ಪ್ಲಸ್‌ ಆಗುತ್ತಾ ಗಾಂಧಿನಗರದ ಲಕ್ಕಾಚಾರ..?-ಭಜರಂಗಿ 2 ಟ್ರೇಲರ್ ಔಟ್

ಪಿಚ್‌ಗೆ ಎಂಟ್ರಿ ಆಗೋಕು ಮುಂಚೆ ಬ್ಯಾಟ್‌ ಹಿಡಿಯೋದು ಹೇಗೆ ಅಂತ ಕಲ್ತ್ಕೊ ಇದುಕ್ಕೆ ಅಂತ ಒಂದು ಸ್ಟೈಲ್‌ ಇದೆ, ಗ್ರಿಪ್‌ ಇದೆ,ಲಾಂಗ್‌ ಹಿಡಿಯೋರೆಲ್ಲಾ ರೌಡಿಗಳಾಗಲ್ಲ ಸೌಂಡ್‌ ಕೊಡೊರೆಲ್ಲ ಪಂಟ್ರುಗಳಾಗಲ್ಲ. ಹೀರೋ ಆಗಬೇಕು ಅಂತ ಇಂಡಸ್ಟ್ರಿಗೆ ಬಂದೊರೆಲ್ಲಾ ಹೀರೋಯಿಸಂ ತೊರ್ಸ್ ಬೊದು ಅಷ್ಟೇ ,ಆದ್ರೆ ಹ್ಯಾಟ್ರಿಕ್‌ ಹೊಡೆದು ಟ್ರೀಕ್‌ ಅಲ್ಲೇ  ಟ್ರೀಪ್‌ ಹಾಕಿಸಿ  ಲಾಂಗ್‌ ಅಲ್ಲೇ  ಸೂಪ್‌ ಕೂಡಿಸೋದು ಹೇಗೆ ಅಂತ ತೊರಿಸಿಕೊಟಿದ್ದೆ ಭಜ ಭಜ ಭಜರಂಗಿಯ ಅವತಾರ ಶಿವರಾಜ್‌ ಕುಮಾರ್.‌

ಅಯ್ಯೋ ತಪ್‌ ತಿಳಿಕೊಬೇಡಿ ಸ್ವಾಮಿ, ಭಜರೇ ಭಜರೇ ಭಜರಂಗಿ ಅಂತ ಭರ್ಜರಿಯಾಗಿ ಭಜರಂಗಿ ಟ್ರೇಲರ್‌ ಬಿಡುಗಡೆಯಾಗಿದೆ. ನಿರ್ದೇಶಕ ಎ. ಹರ್ಷ  ಮತ್ತು ಶಿವರಾಜ್​ಕುಮಾರ್ ಕಾಂಬಿನೇಷನ್​ನಲ್ಲಿ ಮೂಡಿ ಬಂದಿರುವ ‘ಭಜರಂಗಿ 2’  ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.  ಈಗಾಗಲೇ ಈ ಸಿನಿಮಾದ ಟೀಸರ್​ ಮತ್ತು ಪೋಸ್ಟರ್​ಗಳು ರಿಲೀಸ್​ ಆಗಿದ್ದು, ಸಿನಿಮಾದ ನಿರೀಕ್ಷೆಯನ್ನು ಹೆಚ್ಚಿಸಿವೆ. 2013ರಲ್ಲಿ ತೆರೆಕಂಡ ಭಜರಂಗಿ ಸಿನಿಮಾದ ಮುಂಧೆವರೆದ ಭಾಗವೇ ಈ ಭಜರಂಗಿ 2  ಎನ್ನಲಾಗುತ್ತಿದೆ. ಜಯಣ್ಣ-ಭೋಗೇಂದ್ರ  ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಅಕ್ಟೋಬರ್ 29ರಂದು ತೆರೆಗಪ್ಪಳಿಸಲಿದೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್​ ಜನ್ಯ  ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಇದೆ ಅಂದಮೇಲೆ ರ್ರಾಂ ರ್ರೀಂ ಪಟ್‌  ಅಂತ ಮಾಂತ್ರಿಕ ಸ್ಟೈಲ್‌ ಅಲ್ಲಿ ಹೇಳೋಕೆ ನಾವ್‌ ರೇಡಿಯಾಗೊಣ.

ಅತೀಂದ್ರಿಯ ಶಕ್ತಿಯ​ ಅಂಶಗಳನ್ನು ಹೊಂದಿರುವ ಈ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್  ‘ಭಜರಂಗಿ 2’ ಟ್ರೇಲರ್​ನಲ್ಲಿ ತೋರಿಸಲಾಗಿದೆ. ನಟ ಶಿವರಾಜ್​ಕುಮಾರ್​, ನಟಿ ಭಾವನಾ ಮೆನನ್​ ಮಾತ್ರವಲ್ಲದೇ ಎಲ್ಲ ಪಾತ್ರಗಳನ್ನು ಟ್ರೇಲರ್​ನಲ್ಲಿ ಅದ್ಬುತವಾಗಿ ​ ಆಗಿ ತೋರಿಸಲಾಗಿದೆ. ಈ ಟ್ರೇಲರ್ ನೋಡಿದ ಮೇಲಂತೂ ಯಾವಾಗ ಸಿನಿಮಾ ನೋಡ್ತಿವೋ ಅಂತ ವೀಕ್ಷಕರು ಕಾಯುತಿದ್ದಾರೆ.

ಅತೀಂದ್ರಿಯ ಶಕ್ತಿಯಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆಯಕ್ಷನ್ ದೃಶ್ಯಗಳು, ಸಿನಿಮಾದ ವಿಭಿನ್ನವಾದ ಕಥಾವಸ್ತು, ಎಲ್ಲದಕ್ಕಿಂತ ಹೆಚ್ಚಾಗಿ ಶಿವರಾಜ್‌ಕುಮಾರ್‌ ಮತ್ತು ಹರ್ಷ ಕಾಂಬಿನೇಷನ್​ ಈ ಚಿತ್ರದ ಪ್ಲಸ್​ ಪಾಯಿಂಟ್​ ಆಗಿದೆ. ಈ ಪವರ್​ಫುಲ್​ ಕಾಂಬಿನೇಷನ್​ ಸಿನಿಮಾ ಮಾಡಿದರೆ ಅದು ಪಕ್ಕಾ ಸಕ್ಸಸ್‌ ಎಂಬುದು ಗಾಂಧಿನಗರದ ಲೆಕ್ಕಾಚಾರ. ಕೆಲವೇ ದಿನಗಳ ಹಿಂದೆ ನಟಿ ಭಾವಾನಾ, ಹಿರಿಯ ನಟಿ ಶ್ರುತಿ, ಖಳನಟ ಲೋಕಿ, ಅವರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿತ್ತು.

ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2′ ನಿರ್ಮಾಣ ಆಗಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಭಜರಂಗಿ 2’ ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ ಕೋವಿಡ್ ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ ‘ಭಜರಂಗಿ 2’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊಂಚ ತಡವಾಗಿದ್ದವು. ಅ.29ರಂದು ‘ಭಜರಂಗಿ 2’ ಚಿತ್ರ ನಿಮ್ಮೆಲ್ಲರ ಮುಂದೆ ಬರಲಿದೆ.

ನಟ ಶಿವ ರಾಜ್​ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಭಜರಂಗಿ-2 ಚಿತ್ರತಂಡ ಟೀಸರ್​ ಅನ್ನು ಬಿಡುಗಡೆ ಮಾಡಿತ್ತು. ಆ ಮೂಲಕ ಶಿವಣ್ಣನ ಕಡೆಯಿಂದ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿತ್ತು. ಬಿಡುಗಡೆಗೊಂಡ ಟೀಸರ್​ ಯ್ಯೂಟೂಬ್​ನಲ್ಲಿ ಒಂದೇ ದಿನದಲ್ಲಿ ಸಾಕಷ್ಟು ಹವಾ ಸೃಷ್ಟಿಸಿತ್ತು. ಬಿಡುಗಡೆಗೊಂಡ ಟೀಸರ್​ 24 ಗಂಟೆಗಳ ಒಳಗೆ ಅತಿ ಹೆಚ್ಚು ವೀಕ್ಷಣೆಕಂಡ ಕೆಲವೇ ಕೆಲವು ಕನ್ನಡದ ಸಿನಿಮಾ ಟೀಸರ್​ಗಳ ಪೈಕಿಯಲ್ಲಿ  ಭಜರಂಗಿ-2 ಸೇರಿಕೊಂಡಿದೆ.

ಅದ್ಧೂರಿ ಸೆಟ್‌ ಗಳು, ಭಯ ಹುಟ್ಟಿಸುವ ಭಯಾನಕ ಪಾತ್ರಗಳು, ಬೆಂಕಿಯುಗುಳುವ ಕಂಗಳು… ಒಂದಾ. ಎರಡಾ…. “ಭಜರಂಗಿ-2′ ಟ್ರೇಲರ್‌ ನೋಡಿದಾಗ ನಿಮಗೆ ಸಾಕಷ್ಟು ವಿಭಿನ್ನ ಅಂಶಗಳು ಕಾಣಸಿಕೊಳ್ಳುತ್ತೆ.ಒಂದು ಫ್ಯಾಂಟಸಿ ಲೋಕವನ್ನೇ ಧರೆಗಿಳಿಸಿದ್ದಾರೆ.ಕನ್ನಡಕ್ಕೆ ಹೊಸತೆನಿಸುವ ಈ ಫ್ಯಾಂಟಸಿ ಡ್ರಾಮಾದಲ್ಲಿ ಒಂದಷ್ಟು ವಿಚಿತ್ರ, ವಿಕ್ಷಿಪ್ತ ಪಾತ್ರಗಳು ಕಾಣಸಿಗುತ್ತವೆ. ಜೊತೆಗೆ ಅಗೋಚರ ಶಕ್ತಿಗಳ ಛಾಯೆ, ಮಾಯೆ ಎಲ್ಲವೂ ಈ ಟ್ರೇಲರ್‌ನಲ್ಲಿವೆ.‌

 

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುತ್ರನನ್ನು ಭೇಟಿಯಾದ ಬಳಿಕ ಶಾರುಖ್ ಖಾನ್ ಗೆ ಕಾಯಿದಿತ್ತು ಬಿಗ್ ಶಾಕ್..!

Thu Oct 21 , 2021
ಡ್ರಗ್ಸ್‌ ಜಾಲದಲ್ಲಿ ಅಕ್ಟೋಬರ್‌ 8 ರಂದು ಅರೆಸ್ಟ್‌ಯಾಗಿರುವ ಶಾರೂಕ್‌ ಪುತ್ರ ಅರ್ಯನ್‌ ಖಾನ್‌ ನನ್ನು ಭೇಟಿ ಮಾಡಲು ಮುಂಬೈನ ಅಥೋರ ಜೈಲ್‌ಗೆ ಇಂದು ಬೆಳಂಬೆಳಗ್ಗೆ ಹೊಗಿರುವರ ಶಾರೂಕ್‌ ಖಾನ್‌ ಗೆ  ಎನ್‌ ಸಿ ಬಿ ಯವರು ಬಿಗ್‌ ಶಾಕ್‌ ನೀಡಿದ್ದಾರೆ…. ಯೆಸ್‌ ಮುಂಬೈನಲ್ಲಿರುವ ಸೂಪರ್‌ ಸ್ಟಾರ್‌ ಶಾರೂಖ್‌ ಖಾನ್‌ ಮನ್ನತ್‌ ಮೇಲೆ ಧಾಳಿ ಮಾಡಿದ್ದ ಎನ್‌ ಸಿ ಬಿ…. ಇನ್ನೊಂದೆಡೆ ಎನ್ ಸಿಬಿಯ ಡ್ರಗ್ ವಿರೋಧಿ ತಂಡ ನಟಿ ಅನನ್ಯಾ […]

Advertisement

Wordpress Social Share Plugin powered by Ultimatelysocial