ಎಣ್ಣೆ ಬಿಡ್ತಿಲ್ಲ, ದುಡ್ಡು ಉಳಿತಿಲ್ಲ. ಹುಂಜಕ್ಕೆ ಒಂದೇ ಒಂದು ಪೆಗ್​ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಾಲೀಕ!

ಮುಂಬೈ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಹುಂಜವೊಂದರ ರಾಯಲ್​ ಜೀವನ ನೋಡಿದ್ರೆ ಎಲ್ಲರ ಹುಬ್ಬೇರುವುದು ಗ್ಯಾರೆಂಟಿ. ಈ ಹುಂಜಕ್ಕೆ ಲೋಕಲ್​ ಮದ್ಯ ಅಲ್ಲ ಫಾರೀನ್​ ಮದ್ಯವೇ ಜೀವ ಉಳಿಸುವ ಔಷಧಿಯಾಗಿದೆ. ಎಣ್ಣೆ ಇಲ್ಲ ಅಂದ್ರೆ ಈ ಹುಂಜ ನೀರು ಕೂಡ ಮುಟ್ಟಲ್ಲ.ಅಷ್ಟರಮಟ್ಟಿಗೆ ಈ ಹುಂಜ ಮದ್ಯ ವ್ಯಸನಿಯಾಗಿದೆ.ಹುಂಜ ಅದ್ಹೇಗೆ ಮದ್ಯದ ಅಮೇಲೇರಿಸಿಕೊಂಡಿತು ಎಂಬ ಎಲ್ಲರ ಕುತೂಹಲಕ್ಕೆ ಉತ್ತರ ಮುಂದಿದೆ. ಭಂಡಾರ ಜಿಲ್ಲೆಯ ಪಿಪರಿ ಗ್ರಾಮದ ನಿವಾಸಿ ಭಾವು ಕಟೋರೆ ತನ್ನ ಜೀವನದಲ್ಲಿ ಒಮ್ಮೆಯು ಎಣ್ಣೆಯನ್ನು ಮುಟ್ಟಿಲ್ಲ. ಆದರೆ, ಎಲ್ಲವೂ ನಾವಂದುಕೊಂಡಂತೆ ಇರುವುದಿಲ್ಲ ಎಂಬ ಮಾತಿನಂತೆ ಅವರ ಜೀವನದಲ್ಲಿ ಒಂದು ವಿಚಿತ್ರ ಸನ್ನಿವೇಶಕ್ಕೆ ಕಟೋರೆ ಸಿಕ್ಕಿಬೀಳಬೇಕಾಯಿತು.ಅಂದಹಾಗೆ ಕಟೋರೆ ಅವರು ಕೋಳಿ ಸಾಕಾಣಿಕೆ ವೃತ್ತಿಯಲ್ಲಿದ್ದಾರೆ. ಅನೇಕ ರೀತಿಯ ಕೋಳಿಗಳನ್ನು ತಮ್ಮ ಫಾರ್ಮ್​ನಲ್ಲಿ ಬೆಳೆಸುತ್ತಿದ್ದಾರೆ. ಆದರೆ, ಹುಂಜವೊಂದು ಮಾತ್ರ ಕಟೋರೆ ಅವರ ಮನೆಯಲ್ಲಿ ರಾಯಲ್​ ಜೀವನ ನಡೆಸುತ್ತಿದೆ. ಕಟೋರೆ ಅವರು ಹುಂಜಗೆ ಒಳ್ಳೊಳ್ಳೆ ಆಹಾರವನ್ನು ಸಹ ನೀಡುತ್ತಿದ್ದಾರೆ. ಆದರೆ, ಒಂದು ದಿನ ಹುಂಜ ಅನಾರೋಗ್ಯಕ್ಕೀಡಾಗಿದ್ದೇ ಕಟೋರೆ ಜೀವನದಲ್ಲಿ ವಿಚಿತ್ರ ಅನುಭವಗಳು ಎದುರಾಯಿತು.ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹುಂಜಗೆ ಸ್ಥಳೀಯ ವ್ಯಕ್ತಿಯ ಸಲಹೆಯ ಮೇರೆಗೆ ಕಟೋರೆ ಅವರು ಮದ್ಯ ಸೇವನೆ ಮಾಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಹುಂಜ ಸಂಪೂರ್ಣ ಚೇತರಿಸಿಕೊಂಡು, ಸಹಜ ಜೀವನಕ್ಕೆ ಮರಳಿತು. ಆದರೆ, ಅಸಲಿ ಆಟ ಶುರುವಾಗಿದ್ದೇ ಇಲ್ಲಿಂದ. ಅದೇನಪ್ಪಾ ಅಂದರೆ, ಇಲ್ಲಿಂದಾಚೆಗೆ ಹುಂಜ ಆಹಾರವನ್ನೇ ಸೇವಿಸಲಿಲ್ಲ. ನೀರು ಕೊಟ್ಟರು ಮುಟ್ಟಲಿಲ್ಲ.ಹುಂಜಗೆ ಏನಾಯಿತು ಎಂದು ಕಟೋರೆ ಅವರು ಚಿಂತಿಸುತ್ತಿರುವಾಗ ಮಾರನೇ ದಿನ ಕಟೋರೆ ಒಂದು ಗ್ಲಾಸ್​ ಮದ್ಯವನ್ನು ನೀಡಿದ ಕೂಡಲೇ ಹುಂಜ ಗಟಗಟನೆ ಕುಡಿದು ಬಿಟ್ಟಿತು. ಇದನ್ನು ನೋಡಿದ ಮಾಲೀಕ ಕಟೋರೆ ಒಂದು ಕ್ಷಣ ಶಾಕ್​ ಆದರು. ಮೊದಲ ನೋಟದಲ್ಲೇ ಪ್ರೀತಿ ಎನ್ನುವಂತೆ ಮೊದಲ ಕುಡಿತದಲ್ಲೇ ಹುಂಜ ಎಣ್ಣೆಗೆ ಮಾರುಹೋಗಿ ಅದರ ದಾಸನಾಗಿಬಿಟ್ಟಿದೆ.ಇದೀಗ ಹುಂಜಗೆ ನಿತ್ಯವೂ ಎಣ್ಣೆ ಬೇಕೇ ಬೇಕು. ಹುಂಜನಿಗೆಂದೇ ಪ್ರತಿ ತಿಂಗಳು 2 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಈ ವೆಚ್ಚವನ್ನು ಭರಿಸಲು ಸಾಧ್ಯವಾಗದೇ ಕಟೋರೆ ಅವರು ಪಶುವೈದ್ಯರನ್ನು ಸಂಪರ್ಕಿಸಿದ್ದಾರೆ. ಮದ್ಯದ ವಾಸನೆಯ ವಿಟಮಿನ್ ಮಾತ್ರೆಗಳನ್ನು ನೀಡಲು ಪ್ರಾರಂಭಿಸುವುದು ಸೂಕ್ತ ಎಂದು ಕಟೋರೆಗೆ ಸಲಹೆ ನೀಡಲಾಗಿದೆ. ಇನ್ನು ಹುಂಜನ ಈ ವಿಚಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಕಟೋರೆ ಅವರ ಮನೆಯ ಮುಂದೆ ಪ್ರತಿದಿನ ಜಮಾಯಿಸುತ್ತಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ನಿಜಕ್ಕೂ ಇದು ಹುಬ್ಬೇರಿಸುವ ವಿಚಾರವೇ ಸರಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲೆಹರ್ ಸಿಂಗ್ ಕಲಬುರಗಿ ವಿಳಾಸ: ಬಿಜೆಪಿ ಗೇಮ್ ಪ್ಲಾನ್‌ಗೆ ಖರ್ಗೆ ಅಂಡ್ ಟೀಮ್ ಶಾಕ್..!

Sun Jun 5 , 2022
ಬೆಂಗಳೂರು,ಜೂ.5- ರಾಜ್ಯಸಭೆಗೆ ಸ್ರ್ಪಧಿಸಿರುವ ಲೆಹರ್ ಸಿಂಗ್ ಸಿರೋಯ ಅವರು ಪ್ರಮಾಣಪತ್ರದಲ್ಲಿ ತಮ್ಮ ನಿವಾಸದ ವಿಳಾಸವನ್ನು ಕಲಬುರಗಿ ಎಂದು ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 8 ತಿಂಗಳು ಕಳೆದರೂ ಕೂಡ ಈವರೆಗೂ ಮೇಯರ್ ಉಪಮೇಯರ್ ಆಯ್ಕೆಯಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಹಿಡಿತದಲ್ಲಿರುವ ನಗರದಲ್ಲಿ ಪಾಲಿಕೆಯ ಅಧಿಕಾರ ಹಿಡಿಯಬೇಕೆಂದು ಪಣ ತೊಟ್ಟಿರುವ ಬಿಜೆಪಿ ಚುನಾವಣೆ ನಡೆದ ದಿನದಿಂದಲೂ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಸದೆ ಮೀನಾಮೇಷ ಎಣಿಸುತ್ತಿದೆ.ಪಾಲಿಕೆ ಚುನಾವಣೆಯಲ್ಲಿ […]

Advertisement

Wordpress Social Share Plugin powered by Ultimatelysocial