ಮುಂಬರುವ ಸಾರ್ವತ್ರಿಕ ಚುನಾವಣೆ-2023ರ ಪೂರ್ವ ಸಿದ್ಧತೆಯ ಕುರಿತು ಸಭೆ.

ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಪೂರ್ವ ಸಿದ್ಧತೆಯ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರ ನೇತೃತ್ವದಲ್ಲಿ ಸಭೆ ನಡೆಯಿತು.

ಸೂಕ್ಷ್ಮ ಪ್ರದೇಶಗಳನ್ನು ಮ್ಯಾಪಿಂಗ್ ಮಾಡುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಹಾಯಕ ಚುನಾವಣಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಅದರ ಪಟ್ಟಿಯನ್ನು ಸಲ್ಲಿಸಲು ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸಲುವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ತೆಗೆದಿಕೊಳ್ಳಬೇಕಿರುವ ಕ್ರಮಗಳು, ಸೂಕ್ಷ್ಮ ವಿಧಾನ ಸಭಾ ಕ್ಷೇತ್ರಗಳು ಹಾಗೂ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಉಜ್ವಲ್ ಕುಮಾರ್ ಘೋಷ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ದಯಾನಂದ್(ಬೆಂಗಳೂರು ನಗರ), ಡಾ. ಹರೀಶ್ ಕುಮಾರ್(ಕೇಂದ್ರ), ವೆಂಕಟಾ ಚಲಪತಿ(ಉತ್ತರ), ಜಗದೀಶ್ ನಾಯ್ಕ್(ದಕ್ಷಿಣ), ಜಂಟಿ ಪೊಲೀಸ್ ಆಯುಕ್ತರಾದ ಶರಣಪ್ಪ, ಉಪ ಪೊಲೀಸ್ ಆಯುಕ್ತರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು. ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧನು ರಾಶಿ ಭವಿಷ್ಯ.

Sat Jan 14 , 2023
ಮಕ್ಕಳ ಸಂಗದಲ್ಲಿ ಶಾಂತಿ ಪಡೆಯಿರಿ. ನಿಮ್ಮ ಸ್ವಂತದ್ದಷ್ಟೇ ಅಲ್ಲದೇ ಬೇರಯವರ ಮಕ್ಕಳ ಚಿಕಿತ್ಸಕ ಶಕ್ತಿಗಳೂ ನಿಮಗೆ ಸಾಂತ್ವನ ನೀಡಬಹುದು ಮತ್ತು ನಿಮ್ಮ ಆತಂಕವನ್ನು ಶಮನಗೊಳಿಸಬಹುದು. ಹಣದ ಪ್ರಾಮುಖ್ಯತೆ ನಿಮಗೆ ಚೆನ್ನಾಗಿ ಗೊತ್ತಿದೆ, ಆದ್ದರಿಂದ ಇಂದು ನಿಮ್ಮ ಮೂಲಕ ಉಳಿಸಲಾಗಿರುವ ಹಣ ನಿಮ್ಮ ತುಂಬಾ ಕೆಲಸಕ್ಕೆ ಬರಬಹುದು ಮತ್ತು ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಇಂದು […]

Advertisement

Wordpress Social Share Plugin powered by Ultimatelysocial