ಎಚ್. ಎಸ್. ಪಾರ್ವತಿ ಅವರು ಆಕಾಶವಾಣಿ ಕಲಾವಿದ.

ಎಚ್. ಎಸ್. ಪಾರ್ವತಿ ಅವರು ಆಕಾಶವಾಣಿ ಕಲಾವಿದರಾಗಿ, ವೈವಿಧ್ಯಪೂರ್ಣ ಬರಹಗಾರರಾಗಿ, ಸಾಮಾಜಿಕ ಕಳಕಳಿಯ ಚಿಂತಕರಾಗಿ, ಕರ್ನಾಟಕ ಲೇಖಕಿಯರ ಸಂಘವನ್ನು ಕಟ್ಟಿದವರಲ್ಲಿ ಒಬ್ಬರಾಗಿ, ಅನೇಕ ಪ್ರತಿಭೆಗಳನ್ನು ಬೆಳೆಸಿದವರಾಗಿ ಮತ್ತು ಅದ್ಭುತ ಸಂಘಟಕರಾಗಿ ಪ್ರಸಿದ್ಧರಾಗಿದ್ದವರು.ಎಚ್. ಎಸ್. ಪಾರ್ವತಿ 1934ರ ಫೆಬ್ರವರಿ 3ರಂದು ಜನಿಸಿದರು. ತಂದೆ ಎಚ್‌. ಶ್ರೀನಿವಾಸರಾವ್‌. ತಾಯಿ ಮಹಾಲಕ್ಷ್ಮಮ್ಮ. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಓದಿದ ಪಾರ್ವತಿ ಅವರು ಬನಾರಸ್ ವಿಶ್ವವಿದ್ಯಾಲಯದಿಂದ ಹಿಂದಿ ಎಂ. ಎ. ಪದವಿ ಪಡೆದರಲ್ಲದೆ, ಉನ್ನತ ಹಿಂದಿ ಪ್ರಾವಿಣ್ಯತಾ ಪರೀಕ್ಷೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ‘ಜಾಣ’ ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ಅಣ್ಣ ಎಚ್.ಎಸ್. ಸೂರ್ಯನಾರಾಯಣ (‘ಸೂರಿ’) ಅವರು ಪ್ರಜಾವಾಣಿಯಲ್ಲಿ ‘ಕ್ರೀಡಾಂತರಂಗ’ ಅಂಕಣದಿಂದ ಪ್ರಸಿದ್ಧರಾಗಿದ್ದರಲ್ಲದೆ ಆಕಾಶವಾಣಿಯಲ್ಲಿ ಕ್ರೀಡೆಯ ವೀಕ್ಷಕ ವಿವರಣೆ ನೀಡುವುದರಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು. ಪಾರ್ವತಿ ಅವರು ಎಮ್.ಎಸ್. ಶ್ರೀಹರಿ ಅವರನ್ನು ವಿವಾಹವಾದರು. ಪ್ರಗತಿಶೀಲ ಮನೋಭಾವದವರಾದ ಪಾರ್ವತಿ ಅವರದ್ದು ಅಂದಿನ ಕಾಲದಲ್ಲೇ ಪ್ರೇಮ ವಿವಾಹ.ಪಾರ್ವತಿ ಅವರು 1958ರಲ್ಲಿ ಆಕಾಶವಾಣಿ ಸೇರಿ ಕಾರ್ಯಕ್ರಮ ನಿರ್ವಾಹಕರಾಗಿ ಮೈಸೂರು ಹಾಗೂ ಬೆಂಗಳೂರು ಕೇಂದ್ರಗಳಲ್ಲಿ 32 ವರ್ಷ ಕಾರ್ಯನಿರ್ವಹಿಸಿ, 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅದಾನಿ ವಿವಾದ ಜನರು ಗಾಬರಿಯಾಗುವ ಅಗತ್ಯವಿಲ್ಲ.

Mon Feb 6 , 2023
  ದೆಹಲಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಸಚಿವರು, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಉತ್ತಮ ಸ್ಥಿತಿಯಲ್ಲಿದೆ. ಜನರು ಗಾಬರಿಯಾಗುವ ಅಗತ್ಯವಿಲ್ಲ. ಅದಾನಿ ಸಮೂಹದಲ್ಲಿ ಎಸ್‌ಬಿಐ ಮತ್ತು ಎಲ್‌ಐಸಿ ಹೂಡಿಕೆಯು ಮಿತಿಯಲ್ಲಿದೆ. ಬ್ಯಾಂಕ್ ಮತ್ತು ಎಲ್‌ಐಸಿ ಎರಡೂ ಲಾಭದಾಯಕವಾಗಿದ್ದು, ಹೂಡಿಕೆದಾರರು ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ತಮಗಿರುವ ಮಾಹಿತಿ ಪ್ರಕಾರ ಅದಾನಿ ಗ್ರೂಪ್‌ನಲ್ಲಿ ಎಲ್‌ಐಸಿ ಮತ್ತು ಎಸ್‌ಬಿಐ ಹೂಡಿಕೆಯು ನಿಗದಿತ ಮಿತಿಯಲ್ಲಿದೆ. ಎಸ್‌ಬಿಐ ಮತ್ತು ಎಲ್‌ಐಸಿ ಎರಡೂ ತಮ್ಮ ವಿವರವಾದ […]

Advertisement

Wordpress Social Share Plugin powered by Ultimatelysocial