ಆಜಾದಿ ಅಮೃತ್ ಮಹೋತ್ಸವದ ಅಂಗವಾಗಿ ಬಿಜಲಿ ಉತ್ಸವ ಕಾರ್ಯಕ್ರಮ.

 

ಚೆಸ್ಕಾಂ ಮೈಸೂರು ಮತ್ತು ಆರ್ ಈ ಸಿ, ಭಾರತ ಸರ್ಕಾರದ ಇಂಧನ ಸಚಿವಾಲಯದ ಸಹಯೋಗದೊಂದಿಗೆ ಆಜಾದಿ ಅಮೃತ್ ಮಹೋತ್ಸವದ ಅಂಗವಾಗಿ ಬಿಜಲಿ ಉತ್ಸವ ಕಾರ್ಯಕ್ರಮವನ್ನು ನಂಜನಗೂಡಿನಲ್ಲಿ ಆಯೋಜನೆ ಮಾಡಲಾಗಿತ್ತು .ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ವಿಭಾಗದ ಚೆಸ್ಕಾಂ ವ್ಯವಸ್ಥಾಪಕ ಜಯವಿಭವಸ್ವಾಮಿ ಹಾಗೂ ಮತ್ತಿತರ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು .ಬಳಿಕ ಅವರು ಮಾತನಾಡಿ ಯಾವುದೇ ಕಾರಣಕ್ಕೂ ವಿದ್ಯುತ್ ಕಳ್ಳತನ ಮಾಡಬೇಡಿ ಇದರಿಂದ ಸಂಸ್ಥೆಗೆ ನಷ್ಟ ಉಂಟಾಗುತ್ತದೆ ಈಗಲೇ ನಷ್ಟದಲ್ಲಿರುವ ಸಂಸ್ಥೆಗೆ ಸಕಾಲಕ್ಕೆ ಬಿಲ್ ಕಟ್ಟುವ ಮೂಲಕ ಸಂಸ್ಥೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೈಮುಗಿದು ಮನವಿ ಮಾಡಿಕೊಂಡರು .ತಾವು ಬಳಸುವ ಪ್ರತಿಯೊಂದು ವಸ್ತುವಿಗೂ ಮುಂಗಡ ಹಣ ಕೊಟ್ಟು ಉಪಯೋಗಿಸುತ್ತೀರಿ ಆದರೆ ಸರ್ಕಾರ ನೀಡುವ ವಿದ್ಯುತ್ ಮತ್ತು ನೀರಿನ ದರಗಳನ್ನು ಒಂದು ತಿಂಗಳ ಮೇಲೆ ಕಟ್ಟುತ್ತೀರಿ ಆದರೂ ಏಕೆ ಈ ತಾರತಮ್ಯ ಎಂದು ಗ್ರಾಹಕರಿಗೆ ಕಿವಿ ಹೇಳಿದರು ವಿದ್ಯುತ್ ಕಳ್ಳತನ ಮಾಡದೆ ಸಕಾಲಕ್ಕೆ ಬಿಲ್ ಕಟ್ಟುವ ಮೂಲಕ ಗುಣಮಟ್ಟದ ವಿದ್ಯುತ್ ಕೇಳಿ ಪಡೆಯಿರಿ ಎಂದು ಕಿವಿಮಾತು ಹೇಳಿದರು ಇದೇ ಸಂದರ್ಭ ವೇದಿಕೆ ಮೇಲಿನ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಚೆಸ್ಕಾಂ ಅಧಿಕಾರಿಗಳಾದ ಉಮೇಶ್ ಚಂದ್ರ , ಗಾಯತ್ರಿ, ಶೇಕ್ ಮಹಮ್ಮದ್ ಮಹಿಮುಲ್ಲಾಖಾನ್ ,ಎಸ್ ನಾಗೇಶ್ ಪ್ರಧಾನ ವ್ಯವಸ್ಥಾಪಕರು ,ಎನ್ ಲೋಕೇಶ್ ,ರಾಮಸ್ವಾಮಿ ,ಸೋಮ್ಯ ಕಾಂತ್, ದೇವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ರಾಘವೇಂದ್ರ ಸ್ಟೋರ್ಸ್' ಸಿನಿಮಾ ವೀಕ್ಷಿಸಿ ವಿಮರ್ಶೆ ನೀಡಿದ ಜಗ್ಗೇಶ್,

Thu Mar 2 , 2023
ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಿಡುಗಡೆಗೆ ಸಂಪೂರ್ಣವಾಗಿ ರೆಡಿಯಾಗಿದ್ದು, ಸಿನಿಮಾವನ್ನು ಇತ್ತೀಚೆಗಷ್ಟೆ ನಟ ಜಗ್ಗೇಶ್ ನೋಡಿದ್ದಾರೆ. ಮಾತ್ರವಲ್ಲ ಸಿನಿಮಾದ ಬಗ್ಗೆ ಸಾಮಾನ್ಯ ಪ್ರೇಕ್ಷಕನ ರೀತಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜಗ್ಗೇಶ್ ನಟನೆಯ ಸಿನಿಮಾ ಹೊಸದೊಂದು ಅಪ್​ಡೇಟ್ ಬರದೆ ಬಹಳ ಸಮಯವಾಗಿತ್ತು. ಭಾರಿ ಬಜೆಟ್​ ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ, ತಾನೇ ಬಂಡವಾಳ ಹಾಕಿರುವ ಈ ಸಣ್ಣ ಬಜೆಟ್ ಸಿನಿಮಾವನ್ನು ಮರೆತುಬಿಟ್ಟಿತೇ? ಎಂಬ ಅನುಮಾನ ಮೂಡಿತ್ತು. ಇದೀಗ ಸ್ವತಃ ನಟ ತಾವೇ ನಟಿಸಿರುವ ‘ರಾಘವೇಂದ್ರ […]

Advertisement

Wordpress Social Share Plugin powered by Ultimatelysocial