತಿಕಾಯ ಚಿಕಿತ್ಸೆಯನ್ನು ಉತ್ಪಾದಿಸಬೇಕು ಎಂದು ಸಂಶೋಧನೆಗಳು ಸೂಚಿಸುತ್ತವೆ, ಆದರೆ ಇದು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಅಧ್ಯಯನದ ನೇತೃತ್ವ ವಹಿಸಿರುವ ಯೋಶಿಹಿರೊ ಕವೊಕಾ […]

Advertisement

Wordpress Social Share Plugin powered by Ultimatelysocial