ಶ್ರೀಲಂಕಾ ವಿಮಾನ ಸಂಸ್ಥೆಗಳ ಖಾಸಗೀಕರಣ, ನೋಟು ಮುದ್ರಣಕ್ಕೆ ಮುಂದಾದ ನೂತನ ಸರಕಾರ…

 

ಕೊಲಂಬೊ: ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ನಷ್ಟದಿಂದ ತಡೆಯಲು ಶ್ರೀಲಂಕಾ ಸರಕಾರವು ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಹಲವು ನೌಕರರ ವೇತನ ಪಾವತಿಸುವ ಸಲುವಾಗಿ ಹಣವನ್ನು ಮುದ್ರಿಸುವ ಮೂಲಕ ಆರ್ಥಕತೆ ಸ್ಥಿರಗೊಳಿಸುವ ವ್ಯವಸ್ಥೆಯ ಭಾಗವಾಗಿದೆ ಎಂದು ತಿಳಿದು ಬಂದಿದೆ.

ಹೊಸ ಆಡಳಿತವು ಶ್ರೀಲಂಕಾ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಯೋಜಿಸಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು. ಕಳೆದ ವರ್ಷದ ಮಾರ್ಚ್‌ ಅಂತ್ಯಕ್ಕೆ ವಿಮಾನಯಾನ ಸಂಸ್ಥೆಯು ಒಟ್ಟು 45ಬಿಲಿಯನ್‌ ಡಾಲರ್‌ ಗಳಷ್ಟು ನಷ್ಟಕ್ಕೀಡಾಗಿದೆ ಎಂದು ಅವರು ಮಾಹಿತಿ ನೀಡಿದರು. ವಿಮಾನದಲ್ಲಿ ಕಾಲಿಡದ ಬಡವರಲ್ಲಿ ಈ ನಷ್ಟವನ್ನು ಭರಿಸಬಾರದು ಎಂದು ವಿಕ್ರಮಸಿಂಘೆ ಹೇಳಿದರು.

ನಿನ್ನೆಯಷ್ಟೇ ಅವರು ಟ್ವಿಟರ್‌ ಮೂಲಕ ದೇಶದಲ್ಲಿ ಒಂದು ದಿನಕ್ಕಾಗುವಷ್ಟು ಮಟ್ಟಿಗೆ ಮಾತ್ರ ಗ್ಯಾಸೋಲಿನ್‌ ಶೇಖರಣೆಯಿದ್ದು, ಮುಂದಿನ ಒಂದೆರಡು ತಿಂಗಳು ನಾಗರಿಕರ ಪರಿಸ್ಥಿತಿ ಶೋಚನೀಯವಾಗಿರಲಿದೆ ಎಂದು ಹೇಳಿದ್ದರು ಮತ್ತು ದೇಶವು ಅನುಭವಿಸುತ್ತಿರುವ ದುಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ಲೇ ಆಫ್ ತಲುಪಲು ಆರ್ ಸಿಬಿಗೆ ಇನ್ನೂ ಇದೆ ಅವಕಾಶ;

Tue May 17 , 2022
ಮುಂಬೈ: ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತು ಪ್ಲೇ ಆಫ್ ದಾರಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿರುವ ಆರ್ ಸಿಬಿ ತಂಡದ ನೆಟ್ ರನ್ ರೇಟ್ ಕಡಿಮೆ ಇರುವುದೇ ತಲೆ ನೋವಾಗಿ ಪರಿಣಮಿಸಿದೆ. ಆರ್ ಸಿಬಿ ಅಭಿಮಾನಿಗಳು ಪ್ರತಿವರ್ಷದಂತೆ ಈ ಬಾರಿಯೂ ಲೆಕ್ಕಾಚಾರ ಆರಂಭಿಸಿದ್ದಾರೆ. ಯಾವ ತಂಡ […]

Advertisement

Wordpress Social Share Plugin powered by Ultimatelysocial