ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗ ಬೇರೆ ಉದ್ಯೋಗವೇ ಇಲ್ಲ.

ಶಿವಮೊಗ್ಗ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗ ಬೇರೆ ಉದ್ಯೋಗವೇ ಇಲ್ಲ. ಒಂದು ಮುಸಲ್ಮಾನರ ತೃಪ್ತಿಪಡಿಸೋದು, ಇನ್ನೊಂದು ಕಮಿಷನ್ ಬಗ್ಗೆ ಮಾತನಾಡೋದು. ಬೆಳಗ್ಗೆಯಿಂದ ರಾತ್ರಿವರೆಗೂ ಇದೇ ಕೆಲಸ ಅವರು ಮಾಡೋದು. ಸೋತರೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಕಿಡಿಕಾರಿದ್ದಾರೆ.

ಬುಧವಾರ ಬೆಳಗ್ಗೆ ಶಿವಮೊಗ್ಗದ ಹರ್ಷ ದ ಫರ್ನ್ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಶಾಂತಿಯಲ್ಲಿದ್ದ ರಾಜ್ಯವನ್ನು ಕೊಲೆ- ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೀತಿದೆ. ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡ್ತಾನೆ. ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋದಿಸುವ ಹೇಳಿಕೆ‌ ಕೊಡ್ತಾನೆ. ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಅವರು ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡಿಯೋದು ನೋಡ್ತಿದ್ದಾರೆ. ಆಸ್ಪತ್ರೆ, ದೇವಾಲಯ, ಪೊಲೀಸ್ ತಲೆಗಳನ್ನು ಹುಡುಕಿ ಕಲ್ಲು ಹೊಡೆಯುತ್ತಾರೆ. ಅಲ್ಲಾ ಹು ಅಕ್ಬರ್ ಜೊತೆಗೆ ಆರ್​ಎಸ್‌ಎಸ್ ಮುರ್ದಾಬಾದ್ ಘೋಷಣೆಗಳನ್ನೂ ಕೂಗಿದ್ದಾರೆ. ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು. ಇದನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗಳಿಗಿದೆ. ಆದರೆ, ನಾವು ಕಾನೂನು ಕೈಗೆ ತೆಗೆದುಕೊಳ್ಳಲು ಇಷ್ಟ ಪಡಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತೆ. ಗುಂಡಾಗಿರಿಗೆ ಪ್ರಚೋದನೆ ಕೊಟ್ಟು ಓಡಿಹೋದ ರಾಷ್ಟ್ರದ್ರೋಹಿ ಮೌಲ್ವಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು(ಕೆಜಿ ಹಳ್ಳಿ, ಡಿಜಿ ಹಳ್ಳಿ) ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ ಆಯ್ತು… ಇನ್ನೆಲ್ಲಿ ಗಲಭೆ ಮಾಡ್ತಾರೋ ಗೊತ್ತಾಗಲ್ಲ, ಗಮನ ಹರಿಸಬೇಕು. ಈ ರೀತಿ ಕೊಲೆ, ದೊಂಬಿ ಮಾಡುವ ವ್ಯಕ್ತಿಗಳನ್ನು ಬಿಡಬಾರದು. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ, ಈಗಾಗಲೇ ಬಂದನ ಮಾಡಲಾಗುತ್ತಿದೆ. ಕೊಲೆ, ದೊಂಬಿ ಮಾಡೋದು, ಬೇಲ್ ಪಡೆದು ವಾಪಸ್ ಬರೋದು ಅವರಿಗೆ ಅಭ್ಯಾಸ ಆಗಿದೆ. ಗುಂಡಾ ಕಾಯ್ದೆ ಅಡಿ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು. ಇಷ್ಟೆಲ್ಲಾ ಘಟನೆ ನಡೆದರೂ ಕಾಂಗ್ರೆಸ್ ಇದನ್ನು ಖಂಡಿಸುವ ಕೆಲಸ ಮಾಡಿಲ್ಲ. ಕಲ್ಲಂಗಡಿ ಒಡೆದಾಗ ಎಲ್ಲರೂ ಬೊಬ್ಬೆ ಹಾಕಿದ್ರು… ಪೊಲೀಸರ ತಲೆ ಒಡೆದರೂ ಇಂದು ಮಾತನಾಡ್ತಿಲ್ಲ.. ಎಲ್ಲಾ ಮುಸಲ್ಮಾನರು ರಾಷ್ಟ್ರದ್ರೋಹಿಗಳು ಅಂತಾ ನಾನು ಹೇಳಲ್ಲ. ಇಂತಹ ಕೃತ್ಯದಲ್ಲಿ ಭಾಗವಹಿಸಿದವರು ರಾಷ್ಟ್ರದ್ರೋಹಿಗಳು. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಮುಸಲ್ಮಾನರ ಓಲೈಕೆ ಮಾಡುವ ಕೆಲಸ ಮಾಡ್ತಿದೆ ಎಂದು ಕಿಡಿಕಾರಿದರು.

ದಿಂಗಾಲೇಶ್ವರ ಶ್ರೀಗಳು ನನ್ನನ್ನು ನಿರಪರಾಧಿ, ಆರೋಪದಿಂದ ಮುಕ್ತರಾಗಿ ಹೊರಗೆ ಬರ್ತಾರೆ ಎಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದ ಈಶ್ವರಪ್ಪ, ಕಮಿಷನ್ ಆರೋಪದ ಬಗ್ಗೆ ಎಲ್ಲರೂ ಮಾತನಾಡ್ತಾರೆ. 10, 20, 40% ಅಂತಾ ಬಾಯಿಗೆ ಬಂದಂತೆ ಕಮಿಷನ್ ಬಗ್ಗೆ ಮಾತನಾಡ್ತಾರೆ. ಸಂತೋಷ್ ಪಾಟೀಲ್ ಸತ್ತ. ಯಾರು ಕಾರಣ ಅದಕ್ಕೆ? ಈಗ ತನಿಖೆ ನಡೆಯುತ್ತಿದೆ. ತನಿಖೆಯಾಗಿ ಸತ್ಯ ಹೊರಬರಲಿ. ನಾನು ಅದರ ಬಗ್ಗೆ ಮಾತನಾಡಲ್ಲ ಎಂದರು.

ಗುತ್ತಿಗೆದಾರ ಕನಕಪುರದ ಕೆಂಪಣ್ಣ ಕಾಂಗ್ರೆಸ್ ಏಜೆಂಟ್. ಬೀದಿಯಲ್ಲಿ ಹೋಗೋ ದಾಸಯ್ಯ ಹೇಳಿದ್ಕೆಲ್ಲಾ ಸರ್ಕಾರ ಉತ್ತರ ಕೋಡೋಕೆ ಆಗುತ್ತಾ? ಕೋಮುಗಲಭೆ ಸೃಷ್ಟಿಸೋದು, ಭ್ರಷ್ಟಾಚಾರದ ಬಗ್ಗೆ ಮಾತಾಡೋದು ಇಷ್ಟೇ ಅಗಿದೆ. ಇದನ್ನು ಕಂಟ್ರೋಲ್ ಮಾಡುವ ತಾಕತ್ತು ಸರ್ಕಾರಕ್ಕೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ತೀರ್ಮಾನ ತೆಗೆದುಕೊಳ್ತಾರೆ ಎಂದು ಈಶ್ವರಪ್ಪ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನಸೂರೆಗೊಳ್ಳುತ್ತಿದೆ "ಮೇಲೊಬ್ಬ ಮಾಯಾವಿ" ಟ್ರೇಲರ್ ‌.

Wed Apr 20 , 2022
ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ ಇದೇ ಇಪ್ಪತ್ತೊಂಭತ್ತರಂದು ಬಿಡುಗಡೆ . ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ “ಮೇಲೊಬ್ಬ ಮಾಯಾವಿ”. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ನಟ ಶ್ರೀನಗರ ಕಿಟ್ಟಿ ಅವರಿಂದ ಬಿಡುಗಡೆಯಾಯಿತು. ವಿಜಯ್ ನೆನಪಿನಲ್ಲೇ ಇಡೀ ಕಾರ್ಯಕ್ರಮ ನಡೆಯಿತು. ನಾನು ಕೂಡ ಪತ್ರಕರ್ತನಾಗಿ ಹಲವು ಚಿತ್ರಗಳ ವಿಮರ್ಶೆ ಮಾಡಿದ್ದೀನಿ. ಆದರೆ ಅದೇ ಬೇರೆ. ನಿರ್ದೇಶನ ಮಾಡುವುದೇ ಬೇರೆ. ನಿರ್ದೇಶನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಇನ್ನೂ ಈ ಚಿತ್ರದ […]

Advertisement

Wordpress Social Share Plugin powered by Ultimatelysocial