ಉಡುಪಿ: ಮಸೀದಿ ರಸ್ತೆಯಲ್ಲಿ ಅತಿಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು

ಮಸೀದಿ ರಸ್ತೆಯಲ್ಲಿ ಅತಿಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ.

ಬೆಳ್ಳಂಬೆಳಗ್ಗೆ ಉಡುಪಿ ನಗರಸಭೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರ ಹೋಟೆಲ್ ತೆರವುಗೊಳಿಸಲಾಗಿದೆ. ಹೋಟೆಲ್ ಮಾಲಿಕ ನಜೀರ್ ಅಹಮ್ಮದ್ ಝರಾಗೆ ಈಗಾಗಲೇ ಹಲವು ಬಾರಿ ಉಡುಪಿ ನಗರಸಭೆ ನೋಟಿಸ್ ನೀಡಿತ್ತು. ನೋಟಿಸ್‌ಗೆ ಸ್ಪಂದಿಸದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರಿಂದ ಅಂಗಡಿ ತೆರವುಗೊಳಿಸಲಾಗುತ್ತಿದೆ. ಕಟ್ಟಡದಲ್ಲಿನ ‘ಝೈತರ್ ಆನ್’ ಎಂಬ ಮಳಿಗೆಯನ್ನೂ ತೆರವುಗೊಳಿಸಲಾಗಿದೆ. ನಜೀರ್ ಅಹಮದ್ ಎಸ್​ಡಿಪಿಐ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.

ಉಡುಪಿ ನಗರಸಭೆ ಪೌರಾಯುಕ್ತ ಉದಯಕುಮಾರ್ ಶೆಟ್ಟಿ ಹೇಳಿದ್ದೇನು?

ಮಸೀದಿ ರಸ್ತೆಯಲ್ಲಿ ನಗರಸಭೆ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಉಡುಪಿ ನಗರಸಭೆ ಪೌರಾಯುಕ್ತ ಉದಯ್​ಕುಮಾರ್ ಶೆಟ್ಟಿ, ”ಇದೊಂದು ಅನಧಿಕೃತ ಕಟ್ಟಡ. ಯಾವುದೇ ಪರವಾನಿಗೆಯನ್ನು ತೆಗೆದುಕೊಂಡಿಲ್ಲ. ಕಟ್ಟಡವನ್ನು ತೆರವುಗೊಳಿಸಲು 2018ರಲ್ಲಿ ಆರ್ಡರ್ ಆಗಿದೆ. ಸ್ಟೇ ಆರ್ಡರ್ ಇತ್ತು. ಸ್ಟೇ ವೆಕೆಟ್ ಆಗಿದೆ. ನಗರಸಭೆಯಿಂದ ತೆರವುಗೊಳಿಸಲು ಬಂದಾಗ ಕಟ್ಟಡದ ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುತ್ತಿದ್ದಾರೆ. ಈ ಕಟ್ಟಡದಲ್ಲಿ ಪರವಾನಿಗೆ ಇರುವ ಯಾವ ಅಂಗಡಿಗಳು ಇಲ್ಲ. ಉಡುಪಿಯಲ್ಲಿ ಅನಧಿಕೃತವಾಗಿ ಬಿಲ್ಡಿಂಗ್ ಲೈಸನ್ಸ್ ಇಲ್ಲದೆ ಕಟ್ಟಿರುವ ಏಕೈಕ ಕಟ್ಟಡ ಇದು. ನಗರಸಭೆ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದ ಕಟ್ಟಡ ಇದೊಂದೇ ಆಗಿದ್ದು, ಕೋರ್ಟ್​ನಲ್ಲಿ ಸ್ಟೇ ಆರ್ಡರ್ ತೆರವು ಆಗಿರುವುದರಿಂದ ನಾವು ಕ್ರಮವನ್ನು ಕೈಗೊಂಡಿದ್ದೇವೆ. ಆದಾಯ ತೆರಿಗೆಯನ್ನು ನಗರಸಭೆಗೆ ಅವರು ಕಟ್ಟುತ್ತಿಲ್ಲ. ಈ ಕಟ್ಟಡಕ್ಕೆ ಯಾವುದೇ ಟ್ರೇಡ್ ಲೈಸನ್ಸ್ ಇಲ್ಲ. ಬೇರೆ ಕಟ್ಟಡಗಳಿಗೆ ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ನಮ್ಮ ಮೇಲೆ ರಾಜಕೀಯ ಒತ್ತಡದಂತದ್ದು ಏನೂ ಇಲ್ಲ. ಕಾನೂನು ಅಧಿಕಾರಿಗಳಿಂದ ನಾವು ಒಪಿನಿಯನ್ ತೆಗೆದುಕೊಂಡಿದ್ದೇವೆ. ಎಲ್ಲಾ ಅಧಿಕಾರಿಗಳು, ಪಿಪಿ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇವೆ” ಎಂದಿದ್ದಾರೆ.

ಗದಗ: ಮೊಸಳೆ ಮರಿ ಕಾಣಿಸಿಕೊಂಡ ಹಿನ್ನೆಲೆ; ಸ್ಥಳೀಯರಲ್ಲಿ ಆತಂಕ

ಗದಗ: ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ನದಿ ದಡದಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಆತಂಕ ಹೆಚ್ಚಾಗಿದೆ. ಮೊಸಳೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮಲಪ್ರಭಾ ನದಿಯಲ್ಲಿ ಇನ್ನೂ ಸಾಕಷ್ಟು ಮೊಸಳೆ ಇರುವ ಭಯ ಇದ್ದು, ಮೊಸಳೆ ಹಿಡಿದುಕೊಂಡು ಹೋಗುವಂತೆ ಅಧಿಕಾರಿಗಳಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಂಡ್ಯ: ಕರ್ತವ್ಯಲೋಪ ಹಿನ್ನೆಲೆ; ತಹಶೀಲ್ದಾರ್ ಅಮಾನತು

ಮಂಡ್ಯ: ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಮಂಡ್ಯ ತಹಶೀಲ್ದಾರ್​ರನ್ನು ಅಮಾನತುಗೊಳಿಸಲಾಗಿದೆ. ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ಹೊರಡಿಸಿದ್ದಾರೆ. ಚಂದ್ರಶೇಖರ್ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪವಿತ್ತು. ಹಾಗೆಯೇ ಕೊರೊನಾ ವೇಳೆ ಕರ್ತವ್ಯ ಲೋಪವೆಸಗಿದ ಆರೋಪವಿತ್ತು. ಕರ್ತವ್ಯಲೋಪ ಸೇರಿದಂತೆ 13 ಕಾರಣ ನೀಡಿ ಚಂದ್ರಶೇಖರ್ ಶಂಭಣ್ಣರನ್ನು ಅಮಾನತು ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಮೂಗಿನ ಸ್ವೇಬ್‌ಗಳಿಗಿಂತ COVID-19 ಲಾಲಾರಸ ಪರೀಕ್ಷೆಯು ಉತ್ತಮವಾಗಿದೆ ಎಂದು ಸಂಶೋಧನೆ ಸೂಚಿಸುತ್ತದೆ

Sat Mar 26 , 2022
ಮೂಗಿನ ಸ್ವೇಬ್‌ಗಳೊಂದಿಗೆ ಪರೀಕ್ಷಿಸುವುದಕ್ಕಿಂತ ಲಾಲಾರಸದ ಮಾದರಿಗಳು COVID-19 ಅನ್ನು ಹೆಚ್ಚು ವೇಗವಾಗಿ ಗುರುತಿಸಬಲ್ಲವು ಎಂದು ಅಮೇರಿಕನ್ ಸೊಸೈಟಿ ಫಾರ್ ಮೈಕ್ರೋಬಯಾಲಜಿ ನೇತೃತ್ವದ ಇತ್ತೀಚಿನ ಅಧ್ಯಯನವು ಸೂಚಿಸುತ್ತದೆ. ‘ಮೈಕ್ರೊಬಯಾಲಜಿ ಸ್ಪೆಕ್ಟ್ರಮ್’ ಎಂಬ ಜರ್ನಲ್‌ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. “ಇದು ಮುಖ್ಯವಾಗಿದೆ ಏಕೆಂದರೆ ಜನರು COVID-19 ಅನ್ನು ಹೊಂದಿದ್ದಾರೆ ಎಂದು ತಿಳಿಯುವ ಮೊದಲು ಅದನ್ನು ಹರಡಬಹುದು” ಎಂದು ಸಹ-ಲೇಖಕ ಡೊನಾಲ್ಡ್ ಕೆ. ಮಿಲ್ಟನ್, M.D., DPH, ಔದ್ಯೋಗಿಕ ಮತ್ತು ಪರಿಸರದ ಪ್ರಾಧ್ಯಾಪಕ ಹೇಳಿದರು. […]

Advertisement

Wordpress Social Share Plugin powered by Ultimatelysocial