ಗಾರ್ಮೆಂಟ್ಸ್ ಕಾರ್ಮಿಕರಿಗೆ ತುಟ್ಟಿ ಭತ್ಯೆ ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ ̤

ಬೆಂಗಳೂರು: ಗಾರ್ಮೆಂಟ್ಸ್ ಕಾರ್ಮಿಕರಿಗೆ ತುಟ್ಟಿ ಭತ್ಯೆ ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ. ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಹೆಚ್ಚಳವಾಗಬೇಕಿದ್ದ ತುಟ್ಟಿಭತ್ಯೆ ಕೊಡಲು ಮಾಲೀಕರು ಒಪ್ಪಿಕೊಂಡಿದ್ದು, ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯೂನಿಯನ್ ಮಾಹಿತಿ ನೀಡಿದೆ.2020 -21ನೇ ಗ್ರಾಹಕರ ಸೂಚ್ಯಂಕ ದರ ಪರಿಷ್ಕರಣೆ ಅನ್ವಯ ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರ ತುಟ್ಟಿಭತ್ಯೆ 2020ರ ಏಪ್ರಿಲ್ ನಿಂದ ದಿನಕ್ಕೆ 16.06 ರೂ. ನಂತೆ ಏರಿಕೆಯಾಗಬೇಕಿತ್ತು. ಆದರೆ, ಕೋರೋನಾ ಲಾಕ್ ಡೌನ್ ಕಾರಣದಿಂದ ಏರಿಕೆಯಾಗಿರಲಿಲ್ಲ.ತುಟ್ಟಿಭತ್ಯೆ ಏರಿಕೆ ಮುಂದೂಡಬೇಕೆಂದು ಕಾರ್ಖಾನೆಗಳ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ 2021 ರ ಮಾರ್ಚ್ 31 ರವರೆಗೆ ತುಟ್ಟಿಭತ್ಯೆ ಏರಿಕೆಯನ್ನು ಮುಂದೂಡಿದ್ದು, ಇದನ್ನು ಕಾರ್ಮಿಕ ಸಂಘಟನೆಗಳು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.ಹೀಗಿದ್ದರೂ ಕಾರ್ಖಾನೆಗಳ ಮಾಲೀಕರು ಹೆಚ್ಚುವರಿ ತುಟ್ಟಿ ಭತ್ಯೆ ಪಾವತಿಸಿರಲಿಲ್ಲ. ನಿರಂತರ ಒತ್ತಡ ಮತ್ತು ಪ್ರಯತ್ನದ ನಂತರ ಹೋರಾಟಕ್ಕೆ ಜಯ ದೊರೆತಿದೆ. ತುಟ್ಟಿಭತ್ಯೆ ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ.2020 ಏಪ್ರಿಲ್ ನಿಂದ ತಿಂಗಳಿಗೆ 417 ರೂ.ನಂತೆ ಜಾರಿಗೊಳಿಸಬೇಕಿದ್ದ ತುಟ್ಟಿಭತ್ಯೆ ಮೊತ್ತವನ್ನು 2022ರ ಫೆಬ್ರವರಿ ವೇತನದಲ್ಲಿ ಸೇರಿಸಲು ಮಾಲೀಕರು ಒಪ್ಪಿಕೊಂಡಿರುವುದಾಗಿ ಯೂನಿಯನ್ ಸಲಹೆಗಾರ ಕೆ.ಆರ್. ಜಯರಾಮ್ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಯುಕ್ತ ಅರಬ ಅಮೆರಾಟ್ಸನ ಅಬುಧಾಬಿ ಮತ್ತು ದುಬೈ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನ ನಿರ್ಮಾಣವಾಗಲಿದೆ.

Sat Feb 5 , 2022
ಪ್ರಧಾನ ಮಂತ್ರಿ ಮೋದಿಯವರಿಂದ ಕೃತಜ್ಞತೆ ! ಮನಾಮಾ(ಬಹರೀನ) – ಸಂಯುಕ್ತ ಅರಬ ಅಮೆರಾಟ್ಸನ ಅಬುಧಾಬಿ ಮತ್ತು ದುಬೈ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನ ನಿರ್ಮಾಣವಾಗಲಿದೆ. ಇದಕ್ಕಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿಯವರು ಬಹರೀನ ಪ್ರಧಾನಮಂತ್ರಿ ಸಲ್ಮಾನ ಬಿನ್ ಹಮಾದ ಅಲ್ ಖಲಿಫಾರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸಲ್ಮಾನ ಬಿನ್ ಹಮಾದ ಅಲ್ ಖಲಿಫಾರೊಂದಿಗೆ ದೂರವಾಣಿಯಲ್ಲಿ ಸಂವಾದ ಮಾಡಿದರು. ಈ ಸಂದರ್ಭದಲ್ಲಿ ಅವರಲ್ಲಿ ದ್ವಿಪಕ್ಷೀಯ ಸಂಬಂಧಗಳ ಮೇಲೆ ಚರ್ಚೆಗಳಾದವು. […]

Advertisement

Wordpress Social Share Plugin powered by Ultimatelysocial