ಫಾರೂಕ್ ಅಬ್ದುಲ್ಲಾಗೆ ಜಾರಿ ನಿರ್ದೇಶನಾಲಯ ಸಮನ್ಸ್

ನವದೆಹಲಿ, ಮೇ 27- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಮೇ 31 ರಂದು ದೆಹಲಿಯ ಕಚೇರಿಗೆ ಹಾಜರಾಗುವಂತೆ ನ್ಯಾಷನಲ್ ಕಾನರೆನ್ಸ್ (ಎನ್‍ಸಿ) ಅಧ್ಯಕ್ಷ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್ ನೀಡಿದೆ.

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಹಣಕಾಸು ಅಕ್ರಮಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ದೆಹಲಿಯಲ್ಲಿರುವ ಪ್ರಧಾನ ಕಚೇರಿಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಸಮನ್ಸ್‍ಗೆ ಪ್ರತಿಕ್ರಿಯಿಸಿದ ಅವರ ನ್ಯಾಷನಲ್ ಕಾನರೆನ್ಸ್ ಪಕ್ಷ, ಸಂಸದರೂ ಆಗಿರುವ ಅಬ್ದುಲ್ಲಾ ಅವರು ಅಧಿಕಾರಿಗಳೊಂದಿಗೆ ಮೊದಲಿನಂತೆ ಸಹಕರಿಸಲಿದ್ದಾರೆ ಎಂದು ಸ್ಪಷ್ಟ ಪಡಿಸಿದೆ.

ಫಾರೂಕ್ ಅಬ್ದುಲ್ಲಾ ಅವರಿಗೆ ಇಡಿ ಸಮನ್ಸ್ ನೀಡಿರುವುದು ಹೊಸದೇನಲ್ಲ. ದೇಶದಲ್ಲಿರುವ ವಿರೋಧ ಪಕ್ಷಗಳ ಎಲ್ಲಾ ನಾಯಕರಿಗೆ ಇದು ಸಾಮಾನ್ಯವಾಗಿದೆ. ಅಬ್ದುಲ್ಲಾ ಯಾವುದೇ ತಪ್ಪು ಮಾಡಿಲ್ಲ, ಹಾಗಾಗಿ ತನಿಖಾ ಸಂಸ್ಥೆಯೊಂದಿಎ ಸಹಕರಿಸಲಿದ್ದಾರೆ ಎಂದು ಪಕ್ಷ ಟ್ವೀಟ್ ಮಾಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 2020 ರಲ್ಲಿ ಅಬ್ದುಲ್ಲಾ ಅವರ 11.86 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು, ಹಲವಾರು ಬಾರಿ ವಿಚಾರಣೆ ನಡೆಸಿದೆ.

ಈ ಹಿಂದೆ ಜೆಕೆಸಿಎ ಅಧ್ಯಕ್ಷರಾಗಿದ್ದ ಅಬ್ದುಲ್ಲಾ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಬಿಸಿಸಿಐ ಪ್ರಾಯೋಜಿತ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು: ಕೆ.ಎಸ್. ಈಶ್ವರಪ್ಪ ಹೇಳಿಕೆ

Fri May 27 , 2022
ಶಿವಮೊಗ್ಗ: ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು. ಅವರು ಈ ದೇಶದ ಸಂವಿಧಾನ ಮತ್ತು ಕಾನೂನು ಹಾಗೂ ಸಂಸ್ಕೃತಿ ಗೌರವಿಸಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಹಿಜಾಬ್ ಈಗ ಮುಗಿದ ಅಧ್ಯಾಯ. ನ್ಯಾಯಾಲಯ ಈಗಾಗಲೇ ಸ್ಪಷ್ಠೀಕರಣ ನೀಡಿದೆ. ಕೆಲವು ರಾಷ್ಟ್ರದ್ರೋಹಿ ಶಕ್ತಿಗಳ ಚಿತಾವಣೆಯಿಂದ ಈ ರೀತಿಯ ವರ್ತನೆಗಳು ಪುನರಾವರ್ತನೆಯಾಗುತ್ತಿವೆ ಎಂದರು. ಮುಸಲ್ಮಾನರು ಭಾರತೀಯ […]

Advertisement

Wordpress Social Share Plugin powered by Ultimatelysocial