ಏನ್ತಾಗಿದೆ ಚೀನಾದಲ್ಲಿ..? ಮತ್ತೆ ಲಾಕ್​​ಡೌನ್, ಮತ್ತೆ ವೈರಸ್​ ಕಾಟ.. ಈ ಬಾರಿ ಏನ್ ಹೊಸತು?

ಚೀನಾದಲ್ಲಿ ಕೊರೊನಾ ಅಟ್ಟಹಾಸ ಮತ್ತೆ ಜೋರಾಗಿದ್ದು, ಶುಕ್ರವಾರ ಚೀನಾ ತನ್ನ ಚಂಗ್ಚುನ್ ಪ್ರಾಂತ್ಯದಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಿದೆ. 90 ಲಕ್ಷ ಜನಸಂಖ್ಯೆ ಇರೋ ಚಂಗ್ಚುನ್​ ನಗರದಲ್ಲಿ ಎರಡು ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.ಚಂಗ್ಚುನ್​​ ಪ್ರದೇಶದಲ್ಲಿ ಸರ್ಕಾರದ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಿದ್ದು, ಇದೇ ವೇಳೆ ವರ್ಕ್​​ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕುಟುಂಬದಲ್ಲಿ ಒಬ್ಬರು ಮಾತ್ರ ದಿನನಿತ್ಯ ಬಳಕೆ ವಸ್ತುಗಳ ಖರೀದಿಗಾಗಿ ಕುಟುಂಬದಿಂದ ಒಬ್ಬರು ಮಾತ್ರವೇ ಹೊರಗಡೆ ಆಗಮಿಸಬೇಕು ಎಂಬ ನಿಯಮನ್ನು ವಿಧಿಸಲಾಗಿದೆ ನಿತ್ಯ 3400 ಹೊಸ ಕೇಸ್​ಗಳು ಪತ್ತೆಚಂಗ್ಚುನ್​ ನಗರ ಜಿಲಿನ್​​ ಪ್ರಾವಿನ್ಸ್​ ಹಾಗೂ ಇಂಡಸ್ಟ್ರಿಯಲ್​​ ಪ್ರದೇಶದ ಸಮೀಪ ಇರೋ ಸ್ಥಳವಾಗಿದೆ. 2020ರ ಬಳಿಕ ಇದೇ ಮೊದಲ ಬಾರಿಗೆ ವಾರವೊಂದರಲ್ಲಿ ಒಂದು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ನಗರದಲ್ಲಿ ವರದಿಯಾಗುತ್ತಿದೆ. ಮೂರು ವಾರಗಳ ಹಿಂದೆ ಇಲ್ಲಿ ಪ್ರತಿದಿನ ಕೇವಲ 100 ಪ್ರಕರಣಗಳು ವರದಿಯಾಗುತ್ತಿದ್ದವು. ವರ್ಕ್​ ಫ್ರಮ್​ ಹೋಮ್​ ಜೊತೆಗೆ ಶಾಲೆಗಳಿಗೆ ರಜೆ ಘೋಷಿಸಿ ಆನ್​​ಲೈನ್​ ಶಿಕ್ಷಣಕ್ಕೆ ಒತ್ತು ನೀಡಲು ಸರ್ಕಾರ ಸೂಚನೆ ನೀಡಿದೆ.ಇನ್ನು ದೇಶಾದ್ಯಂತ ನಿತ್ಯ 3400 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಪ್ರಮುಖ 19 ಪ್ರಾಂತ್ಯಗಳಲ್ಲಿ ಡೆಲ್ಟಾ, ಒಮಿಕ್ರಾನ್ ಸೋಂಕುಗಳು ಹೆಚ್ಚಾಗಿ ಕಾಣಿಸಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಪ್ರೋಟೀನ್‌ನ ಹೆಚ್ಚಿನ ಪ್ರೊಟೀನ್ ಚಾಕೊಲೇಟ್ ತೆಂಗಿನಕಾಯಿ ಬಾರ್ ಉತ್ತಮ ರುಚಿ ಮತ್ತು ಶಕ್ತಿಯೊಂದಿಗೆ ಇಂಧನವನ್ನು ನೀಡುತ್ತದೆ

Sun Mar 13 , 2022
ಫಿಟ್ ಆಡಳಿತವನ್ನು ಸಾಧಿಸುವ ನಮ್ಮ ಅನ್ವೇಷಣೆಯಲ್ಲಿ, ನಾವು ಸೇವಿಸುವ ಆಹಾರವು ಜಿಮ್‌ನಲ್ಲಿ ನಮ್ಮ ಸಮಯವು ಫಲಪ್ರದವಾಗಿದೆಯೇ ಅಥವಾ ವ್ಯರ್ಥವಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ ಎಂಬ ತಿಳುವಳಿಕೆಯನ್ನು ನಾವು ಹೊಂದಿರುವುದಿಲ್ಲ. ಆಹಾರವು ಔಷಧವಾಗಿದೆ ಮತ್ತು ನಾವು ಅದನ್ನು ಶೀಘ್ರದಲ್ಲೇ ಅರ್ಥಮಾಡಿಕೊಳ್ಳಬೇಕು. ಆ ಮೂಲಕ, ಅಡೆತಡೆಯಿಲ್ಲದ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಾವು ಆರೋಗ್ಯಕರ, ಪೌಷ್ಟಿಕಾಂಶ-ಭರಿತ ಆಹಾರವನ್ನು ಸೇವಿಸಬೇಕು ಎಂದು ನಾನು ಕಲಿತಿದ್ದೇನೆ. ಕ್ಯಾಲೋರಿ-ಪ್ರಜ್ಞೆಯ ಆಹಾರವನ್ನು ಅನುಸರಿಸುತ್ತಿದ್ದರೂ, ನಾವು ತಿನ್ನುವ ದೈನಂದಿನ ಆಹಾರದಿಂದ ಕೆಲವು ಪೋಷಕಾಂಶಗಳ ಕೊರತೆಯನ್ನು […]

Advertisement

Wordpress Social Share Plugin powered by Ultimatelysocial