ಕರೆದಾಗ ಮಾತ್ರ ಊಟಕ್ಕೆ ಹೋಗುತ್ತೇನೆ: ರಾಮದಾಸ್

\

ಮೈಸೂರು: ‘ಸಚಿವ ಸ್ಥಾನ ನೀಡುವರೇ, ಇಲ್ಲವೇ ಎಂಬ ಬಗ್ಗೆ ಯಾವುದೇ ಚಿಂತೆ ಮಾಡಿಲ್ಲ. ಮಂತ್ರಿ ಮಾಡಿದರೆ ರಾಜ್ಯವನ್ನು ಸುತ್ತಾಡಿ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ಕ್ಷೇತ್ರದಲ್ಲಿದ್ದುಕೊಂಡೇ ರಾಜ್ಯದ ಅಭಿವೃದ್ಧಿಗೆ ಬೇಕಾದ ಸಲಹೆಗಳನ್ನು ನೀಡುತ್ತೇನೆ’ ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್‌ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂಪುಟ ಪುನರ್‌ರಚನೆ ಅಥವಾ ವಿಸ್ತರಣೆ ಬೇಕೇ ಎಂಬುದನ್ನು ಚಿಂತನೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಅದನ್ನು ತೀರ್ಮಾನಿಸುವರು. ಒಬ್ಬ ಶಾಸಕನಾಗಿ ನನ್ನ ಕೆಲಸ ಏನಿದೆಯೋ ಅದನ್ನು ಮಾಡುತ್ತೇನೆ. ಕರೆದಾಗ ಮಾತ್ರ ಊಟಕ್ಕೆ ಹೋಗುತ್ತೇನೆ. ಕರೆಯದೆ ಊಟಕ್ಕೆ ಹೋಗುವವ ನಾನಲ್ಲ. ಸಚಿವ ಸ್ಥಾನಕ್ಕೆ ಎಂದೂ ಪ್ರಯತ್ನಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.ಮೈಸೂರಿನವರಿಗೆ ಸಚಿವ ಸ್ಥಾನ ಸಿಗದೇ ಇರುವುದರಿಂದ ಈ ಭಾಗದ ಅಭಿವೃದ್ಧಿಗೆ ತೊಂದರೆ ಆಗಿಲ್ಲವೇ ಎಂಬ ಪ್ರಶ್ನೆಗೆ, ‘ಆಡಳಿತದಲ್ಲಿ ಪ್ರಾದೇಶಿಕ ಅಸಮತೋಲನ ಆಗಬಾರದು. ಚಾಣಕ್ಯನ ಕಾಲದಿಂದಲೂ ಅಂತಹ ಪರಿಕಲ್ಪನೆ ಇದೆ. ಅಲ್ಲಲ್ಲಿ ಇದ್ದವರು ಆ ಪ್ರದೇಶದ ಬಗ್ಗೆ ಚಂತನೆ ಮಾಡಬೇಕು ಎಂದು ಹೇಳಿದ್ದಾನೆ. ಮುಖ್ಯಮಂತ್ರಿ ಬುದ್ಧಿವಂತರಿದ್ದಾರೆ. ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KERALA:ತನ್ನ ಮೃತ ತಂದೆಯ 40 ವರ್ಷದ ಸಾಲವನ್ನು ಮರುಪಾವತಿಸಲು ಕೇರಳದ ವ್ಯಕ್ತಿಯ ಜಾಹೀರಾತು;

Fri Feb 4 , 2022
ಕೇರಳದ ವ್ಯಕ್ತಿಯೊಬ್ಬ ತನ್ನ ದಿವಂಗತ ತಂದೆಯ 40 ವರ್ಷಗಳ ಸಾಲವನ್ನು ಮರುಪಾವತಿಸಲು ಪತ್ರಿಕೆಯಲ್ಲಿ ಜಾಹೀರಾತನ್ನು ತೆಗೆದುಕೊಂಡನು, ಆದರೆ ಅವನ ಯೋಜನೆಯು ವಿಫಲವಾಯಿತು. ಕೊಲ್ಲಂನ ಲೂಯಿಸ್‌ಗಾಗಿ ನಾಸರ್ ಪತ್ರಿಕೆಯಲ್ಲಿ ಜಾಹೀರಾತು ನೀಡಿದರು. ಸ್ಪಷ್ಟವಾಗಿ, ನಾಜರ್ನ ತಂದೆ ಲೂಯಿಸ್ಗೆ ಸಾಲವನ್ನು ನೀಡಬೇಕಾಗಿತ್ತು ಮತ್ತು ಅವನ ಮರಣಶಯ್ಯೆಯಲ್ಲಿ ಅವನಿಗೆ ಅದನ್ನು ಬಹಿರಂಗಪಡಿಸಿದನು. ಈ ಘಟನೆಯು 1980 ರ ದಶಕದ ಹಿಂದಿನದು ಮತ್ತು ದುಬೈನಲ್ಲಿ ನಡೆದಿದೆ. ಕೇರಳದ ತಿರುವನಂತಪುರಂ ಜಿಲ್ಲೆಯ ಮದನ್‌ವಿಲಾದ ಅಬ್ದುಲ್ಲಾ, ಬದುಕಲು ಮತ್ತು […]

Advertisement

Wordpress Social Share Plugin powered by Ultimatelysocial