ಎಂದಿಗೂ ಒಗ್ಗಟ್ಟಾಗದ, ಜತೆ ಇದ್ದೋರನ್ನೂ ಮುಳುಗಿಸೋ ಪಕ್ಷಕ್ಕೆ ದೊಡ್ಡ ನಮಸ್ಕಾರ ಎಂದ ಪ್ರಶಾಂತ್ ಕಿಶೋರ್

ಪಟ್ನಾ: ಬಹುತೇಕ ಎಲ್ಲಾ ಪಕ್ಷಗಳ ಜತೆಯಲ್ಲಿಯೂ ಗುರುತಿಸಿಕೊಂಡು, ಪಕ್ಷಗಳ ಗೆಲುವಿಗೆ ಬಹು ದೊಡ್ಡ ಪಾತ್ರ ವಹಿಸುತ್ತಿರುವ ಪ್ರಖ್ಯಾತ ಚುನಾವಣಾ ನೀತಿ ತಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು.

ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಪ್ರಶಾಂತ್​ ಕಿಶೋರ್​, ದೊಡ್ಡ ನಮಸ್ಕಾರ ಮಾಡಿ, ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಮಾತುಕತೆ ಅಥವಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್​ನವರು ತಾವು ಮುಳುಗುವುದು ಮಾತ್ರವಲ್ಲದೇ, ತಮ್ಮ ಜತೆ ಇರೋರನ್ನೂ ಮುಳುಗಿಸುತ್ತಾರೆ. ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಜೊತೆ ಹೆಜ್ಜೆ ಹಾಕುವುದಿಲ್ಲ ಎಂದರು. ಕಾಂಗ್ರೆಸ್​ ಮತ್ತು ಬಿಜೆಪಿಗೆ ಪರ್ಯಾಯವಾಗಿ ಪಕ್ಷ ಕಟ್ಟುವ ತಯಾರಿಯಲ್ಲಿರುವ ಪ್ರಶಾಂತ್​ ಕಿಶೋರ್​, ಬಿಹಾರ ರಾಜ್ಯದ ಪ್ರವಾಸ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ತಮ್ಮ ತವರು ರಾಜ್ಯದಲ್ಲಿ ಪರ್ಯಾಯ ಸರ್ಕಾರದ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಲು ಅವರು ಬಿಹಾರಕ್ಕೆ ತೆರಳಿದ್ದಾರೆ.

ಕಾಂಗ್ರೆಸ್ ಎಂದಿಗೂ ಒಗ್ಗಟ್ಟಾಗದ ಪಕ್ಷ ಎಂದ ಅವರು, ಈಗಿನ ಕಾಂಗ್ರೆಸ್ ಮುಖ್ಯಸ್ಥರು ಕೆಳಗಿಳಿದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಒಂದು ವೇಳೆ ನಾನು ಹೋದರೆ ನಾನೂ ಮುಳುಗುತ್ತೇನೆ ಎಂದರು.

ತಾವು ಗುರುತಿಸಿಕೊಂಡಿರುವ ಪಕ್ಷಗಳೆಲ್ಲವೂ ಗೆದ್ದ ಬಗ್ಗೆ ವಿವರಣೆ ನೀಡಿದ ಅವರು, 2015ರಲ್ಲಿ ಬಿಹಾರ ಗೆದ್ದೆವು. 2017ರಲ್ಲಿ ಪಂಜಾಬ್ ಗೆದ್ದೆವು. 2019ರಲ್ಲಿ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಯನ್ನು ಗೆಲ್ಲಿಸಿದ್ದೆವು. ತಮಿಳುನಾಡು ಮತ್ತು ಬಂಗಾಳದಲ್ಲಿ ಗೆದ್ದೆವು. 11 ವರ್ಷಗಳಲ್ಲಿ ನಾವು ಸೋತಿದ್ದು ಒಂದೇ ಒಂದು ಚುನಾವಣೆ. 2017ರ ಉತ್ತರ ಪ್ರದೇಶ ಚುನಾವಣೆ. ಅದಕ್ಕಾಗಿಯೇ ನಾನು ಎಂದಿಗೂ ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡಬಾರದು ಎಂದು ನಿರ್ಧರಿಸಿದ್ದೇನೆ’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೇತನ ರಾಜ್ ಸಾವು ಮಾಸುವ ಮೊದಲೇ ಇನ್ನೊಂದು Fat Surgery ಎಡವಟ್ಟು..! ಸರ್ಜರಿ ಮಾಡಿದ 10 ದಿನದಲ್ಲಿ ಸೈಡ್ ಎಫೆಕ್ಟ್

Wed Jun 1 , 2022
ಬೆಂಗಳೂರು : ಬಳುಕುವ ಬಳ್ಳಿಯಾಗಲು ಹೊರಟ ನಟಿ ಚೇತನ ರಾಜ್ ಸಾವು ಪ್ರಕರಣ ಮಾಸುವ ಮೊದಲೇ ಇನ್ನೊಂದು ಫ್ಯಾಟ್ ಕರಗಿಸುವ ಸರ್ಜರಿ ಮಾಡಲು ಹೋಗಿ ಎಡವಟ್ಟಾಗಿರುವ ವಿಚಾರ ಬೆಳಕಿಗೆ ಬಂದಿದೆ. ದೆಹಲಿ ಮೂಲದ ಯುವತಿ ಅಕಾಂಕ್ಷ ಖಾಸಗಿ ಕಂಪನಿಯಲ್ಲಿ ಎಚ್‍ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಬೆಂಗಳೂರಿನ ಎಂ.ಎಸ್ ಪಾಳ್ಯದ ಅವೇಕ್ಷಾ ಆಸ್ಪತ್ರೆಯಲ್ಲಿ ಸರ್ಜರಿ ಪ್ರಕ್ರಿಯೆಯಲ್ಲಿ ಪ್ರೆಸ್ಟಿನ್ ಕೇರ್ ಮೂಲಕ ಸರ್ಜರಿ ಮಾಡಿಸಿಕೊಡಿದ್ದರು. ಆದರೆ ಅವರಿಗೆ ಸರ್ಜರಿ ಮಾಡಿದ ಹತ್ತೇ ದಿನದಲ್ಲಿ ಸೈಡ್ […]

Advertisement

Wordpress Social Share Plugin powered by Ultimatelysocial