ವಿದ್ಯುತ್ ಕಾಯ್ದೆ ವಾಪಸ್‌ ಪಡೆಯಲು ಪ್ರಾಂತ ರೈತ ಸಂಘ

ರಾಜ್ಯದ ರೈತರಿಗೆ ಮಾರಕವಾದ ವಿದ್ಯುತ್ ಕಾಯ್ದೆ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಯು.ಬಸವರಾಜ ಆಗ್ರಹಿಸಿದರು.

ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ವಿದ್ಯುತ್ ಕಾಯ್ದೆ ಯಿಂದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ತುಂಬಾ ತೊಂದರೆ ಉಂಟಾಗಿದೆ.
ಖಾಸಗಿ ಕಂಪನಿಗಳು ವಿದ್ಯುತ್ ಉತ್ಪಾದನೆ ಮತ್ತು ಮಾರಾಟ ಮಾಡುವ ಪದ್ದತಿ ಮುಂದೆ ಬರುತ್ತದೆ. ಇದರಿಂದ ವಿದ್ಯುತ್ ಬಳಕೆದಾರರಿಗೆ ಕೂಡ ತೊಂದರೆಯಾಗುತ್ತದೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದವರು ಅಧಿಕಾರ ಮಾಡುವ ಎರಡು ಸರ್ಕಾರಗಳು ವ್ಯವಸಾಯವನ್ನು ಕಡೆ ಕಣಿಸಿ ಕೃಷಿ ವಲಯವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸುವ ನೀತಿಯನ್ನು ಜಾರಿ ಮಾಡಲು ಮುಂದಾಗಿವೆ. ಇದರಿಂದಾಗಿ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕಣಗಳು ಮತ್ತಷ್ಟು ಹೆಚ್ಚಾಗುತ್ತಿವೆ. ರೈತರು ದಿವಾಳಿಯಾಗುತ್ತಾರೆ. ರೈತರು ಒಕ್ಕಲು ತನದ ಜೊತೆಗೆ ಹೈನುಗಾರಿಕೆ, ಕುರಿ ಸಾಕಣಿಕೆ, ಸೇರಿದಂತೆ ಬೇರೆ ಬೇರೆ ಉಪ ಕಸುಬು ಮಾಡುತ್ತಿದ್ದರು ಇದನ್ನು ಕಳೆದು ಬಿಡುವ ಕೆಲಸ ವ್ಯವಸ್ಥಿತವಾಗಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ನರೇಗಾ ಯೋಜನೆಯನ್ನು ಪಟ್ಟಣ ಪ್ರದೇಶದಲ್ಲಿ ವಿಸ್ತರಣೆಗ ಮಾಡಬೇಕು.ಯೋಜನೆ ಕೆಲಸ ಮಾಡುವ ಕಾರ್ಮಿಕರಿಗೆ ₹425 ಕೂಲಿ ಕೊಡಬೇಕು. ಕಳೆದ ವರ್ಷ ಕೇಂದ್ರ ಸರ್ಕಾರ ನರೇಗಾ ಯೋಜನೆಗೆ ₹ 1 ಸಾವಿರ ಕೋಟಿ ಅನುದಾನ ಕಡಿತ ಮಾಡಿದೆ. ಈ ವರ್ಷ ಕಡಿತ ಮಾಡಿದ ಹಣ ಬಿಡುಗಡೆ ಮಾಡಬೇಕು. ಈ ವರ್ಷದ ಬಜೆಟ್ ನಲ್ಲಿ ಅನುದಾನ ಹೆಚ್ಚಿಗೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರಪಂಚದಲ್ಲಿ ಹಸಿವಿ ನಿಂದ ಬಳಲುತ್ತಿರುವ ದೇಶಗಳಲ್ಲಿ ಭಾರತ ದೇಶ 107 ನೇ ಸ್ಥಾನದಲ್ಲಿ ಇದೆ.
ಬಡವರ ಸಾವು ತಪ್ಪಿಸಲು ದೇಶದಲ್ಲಿ 200 ಮಾನ ದಿನಗಳ ಕೆಲಸ ನೀರುವ ಮೂಲಕ ನರೇಗಾ ಯೋಜನೆಯನ್ನು ಸಮಪರ್ಕವಾಗಿ ಜಾರಿ ಮಾಡಬಸವರಾಜ
ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಕೊಡ ಬೇಕು ಎಂದು ಒತ್ತಾಯಿಸಿ ಮುಂದಿನ ಬರುವ ಎಪ್ರಿಲ್‌ ನಲ್ಲಿ ದೆಹಲಿಯಲ್ಲಿ ದೊಡ್ಡ ಪ್ರತಿಭಟನೆ ನಡೆಸಲಾಗುವುದು. ಅದಲ್ಲದೇ ರಾಜ್ಯದಲ್ಲಿ ಕೂಡ ಫೆಬ್ರುವರಿ 25 ರಂದು ಎಲ್ಲಾ ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಿ.ವೀರನಗೌಡ, ಕಾರ್ಯದರ್ಶಿ ನರಸಣ್ಣ ನಾಯಕ, ಮುಖಂಡರಾದ ಬಸವಂತರಾಯಗೌಡ, ಮಹಾಂತಪ್ಪ ಗೌಡ, ಹನುಮಂತ ನಾಯಕ, ಮುಕ್ಕನಗೌಡ ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

Wed Jan 11 , 2023
ರಾಜ್ಯದ ಆರು ಜಿಲ್ಲೆಗಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಿಗೆ ತರಬೇತಿ ನೀಡುವುದಕ್ಕಾಗಿ ಕ್ರೀಡಾ ತರಬೇತುದಾರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರಾಮನಗರ, ಯಾದಗಿರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಹಾವೇರಿ ಜಿಲ್ಲೆಗಳ ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾ ತರಬೇತುದಾರರ ನೇಮಕಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮುಂದಾಗಿದೆ. ನೇಮಕ ಆದೇಶ ನಿಡುವ ದಿನಾಂಕದಿಂದ 2023ರ ಅಂತ್ಯದವರೆಗೆ ಮಾಸಿಕ ಸಂಚಿತ ವೇತನ, ಗುತ್ತಿಗೆ ಆಧಾರದ ಮೇಲೆ […]

Advertisement

Wordpress Social Share Plugin powered by Ultimatelysocial