ಉದ್ಯೋಗಾಕಾಂಕ್ಷಿಗಳ ಭರ್ಜರಿ ಗುಡ್‌ ನ್ಯೂಸ್: ESIC ನ 3 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗಿಗಳ ರಾಜ್ಯ ವಿಮಾ ನಿಗಮವು ಉನ್ನತ ವಿಭಾಗದ ಕ್ಲರ್ಕ್​(ಯುಡಿಸಿ), ಸ್ಟೆನೋಗ್ರಾಫರ್​(ಸ್ಟೆನೋ) ಹಾಗೂ ಮಲ್ಟಿ ಟಾಸ್ಕಿಂಗ್​ ಸ್ಟಾಫ್​( ಎಂಟಿಎಸ್​) ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಇಎಸ್​ಐಸಿ ಅಧಿಕೃತ ವೆಬ್​ಸೈಟ್​ನಲ್ಲಿ ನೀಡಲಾದ ಅಧಿಸೂಚನೆಯ ಪ್ರಕಾರ ವಿವಿಧ ವಿಭಾಗಗಳಲ್ಲಿ ಒಟ್ಟು 3800 ಹುದ್ದೆಗಳು ಖಾಲಿ ಇದೆ ಎಂದು ತಿಳಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಅಧಿಕೃತ ವೆಬ್​ಸೈಟ್ https://www.esic.nic.in ಗೆ ಭೇಟಿ ನೀಡಬಹುದಾಗಿದೆ.

ಇಎಸ್​ಐಸಿ ನೇಮಕಾತಿ : ಖಾಲಿ ಇರುವ ಹುದ್ದೆಗಳ ವಿವರ

ಉನ್ನತ ವಿಭಾಗದ ಕ್ಲರ್ಕ್​ : 1700 ಹುದ್ದೆಗಳು

ಸ್ಟೆನೋಗ್ರಾಫರ್​ : 160 ಹುದ್ದೆಗಳು

ಮಲ್ಟಿ ಟಾಸ್ಕಿಂಗ್​ ಸ್ಟಾಫ್​ : 1930 ಹುದ್ದೆಗಳು

ಈ ಹುದ್ದೆಗೆ ಜನವರಿ 15ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಲು 2022ರ ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ ?

ರಿಜಿಸ್ಟ್ರೇಷನ್​ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಆಸಕ್ತ ಅಭ್ಯರ್ಥಿಗಳು ಇಸಿಐಎಸ್​ನ ಅಧಿಕೃತ ವೆಬ್​ಸೈಟ್​​ https://www.esic.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

BJP ಗೆ ಮತ ಹಾಕಿದ್ರೆ ಕೇವಲ 50 ರೂ.ಗೆ ಮದ್ಯ ನೀಡುವುದಾಗಿ ಘೋಷಣೆ;

Wed Dec 29 , 2021
ಅಮರಾವತಿ: ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ 70 ರೂಪಾಯಿಗೆ ಮದ್ಯ ಕೊಡಲಾಗುತ್ತದೆ. ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಅದರಲ್ಲಿಯೂ ಲಾಭ ಬಂದರೆ ಕೇವಲ 50 ರೂಪಾಯಿ ಕೊಡುತ್ತೇವೆ ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಹೇಳಿಕೆ ನೀಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇತ್ತೀಚಿನ […]

Advertisement

Wordpress Social Share Plugin powered by Ultimatelysocial