ಆನೆ ಸಾಕೋದು ಅಷ್ಟು ಸುಲಭವಲ್ಲ, ಗಜರಾಜನ ಗಾತ್ರದಷ್ಟೇ ದುಡ್ಡು ನಿಮ್ಮ ಹತ್ರಾನೂ ಇರಬೇಕು,.!!

ಪ್ರಾಣಿಗಳೇ  ಗುಣದಲ್ಲಿ ಮೇಲು, ಮಾನವ ಅದಕ್ಕಿಂತ ಕೀಳು ಅಂತ ಡಾ. ರಾಜ್​ಕುಮಾರ್ ಸಂಪತ್ತಿಗೆ ಸವಾಲ್​ನಲ್ಲಿ ಹಾಡಿದ್ದಾರೆ. ಇದು ನಿಜಕ್ಕೂ ಸತ್ಯ ರೀ. ಮನುಷ್ಯನ  ಕಂಡರೇ ಮತ್ತೊಬ್ಬ ಮನುಷ್ಯನಿಗೆ ದ್ವೇಷ ಇರುವ ಈ ಕಾಲದಲ್ಲಿ ಪ್ರಾಣಿಗಳು ನಿಜಕ್ಕೂ ಮೇಲು ಅಂದರೆ ತಪ್ಪಾಗಲ್ಲ.ಈಗೆಲ್ಲಾ ಎಲ್ಲರೂ ಮನೆಯಲ್ಲಿ ನಾಯಿ , ಬೆಕ್ಕು  ಸಾಕಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರು ಇದನ್ನು ಬ್ಯುಸಿನೆಸ್ ರೂಪದಲ್ಲಿ ನೋಡುತ್ತಾರೆ. ಹೌದು, ಪ್ರಾಣಿ, ಪಕ್ಷಿಗಳನ್ನು ಮಾರಾಟ ಮಾಡುವ ಬ್ಯುಸಿನೆಸ್​​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಆದರೆ ನಾವು ಇಂದು ಆನೆ ಸಾಕುವುದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಅರೇ ಇದೇನಪ್ಪಾ ಆನೆ ಎಲ್ಲಾದರೂ ಸಾಕುವುದಕ್ಕೆ ಸಾಧ್ಯನಾ? ಅಂತ ನೀವು ಕೇಳಬಹುದು. ಆನೆ ಸಾಕುವುದು ಅಷ್ಟು ಸುಲಭವಲ್ಲ. ಅದಕ್ಕಿರುವ ನಿಯಮಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಮೊದಲಿಗೆ 2.5 ಎಕರೆ ಜಾಗ ಇರಬೇಕು..!!ಹೌದು, ನೀವೇನಾದರೂ ಆನೆಯನ್ನು ಸಾಕಬೇಕು ಅಂತ ಆಸೆ ಇದ್ದರೆ ಮೊದಲು ನಿಮ್ಮ ಬಳಿ ವಿಶಾಲವಾದ ಜಾಗವಿರಬೇಕು. ಜೊತೆಗೆ ಎಂದಿಗೂ ಆನೆ ನಿಮ್ಮ ಸ್ವಂತದ್ದುಎನಿಸಿಕೊಳ್ಳುವುದಿಲ್ಲ. ಸರ್ಕಾರ ನಿಮಗೆ ಟೆಂಡರ್​ ರೂಪದಲ್ಲಿ ನೀಡುತ್ತೆ. ಆನೆ ಸಾಕುವುದರಿಂದ ನಿಮಗೆ ಯಾವುದೇ ಲಾಭ ಇರುವುದಿಲ್ಲ. ಜೊತೆಗೆ ನೂರೆಂಟು ಪಮಿರ್ಷನ್​ ಬೇಕೆ ಬೇಕು. ಮೊದಲಿಗೆ ಹೇಳಿದ್ದಂರೆ ಎರಡೂವರೆ ಎಕರೆ ಜಾಗ ಇದ್ದರೆ ಆನೆ ಸಾಕುವುದರ ಬಗ್ಗೆ ನೀವು ಯೋಚನೆ ಮಾಡಬಹುದು.ಇಷ್ಟೆಲ್ಲಾ ಪರ್ಮಿಷನ್​ ಇರಬೇಕು..!!ಇನ್ನೂ ಪರ್ಮಿಷನ್​ ವಿಚಾರಕ್ಕೆ ಬಂದರೆ ನೀವು ಗ್ರಾಮ ಪಂಚಾಯತ್​ ಕಡೆಯಿಂದ ಅನುಮತಿ ಪತ್ರ ಪಡೆಯಬೇಕು. ಜೊತೆಗೆ ಪಲ್ಯೂಷನ್​ ಬೋರ್ಡ್​ ಕಂಟ್ರೋಲ್​ ಅವರ ಅನುಮತಿ ಬೇಕು. ಯಾಕೆಂದರೆ ಆನೆ ಹಾಕುವ ಲದ್ದಿಯಿಂದ ಸಾಕಷ್ಟು ಸಮಸ್ಯೆಯಾಗಬಹುದು. ಅದನ್ನೂ ಕೂಡ ಬೇರೆ ಕಡೆ ಸಾಗಿಸಲು ಈ ಅನುಮತಿ ಇರಲೇ ಬೇಕು. ಲದ್ದಿಯನ್ನು ನೀವು ಹೇಗೆ? ಯಾವಾಗ? ಎಲ್ಲಿಗೆ? ಸಾಗಿಸುತ್ತೀರಾ ಅಂತ ಮಾಹಿತಿ ನೀಡಬೇಕು. ಲೀಸ್​ ರೂಪದಲ್ಲಿ ನೀವು ಆನೆಯನ್ನು ಸಾಕಬಹುದು. ಮರಿ ಆನೆಗಳನ್ನು ಸಾಕುವಂತಿಲ್ಲ.ದೇವಸ್ಥಾನಕ್ಕೆ ನಿಮ್ಮ ಆನೆ ಬಿಟ್ಟು ಸಂಪಾದಿಸಬಹುದು!ಹೌದು, ಆನೆ ಸಾಕುವುದು ಲಾಭದಾಯಕ ಅಲ್ಲದಿದ್ದರೂ, ಚೂರು ಸಂಪಾದನೆ ಮಾಡಬಹುದು. ಅದು ಹೇಗೆ ಅಂದೆರೆ ನಿಮ್ಮ ಸುತ್ತಮುತ್ತಲಿನ ದೇಗುಲಗಳಲ್ಲಿ ಯಾವುದಾದರೂ ವಿಶೇಷ ಪೂಜೆ, ಜಾತ್ರೆ ಸಮಯದಲ್ಲಿ ಈ ಆನೆಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಸಂಪಾದನೆ ಮಾಡಬೇಕು. ಸಣ್ಣ, ಪುಟ್ಟ ದೇವಸ್ಥಾನಗಳಾದರೆ ದಿನವೊಂದಕ್ಕೆ 15 ಸಾವಿರ ಸಿಗಬಹುದು. ಇನ್ನು ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ 25 ಸಾವಿರದಿಂದ ಎರಡೂವರೆ ಲಕ್ಷದವರೆಗೂ ಆದಾಯ ಗಳಿಸಬಹುದು.ಇದರ ಜೊತೆಗೆ ತಿಂಗಳಿಗೊಮ್ಮೆ ನುರಿತ ಪಶು ವೈದ್ಯರಿಂದ ಚೆಕ್​ಅಪ್​ ಮಾಡಿಸಬೇಕು. ಆನೆ ಏನಾದರೂ ಬೇಜಾರಾಗಿದ್ದರೆ, ಬೇರೆ ಕಡೆಯಿಂದ ಒಂದೆರೆಡು ಆನೆಗಳನ್ನು ಕರೆಸಿ ಇದರ ಜೊತೆ ಬಿಡಬೇಕು. ಈ ಖರ್ಚು ಕೂಡ ನಿಮ್ಮದೆ. ಹೀಗಾಗಿ ಯಾರೂ ಹೆಚ್ಚಾಗಿ ಆನೆಯನ್ನು ಸಾಕುವುದಕ್ಕೆ ಮುಂದಾಗುವುದಿಲ್ಲ. ಆನೆ ಕಂಡರೆ ಬಹಳ ಇಷ್ಟ. ದುಡ್ಡು ಎಷ್ಟಾದರೂ ಖರ್ಚು ಆಗಲಿ ಅಂದುಕೊಳ್ಳುವವರಿಗೆ ಇಷ್ಟೆಲ್ಲಾ ತಿಳಿದುಕೊಳ್ಳುವುದು ಮುಖ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಕಾಯಿಲೆ ಇರುವವರು ಚಳಿಗಾಲದಲ್ಲಿ ಮೂಲಂಗಿ ಸೇವಿಸಿದ್ರೆ ಮತ್ತಷ್ಟು ಹದಗೆಡುತ್ತದೆ ಆರೋಗ್ಯ..!

Sat Dec 31 , 2022
  ಚಳಿಗಾಲದಲ್ಲಿ ಮೂಲಂಗಿಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದು ಅಂತಹ ಪೋಷಕಾಂಶಗಳನ್ನು ಒಳಗೊಂಡಿದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತದಿಂದ ಪರಿಹಾರವನ್ನು ನೀಡುತ್ತದೆ.ಈ ದಿನಗಳಲ್ಲಿ ನೀವು ಮೂಲಂಗಿ ಸಾಂಬಾರ್‌, ಪಲ್ಯ, ಪರೋಟ ಅಥವಾ ಸಲಾಡ್‌ ರೂಪದಲ್ಲಿ ತಿನ್ನಬಹುದು.ಆದರೆ ಕೆಲವೊಂದು ನಿರ್ದಿಷ್ಟ ಸಮಸ್ಯೆ ಮತ್ತು ಕಾಯಿಲೆಯಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಮೂಲಂಗಿ ಸೇವಿಸುವುದು ಅಪಾಯಕಾರಿ.ಈ ರೋಗಿಗಳು ಮೂಲಂಗಿಯನ್ನು ಸೇವಿಸಬಾರದು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವವರು ಮೂಲಂಗಿಯನ್ನು ತಿನ್ನಬಾರದು. […]

Advertisement

Wordpress Social Share Plugin powered by Ultimatelysocial