ಸಾಮಾನ್ಯವಾಗಿ ಒಂದು ಮನೆಗಳಿಗೆ ಎಷ್ಟು ಕರೆಂಟ್ ಬಿಲ್‌ ಬರಬಹುದು.

ಹೈದರಾಬಾದ್:ಸಾಮಾನ್ಯವಾಗಿ ಒಂದು ಮನೆಗಳಿಗೆ ಎಷ್ಟು ಕರೆಂಟ್ ಬಿಲ್‌ ಬರಬಹುದು. 1 ಸಾವಿರ ಹೆಚ್ಚೆಂದೆರೆ ಒಂದು 500 ರೂ. ಹೆಚ್ಚು. ಅದಕ್ಕಿಂತ ಹೆಚ್ಚು ಕರೆಂಟ್‌ ಬಿಲ್‌ ಬರುವುದು ಕಡಿಮೆ. ಆದರೆ ತೆಲಂಗಾಣದ ಗ್ರಾಮ ಪಂಚಾಯತ್‌ ವೊಂದಕ್ಕೆ ಬಂದಿರುವ ಒಂದು ತಿಂಗಳ ಕರೆಂಟ್‌ ಬಿಲ್‌ ನ ಮೊತ್ತ ಕೇಳಿದರೆ ಒಮ್ಮೆ ಬೆಚ್ಚಿ ಬೀಳುವುದು ಗ್ಯಾರೆಂಟಿ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಕೊತ್ತಪಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಕಳೆದ ತಿಂಗಳ ಅಂದರೆ ಜನವರಿ ತಿಂಗಳ ಕರೆಂಟ್‌ ಬಿಲ್‌ ನ ಮೊತ್ತ ನೋಡಿ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಒಂದು ತಿಂಗಳ ಕರೆಂಟ್‌ ಬಿಲ್‌ ಒಂದೆರೆಡು ಸಾವಿರ ರೂ.ವಲ್ಲ ಬರೋಬ್ಬರಿ 11.41 ಕೋಟಿ ರೂ.

ಇಷ್ಟು ದೊಡ್ಡ ಪ್ರಮಾಣದ ಕರೆಂಟ್‌ ಬಿಲ್‌ ಮೊತ್ತ ನೋಡಿ ಗ್ರಾ.ಪಂ ಸದಸ್ಯರು ಅಚ್ಚರಿಗೊಂಡಿದ್ದು, ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಪರಿಶೀಲಿಸಿದಾಗ ಇದು ತಾಂತ್ರಿಕ ದೋಷದಿಂದ ಉಂಟಾದ ಎಡವಟ್ಟು ಕ್ಷಮಿಸಿ ಎಂದಿದ್ದಾರೆ.

ಈ ವಿಚಾರ ತಿಳಿದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆಗೆ ನುಗ್ಗಿ ಖಾಸಗಿ ಶಾಲಾ ಶಿಕ್ಷಕಿಯನ್ನು ಕೊಂದು ಪರಾರಿಯಾದ ಆರೋಪಿ

Tue Feb 14 , 2023
ಬೆಂಗಳೂರು, ಫೆಬ್ರವರಿ. 14: ಮನೆಯಲ್ಲಿ ಒಬ್ಬರೇ ಇದ್ದ ಸಮಯದಲ್ಲಿ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಖಾಸಗಿ ಶಾಲೆಯ ಶಿಕ್ಷಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೆಬ್ರವರಿ 13 ರಂದು ಶಾಂತಿನಗರ ಸಮೀಪದ ನಂಜಪ್ಪ ವೃತ್ತದಲ್ಲಿ 34 ವರ್ಷದ ಕೌಸರ್ ಮುಬೀನ್ ಎಂಬ ಖಾಸಗಿ ಶಾಲಾ ಶಿಕ್ಷಕಿಯೊಬ್ಬರನ್ನು ಅವರ ಮನೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಕೌಸರ್ ಮುಬೀನ್ ಪತಿಯಿಂದ ವಿಚ್ಛೇದನ ಪಡೆದಿದ್ದು, ತನ್ನ 14 ವರ್ಷದ […]

Advertisement

Wordpress Social Share Plugin powered by Ultimatelysocial