ಉಕ್ರೇನ್‌ ತೊರೆಯಲು ಅಮೆರಿಕ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚನೆ

ಕೀವ್‌: ಉಕ್ರೇನ್‌ ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕದ ರಾಯಭಾರ ಕಚೇರಿ ಸೋಮವಾರ ಸೂಚಿಸಿದೆ.

 

ಈ ಕುರಿತು ಟ್ವೀಟ್‌ ಮಾಡಿರುವ ರಾಯಭಾರ ಕಚೇರಿಯು, ‘ಸುರಕ್ಷಿತವಾಗಿದ್ದರೆ ರಸ್ತೆ ಸಾರಿಗೆಯ ಮೂಲಕ ಉಕ್ರೇನ್‌ನಿಂದ ಹೊರಡುವಂತೆ ನಾವು ಅಮೆರಿಕ ನಾಗರಿಕರಿಗೆ ಸೂಚಿಸುತ್ತೇವೆ’ ಎಂದು ತಿಳಿಸಿದೆ.

‘ಉಕ್ರೇನ್‌ನ ಗಡಿಗಳು ತೆರೆದಿರುತ್ತವೆ. ರಸ್ತೆಗಳಲ್ಲಿನ ಅಪಾಯಗಳನ್ನು ಪರಿಗಣಿಸಿ ಅಮೆರಿಕ ನಾಗರಿಕರು ಉಕ್ರೇನ್‌ ತೊರೆಯಬೇಕು’ ಎಂದು ರಾಯಭಾರ ಕಚೇರಿ ಹೇಳಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹಾಗೂ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ನಡುವೆ ಮಾತುಕತೆ ನಡೆದಿದೆ. ಇದಾದ ಸ್ವಲ್ಪ ಸಮಯದ ಬಳಿಕ ಅಮೆರಿಕಾದ ರಾಯಭಾರ ಕಚೇರಿಯು ಈ ಪ್ರಕಟಣೆ ಹೊರಡಿಸಿದೆ.

ಫೆ.24ರಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿದೆ. ಉಕ್ರೇನ್‌ನ ನಗರಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ದಾಳಿ ಮಾಡುತ್ತಿವೆ. ಅಮೆರಿಕ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ರಷ್ಯಾದ ನಡೆಯನ್ನು ವಿರೋಧಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್: ತೀವ್ರವಾದ ಕಾಯಿಲೆಯ ಅಪಾಯವು ನಿಮ್ಮ ರಕ್ತದಲ್ಲಿರಬಹುದು, ಹೊಸ ಸಂಶೋಧನೆಯು ಕಂಡುಹಿಡಿದಿದೆ;

Mon Mar 14 , 2022
COVID ನಂತಹ ಸಂಕೀರ್ಣ ಕಾಯಿಲೆಗಳಲ್ಲಿ ಬಹು ಅಂಶಗಳು ಪಾತ್ರವಹಿಸುತ್ತವೆ ಮತ್ತು ವಿಭಿನ್ನ ಜನರು ಹೇಗೆ ಪರಿಣಾಮ ಬೀರುತ್ತಾರೆ ಎಂಬುದನ್ನು ಊಹಿಸಲು ಅವುಗಳು ಏನೆಂದು ತಿಳಿಯುವುದು ಮುಖ್ಯವಾಗಿದೆ. ಸಾಂಕ್ರಾಮಿಕ ರೋಗದ ಆರಂಭದಲ್ಲಿ, ವಯಸ್ಸಾದವರು, ಅಧಿಕ ತೂಕ ಅಥವಾ ಧೂಮಪಾನವು ತೀವ್ರವಾದ COVID ಅನ್ನು ಅಭಿವೃದ್ಧಿಪಡಿಸುವ ನಿಮ್ಮ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಗುರುತಿಸಲಾಗಿದೆ. ಇದು ನಂತರ ಸಾರ್ವಜನಿಕ ಆರೋಗ್ಯ ನಿರ್ಧಾರಗಳನ್ನು ತಿಳಿಸಿತು – ಉದಾಹರಣೆಗೆ ಲಸಿಕೆ ರೋಲ್‌ಔಟ್‌ನಲ್ಲಿ ವಯಸ್ಸಾದವರಿಗೆ ಆದ್ಯತೆ ನೀಡಲಾಯಿತು. ಆದರೆ […]

Advertisement

Wordpress Social Share Plugin powered by Ultimatelysocial