ಕೂಳೂರು: ಕಾಲೇಜುಗಳಲ್ಲಿ ಹಿಜಾಬ್ ವಿವಾದ ಅಂತಾರಾಷ್ಟ್ರೀಯವಾಗಿ ಭಾರತದ ಘನತೆಗೆ ದಕ್ಕೆ ತಂದಿಲ್ಲ.

 

ಕೂಳೂರು:ಕಾಲೇಜುಗಳಲ್ಲಿ ಹಿಜಾಬ್ ವಿವಾದ ಅಂತಾರಾಷ್ಟ್ರೀಯವಾಗಿ ಭಾರತದ ಘನತೆಗೆ ದಕ್ಕೆ ತಂದಿಲ್ಲ.ಆದರೆ ಇದುವರೆಗೆ ಕಲಿಕೆಯ ದೇಗುಲವೆಂದು ಎಲ್ಲರೂ ಭಾವಿಸಿರುವ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ತಂತ್ರವನ್ನು ಹಣೆದು ಅಲ್ಪಸಂಖ್ಯಾತ ಸಮುದಾಯದವರನ್ನು ಶಿಕ್ಷಣದಿಂದ ದೂರ ಮಾಡಲು ಯತ್ನಿಸಿದವರನ್ನು ಮೊದಲು ಬಯಲಿಗೆಳೆದು ಜೈಲಿಗೆ ತಳ್ಳಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಒಂದು ತಂತ್ರಕ್ಕೆ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕೇಸರಿ ,ನೀಲಿ ಶಾಲು ಕಂಡು ಬಂತು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ,ರಾಜ್ಯದಲ್ಲಿ ಬಿಜೆಪಿಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸಲಾರದೆ ವಿದೇಶದಲ್ಲಿ ಮಾನ ಹರಾಜು ಹಾಕುವ ಯತ್ನ ಮಾಡಿ ವಿಫಲರಾಗಿದ್ದಾರೆ. ಚುನಾವಣೆಯ ದೃಷ್ಠಿಯಿಟ್ಟು ಈ ತಂತ್ರ ಮಾಡಿದ್ದರೆ ಕಾಂಗ್ರೆಸ್, ಎಸ್‍ಡಿಪಿಐಗಳಿಗೆ ತಲೆ ಎತ್ತಲಾರದೆ ಮುಳುಗಿ ಹೋಗುತ್ತದೆ ಇದರಲ್ಲಿ ಎರಡು ಮಾತಿಲ್ಲ ಎಂದು ಕಿಡಿ ಕಾರಿದರು.ಇದೀಗ ಅಲ್ಪಸಂಖ್ಯಾತವಸಮುದಾಯದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂಬ ಪಶ್ಚಾತಾಪ ಕಂಡು ಬರುತ್ತಿದೆ. ನ್ಯಾಯಾಲಯದ ತೀರ್ಪು ಬಳಿಕ ಶಿಕ್ಷಣ ರಂಗ ಹಿಂದಿನಂತೆ ಸ್ವಚ್ಚವಾಗುತ್ತದೆ ಮಾತ್ರವಲ್ಲ ಮಹತ್ವದ ಬದಲಾವಣೆಯಾಗುವುದು ಖಚಿತ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ನಗರದಲ್ಲಿ ಇಂದು ಪೆಟ್ರೋಲ್ ಬೆಲೆ ರೂ 100 ಕ್ಕಿಂತ ಕಡಿಮೆಯಾಗಿದೆ; ದೆಹಲಿ, ಮುಂಬೈ, ಕೋಲ್ಕತ್ತಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಶೀಲಿಸಿ

Tue Feb 8 , 2022
  ಫೆಬ್ರವರಿ 8, ಮಂಗಳವಾರದಂದು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಮ್ಮ ಸ್ಥಿರವಾದ ಸರಣಿಯನ್ನು ಮುಂದುವರೆಸಿವೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMCs) 6:00 AM IST ಕ್ಕೆ ದೇಶದ ವಿವಿಧ ರಾಜ್ಯಗಳಲ್ಲಿನ ಇಂಧನ ಬೆಲೆಗಳ ಪಟ್ಟಿಯನ್ನು ನವೀಕರಿಸಲಾಗಿದೆ ಮತ್ತು ದರಗಳನ್ನು ನಿರ್ವಹಿಸಲಾಗಿದೆ ಅವರು ನಿನ್ನೆ ಎಲ್ಲಿದ್ದರು. ಅದರಂತೆ, ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 95.41 ರೂ, ಆದರೆ ರಾಷ್ಟ್ರ ರಾಜಧಾನಿಯಲ್ಲಿ ಲೀಟರ್ ಡೀಸೆಲ್ ಬೆಲೆ 86.67 […]

Advertisement

Wordpress Social Share Plugin powered by Ultimatelysocial