ಸಂಯುಕ್ತ ಅರಬ ಅಮೆರಾಟ್ಸನ ಅಬುಧಾಬಿ ಮತ್ತು ದುಬೈ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನ ನಿರ್ಮಾಣವಾಗಲಿದೆ.

ಪ್ರಧಾನ ಮಂತ್ರಿ ಮೋದಿಯವರಿಂದ ಕೃತಜ್ಞತೆ !

ಮನಾಮಾ(ಬಹರೀನ) – ಸಂಯುಕ್ತ ಅರಬ ಅಮೆರಾಟ್ಸನ ಅಬುಧಾಬಿ ಮತ್ತು ದುಬೈ ಬಳಿಕ ಈಗ ಬಹರೀನನಲ್ಲಿಯೂ ಹಿಂದೂ ದೇವಸ್ಥಾನ ನಿರ್ಮಾಣವಾಗಲಿದೆ.

ಇದಕ್ಕಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿಯವರು ಬಹರೀನ ಪ್ರಧಾನಮಂತ್ರಿ ಸಲ್ಮಾನ ಬಿನ್ ಹಮಾದ ಅಲ್ ಖಲಿಫಾರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸಲ್ಮಾನ ಬಿನ್ ಹಮಾದ ಅಲ್ ಖಲಿಫಾರೊಂದಿಗೆ ದೂರವಾಣಿಯಲ್ಲಿ ಸಂವಾದ ಮಾಡಿದರು. ಈ ಸಂದರ್ಭದಲ್ಲಿ ಅವರಲ್ಲಿ ದ್ವಿಪಕ್ಷೀಯ ಸಂಬಂಧಗಳ ಮೇಲೆ ಚರ್ಚೆಗಳಾದವು. ಭಾರತ ಮತ್ತು ಬಹರೀನ ಈ ಉಭಯ ದೇಶಗಳು ೨೦೨೧-೨೨ರಲ್ಲಿ ತಮ್ಮ ರಾಜಕೀಯ ಸಂಬಂಧಗಳ ಸ್ಥಾಪನೆಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿವೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಈ ಸಂವಾದದ ವಿಷಯದ ಮಾಹಿತಿಯನ್ನು ನೀಡಿದರು. ಅವರು ಮಾತನಾಡುತ್ತಾ, ಸ್ವಾಮಿ ನಾರಾಯಣ ಮಂದಿರಕ್ಕಾಗಿ ಭೂಮಿ ಹಂಚಿಕೆಯ ನಿರ್ಣಯದೊಂದಿಗೆ ಭಾರತೀಯ ಸಮುದಾಯಗಳ ಅವಶ್ಯಕತೆಯ ಬಗ್ಗೆ ಗಮನಹರಿಸಿದಕ್ಕೆ ನಾನು ಖಲಿಫಾರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದೇನೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಘಟನೆಳಿಗೆ ದೊಡ್ಡ ಬಜೆಟ್ ಸಿನಿಮಾಗಳ ಮೇಲೆಯೇ ಕಣ್ಣು!

Sat Feb 5 , 2022
ಕೆಲವು ಜನ, ಸಂಘಟನೆಳಿಗೆ ದೊಡ್ಡ ಬಜೆಟ್ ಸಿನಿಮಾಗಳ ಮೇಲೆಯೇ ಕಣ್ಣು. ಯಾವುದೇ ದೊಡ್ಡ ಬಜೆಟ್‌ನ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಕ್ಯಾತೆ ತೆಗೆದು ಬ್ಯಾನ್ ಆಗಬೇಕು, ಸೆನ್ಸಾರ್ ಆಗಬೇಕು ಎಂದೇನೇನೋ ಸುಖಾ ಸುಮ್ಮನೆ ವಿವಾದ ಮಾಡುತ್ತಾರೆ.’ಕೆಜಿಎಫ್’, ‘ಬಾಹುಬಲಿ’ ಸೇರಿದಂತೆ ಹಲವು ಸಿನಿಮಾಗಳು ಈ ಸಮಸ್ಯೆ ಎದುರಿಸಿವೆ.ಬಾಲಿವುಡ್‌ನಲ್ಲಿಯಂತೂ ಈ ಸಮಸ್ಯೆ ಹೆಚ್ಚು. ಕಳೆದ ಬಾರಿ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ನಟಿಸಿದ್ದ ‘ಪದ್ಮಾವತ್’ ಸಿನಿಮಾ ಬಿಡುಗಡೆ ಸಮಯದಲ್ಲಿ ಕಿರಿಕ್ ತೆಗೆದಿದ್ದ […]

Advertisement

Wordpress Social Share Plugin powered by Ultimatelysocial