ಮನೆಗೆ ನುಗ್ಗಿ ಖಾಸಗಿ ಶಾಲಾ ಶಿಕ್ಷಕಿಯನ್ನು ಕೊಂದು ಪರಾರಿಯಾದ ಆರೋಪಿ

ಬೆಂಗಳೂರು, ಫೆಬ್ರವರಿ. 14: ಮನೆಯಲ್ಲಿ ಒಬ್ಬರೇ ಇದ್ದ ಸಮಯದಲ್ಲಿ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಖಾಸಗಿ ಶಾಲೆಯ ಶಿಕ್ಷಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಫೆಬ್ರವರಿ 13 ರಂದು ಶಾಂತಿನಗರ ಸಮೀಪದ ನಂಜಪ್ಪ ವೃತ್ತದಲ್ಲಿ 34 ವರ್ಷದ ಕೌಸರ್ ಮುಬೀನ್ ಎಂಬ ಖಾಸಗಿ ಶಾಲಾ ಶಿಕ್ಷಕಿಯೊಬ್ಬರನ್ನು ಅವರ ಮನೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ಕೌಸರ್ ಮುಬೀನ್ ಪತಿಯಿಂದ ವಿಚ್ಛೇದನ ಪಡೆದಿದ್ದು, ತನ್ನ 14 ವರ್ಷದ ಮಗಳೊಂದಿಗೆ ಶಾಂತಿನಗರ ಸಮೀಪದ ನಂಜಪ್ಪ ವೃತ್ತದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಘಟನೆ ನಡೆದಾಗ ಆಕೆ ಸಹಾಯಕ್ಕಾಗಿ ಕಿರುಚುವುದನ್ನು ನೆರೆಹೊರೆಯವರು ಕೇಳಿದ್ದಾರೆ. ತಕ್ಷಣ ಮೃತರ ಮನೆಗೆ ಓಡಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ಮನೆಯಿಂದ ಓಡಿಹೋಗುತ್ತಿರುವುದನ್ನು ಅವರು ನೋಡಿದ್ದಾರೆ.

ಪಕ್ಷದ ಮನೆಯವರು ಮೃತರ ಮನೆಗೆ ಬಂದು ನೋಡಿದಾಗ ಕೌಸರ್ ಮುಬೀನ್ ದೇಹದ ಮೇಲೆ ಅನೇಕ ಇರಿತದ ಗಾಯಗಳು ಕಂಡುಬಂದಿವೆ. ಆರೋಪಿಯು ಆಕೆಗೆ ಮೂರು ಬಾರಿ ಇರಿದಿದ್ದು, ರಕ್ತದ ಮಡುವಿನಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.

ಸೋಮವಾರ ಸಂಜೆ ಕೊಲೆ ನಡೆದಾಗ ಮೃತ ಶಿಕ್ಷಕಿ ಕೌಸರ್ ಮುಬೀನ್ ಅವರ ಮಗಳು ಶಾಲೆಯಲ್ಲಿದ್ದರು ಎಂದು ವರದಿಯಾಗಿದೆ. ಕೊಲೆಗಾರ ಕೌಸರ್ ಅವರಿಗೆ ಪರಿಚಿತವಿರುವ ವ್ಯಕ್ತಿ ಎಂದು ಶಂಕೆ ವ್ಯಕ್ತವಾಗಿದೆ. ಏಕೆಂದರೆ, ಮನೆಯಲ್ಲಿ ಬೆಲೆಬಾಳುವ ಯಾವುದೇ ವಸ್ತು ಕಾಣೆಯಾಗಿಲ್ಲ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ (ಕೇಂದ್ರ) ಆರ್ ಶ್ರೀನಿವಾಸ್ ಗೌಡ ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಆಕೆ ತನ್ನ ಪತಿಯಿಂದ ವಿಚ್ಛೇದನ ಪಡೆದಾಗ ತನ್ನ ಮಾಜಿ ಪತಿಯೊಂದಿಗೆ ಹಲವು ವಿವಾದಗಳನ್ನು ಹೊಂದಿದ್ದರು ಎಂದು ಪೊಲೀಸರಿಗೆ ತಿಳಿದು ಬಂದಿದೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಯಲ್ಲಿ ಆಕೆಯ ಮಾಜಿ ಪತಿ ವಾಸಿಂ ಪಾಷಾ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಕೌಸರ್ ಮುಬೀನ್ ಅವರ ಸಂಬಂಧಿಕರು ಈತನ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾತ್ರಿ ಊಟಕ್ಕೆ ಯಾವು ಸಮಯ ಸರಿ ? ಯಾವ ರೀತಿಯ ಊಟ ಸೇವಿಸಬೇಕು ?

Tue Feb 14 , 2023
  ರಾತ್ರಿ ಭೋಜನವನ್ನು ಸಾಧ್ಯವಾದಷ್ಟು ಹೊಟ್ಟೆತುಂಬ ಸೇವಿಸಬೇಕು. ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ 3 ಗಂಟೆಗಳ ಕಾಲ ಇರುವಂತೆ ನೋಡಿಕೊಳ್ಳಿ. ರಾತ್ರಿಯ ಊಟದಲ್ಲಿ ಮೊಸರು ಬಳಸದಿರುವುದು ಉತ್ತಮ. ಮಜ್ಜಿಗೆ ಅಥವಾ ಹಾಲಿನೊಂದಿಗೆ ತಿನ್ನಿರಿ. ಊಟದ ನಂತರ, ಕನಿಷ್ಠ 100 ಹೆಜ್ಜೆ ನಡೆದ ನಂತರ ಕುಳಿತುಕೊಳ್ಳಿ. ಇಲ್ಲವಾದರೆ ತಿಂದ ತಕ್ಷಣ ಕುಳಿತರೆ ಹೊಟ್ಟೆ ಬರುತ್ತದೆ. ತಿಂದ ತಕ್ಷಣ ಮಲಗುವವರು ಬೇಗ ಸಾಯುತ್ತಾರೆ ಎನ್ನುತ್ತಾರೆ ಆಯುರ್ವೇದದಲ್ಲಿದೆ. […]

Advertisement

Wordpress Social Share Plugin powered by Ultimatelysocial