ಪ್ಲೇ ಆಫ್ ತಲುಪಲು ಆರ್ ಸಿಬಿಗೆ ಇನ್ನೂ ಇದೆ ಅವಕಾಶ;

ಮುಂಬೈ: ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತು ಪ್ಲೇ ಆಫ್ ದಾರಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿರುವ ಆರ್ ಸಿಬಿ ತಂಡದ ನೆಟ್ ರನ್ ರೇಟ್ ಕಡಿಮೆ ಇರುವುದೇ ತಲೆ ನೋವಾಗಿ ಪರಿಣಮಿಸಿದೆ.

ಆರ್ ಸಿಬಿ ಅಭಿಮಾನಿಗಳು ಪ್ರತಿವರ್ಷದಂತೆ ಈ ಬಾರಿಯೂ ಲೆಕ್ಕಾಚಾರ ಆರಂಭಿಸಿದ್ದಾರೆ. ಯಾವ ತಂಡ ಸೋತರೆ ನಮಗೆ ಪ್ಲೇ ಆಫ್ ಅವಕಾಶವಿದೆ ಎಂದು ಕಾಲ್ಕುಲೇಶನ್ ಆರಂಭಿಸಿದ್ದಾರೆ.

ಆರ್ ಸಿಬಿಗೆ ಅವಕಾಶ ಹೇಗೆ?

13 ಪಂದ್ಯಗಳಲ್ಲಿ ಏಳು ಗೆಲುವುಗಳ ಹೊರತಾಗಿಯೂ, ಪ್ಲೇ ಆಫ್ ವಿಚಾರಗಳು ಈಗ ಆರ್ ಸಿಬಿ ನಿಯಂತ್ರಣದಲ್ಲಿಲ್ಲ. ಫಾಫ್ ಪಡೆ ಪ್ಲೇಆಫ್‌ ಗೆ ಹೋಗಲು ಇತರ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದ ಬಳಿಕ ಹೊಸ ಲೆಕ್ಕ ಆರಂಭವಾಗಿದೆ.

ಆರ್ ಸಿಬಿ ಪ್ಲೇಆಫ್ ಪ್ರವೇಶಕ್ಕೆ ಎಲ್ಲಕ್ಕಿಂತ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಕೊನೆಯ ಪಂದ್ಯವನ್ನು ಸೋಲಬೇಕಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.

ನೆಟ್ ರನ್ ರೇಟ್ -0.323 ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯದಲ್ಲಿ 200 ರನ್ ಮಾಡಿದರೂ ಮತ್ತು 100 ರನ್‌ ಅಂತರದಿಂದ ಗೆದ್ದರೂ, ಅವರ ಎನ್ ಆರ್ ಆರ್ ಕೇವಲ 0.071 ಕ್ಕೆ ಸುಧಾರಿಸುತ್ತದೆ. ಹೀಗಾಗಿ ದೆಹಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯವನ್ನು ಕೇವಲ ಒಂದು ರನ್ ನಿಂದ ಗೆದ್ದರೂ ಅದು ಆರ್ ಸಿಬಿಗಿಂತ ಸಾಕಷ್ಟು ಮುಂದೆ ಸಾಗುತ್ತದೆ.

ಒಂದು ವೇಳೆ ಎರಡೂ ತಂಡಗಳು (ಆರ್ಸಿಬಿ ಮತ್ತು ಡಿಸಿ) ತಮ್ಮ ಕೊನೆಯ ಪಂದ್ಯವನ್ನು ಸೋತರೆ, ಬೆಂಗಳೂರು ತಂಡ ಪ್ಲೇ ಆಫ್ ಗೆ ಹೋಗಲು ಭಾರೀ ಸೋಲನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ, ಆರ್ ಸಿಬಿ ಒಂದು ರನ್‌ ನಿಂದ ಸೋತರೆ, ಕ್ಯಾಪಿಟಲ್ಸ್ ಸುಮಾರು 150 ರನ್ ಅಂತರದಿಂದ ಸೋಲಬೇಕಾಗುತ್ತದೆ (ನಿಖರವಾದ ಸ್ಕೋರ್‌ಗಳನ್ನು ಅವಲಂಬಿಸಿ) ಆದರೆ ಅದು ಸಂಭವಿಸುವ ಸಾಧ್ಯತೆಗಳು ಕಡಿಮೆ.

ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಅಂತಿಮ ರೌಂಡ್-ರಾಬಿನ್ ಪಂದ್ಯದಲ್ಲಿ ಆರ್ ಸಿಬಿ ತಂಡವು ಈಗಾಗಲೇ ಪ್ಲೇ ಆಫ್ ತಲುಪಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಸತತ ಗೆಲುವು ಕಂಡಿರುವ ಟೈಟಾನ್ಸ್ ವಿರುದ್ದ ಬೆಂಗಳೂರು ಗೆಲ್ಲಲೇ ಬೇಕಿದೆ. ಪ್ಲೇಆಫ್‌ಗೆ ಹೋಗಲು ಬೆಂಗಳೂರು ಪವಾಡದ ನಿರೀಕ್ಷೆಯಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿಗಳ ಸ್ವಾಗತಕ್ಕೆ 48,000 ಸರ್ಕಾರಿ ಶಾಲೆಗಳಿಗೆ ಅಲಂಕಾರ!

Tue May 17 , 2022
  ಬೆಂಗಳೂರು, ಮೇ 16: ಬೆಂಗಳೂರು: 1 ರಿಂದ 10 ನೇ ತರಗತಿ ಓದುತ್ತಿರುವ ಮಕ್ಕಳಿಗಾಗಿ ಸರ್ಕಾರಿ ಶಾಲೆಗಳನ್ನು ಪುನರಾರಂಭಿಸಲು ಕರ್ನಾಟಕ ಶಿಕ್ಷಣ ಇಲಾಖೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಶಾಲೆಯ ಆವರಣದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಪ್ರಸಕ್ತ 2022-23ನೇ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಒಟ್ಟು 48,066 ಸರ್ಕಾರಿ ಶಾಲೆಗಳು ಸೋಮವಾರದಿಂದ ಪುನರಾರಂಭಗೊಳ್ಳಲಿವೆ. ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ ಮೊದಲ ದಿನ (ಸೋಮವಾರ) ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸರ್ಕಾರಿ ಶಾಲೆಗಳನ್ನು ಅಲಂಕರಿಸಲಾಗಿದೆ. ಶಿಕ್ಷಕರು, […]

Advertisement

Wordpress Social Share Plugin powered by Ultimatelysocial