ಉದ್ಯೋಗ ಭದ್ರತೆ ಜೊತೆಗೆ ಒಳ್ಳೆ ಸಂಬಳವಿರೋ ಕೆಲಸದ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ.

ಕರ್ಷಕ ಸವಲತ್ತು, ಉದ್ಯೋಗ ಭದ್ರತೆ ಜೊತೆಗೆ ಒಳ್ಳೆ ಸಂಬಳವಿರೋ ಕೆಲಸದ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಪರಿಪೂರ್ಣ ಉದ್ಯೋಗದ ನಿರೀಕ್ಷೆಯಲ್ಲಿರ್ತಾರೆ. ಅಂಥದ್ರಲ್ಲಿ ಪ್ರಯಾಣದ ರಜೆ, ನಮ್ಮ ಸೌಕರ್ಯಕ್ಕೆ ತಕ್ಕಂತೆ ಕೆಲಸ ಮಾಡುವ ಆಯ್ಕೆ ಜೊತೆಗೆ ತಿಂಗಳಿಗೆ 4 ಲಕ್ಷ ರೂಪಾಯಿಗಳ ಆರಂಭಿಕ ವೇತನ ಇದ್ರೆ ಅಂಥ ಉದ್ಯೋಗವನ್ನು ಯಾರಾದರೂ ನಿರಾಕರಿಸ್ತಾರಾ?

ಇದು ನಿಜಕ್ಕೂ ಎಲ್ಲರ ಕನಸಿನ ಉದ್ಯೋಗ.

ಈ ಆಫರ್‌ ಈಗಲೂ ಅಸ್ತಿತ್ವದಲ್ಲಿದೆ ಆದರೆ ಯಾರೊಬ್ಬರೂ ಇದನ್ನು ಸ್ವೀಕರಿಸಿ ಕೆಲಸಕ್ಕೆ ಸೇರುತ್ತಿಲ್ಲ. ಅಚ್ಚರಿಯಾದರೂ ಇದು ಸತ್ಯ. ಸ್ಕಾಟ್ಲೆಂಡ್‌ನ ಅಬರ್ಡೀನ್ ಕರಾವಳಿಯ ಉತ್ತರ ಸಮುದ್ರದಲ್ಲಿ ನೆಲೆಗೊಂಡಿರುವ ಕಡಲಾಚೆಯ ರಿಗ್ಗರ್‌ ಉದ್ಯೋಗಕ್ಕಾಗಿ ಇಂಥದ್ದೊಂದು ಆಫರ್‌ ನೀಡಲಾಗಿದೆ. ಕಡಲಾಚೆಯ ರಿಗ್ ಎಂಬುದು ನೀರಿನಲ್ಲಿ ಅಥವಾ ಬಾವಿಗಳನ್ನು ಕೊರೆಯಲು, ತೈಲ ಮತ್ತು ಅನಿಲವನ್ನು ಹೊರತೆಗೆಯಲು, ಸಂಸ್ಕರಿಸಲು, ಅದನ್ನು ಭೂಮಿಗೆ ಸಾಗಿಸುವವರೆಗೆ ಸಂಗ್ರಹಿಸಲು ಬಳಸಲಾಗುವ ಒಂದು ದೊಡ್ಡ ರಚನೆ.

ಈ ಹುದ್ದೆಗೆ ನೇಮಕಗೊಂಡವರನ್ನು ಒಂದೇ ಬಾರಿಗೆ ಒಂದರಿಂದ ಆರು ತಿಂಗಳ ಅವಧಿಗೆ ಆಫ್‌ಶೋರ್ ರಿಗ್‌ಗೆ ಕಳುಹಿಸಲಾಗುವುದು. ಅವರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು, ದಿನಕ್ಕೆ 36,000 ರೂಪಾಯಿ ಮೂಲ ವೇತನ ನೀಡಲಾಗುತ್ತದೆ. ಎಂಡಿಇ ಕನ್ಸಲ್ಟೆಂಟ್ಸ್ ಸಂಸ್ಥೆ ಈ ಆಫರ್‌ ಕೊಟ್ಟಿದೆ. ಆದರೆ ಉದ್ಯೋಗಿ 2 ವರ್ಷಗಳ ಕಾಲ ಅಲ್ಲೇ ಇರಬೇಕು. ತಲಾ 6-6 ತಿಂಗಳ 2 ಶಿಫ್ಟ್‌ಗಳನ್ನು ಪೂರ್ಣಗೊಳಿಸಿದರೆ ನಂತರ ಸಂಬಳ 95,420 ಡಾಲರ್‌ ಅಂದ್ರೆ ಸುಮಾರು 1 ಕೋಟಿ ರೂಪಾಯಿವರೆಗೆ ಹೆಚ್ಚಳವಾಗಲಿದೆ.

ಈ ಉದ್ಯೋಗದಾತರ ಹೆಸರು ಬಹಿರಂಗವಾಗಿಲ್ಲ, ಆದರೆ ಇದೊಂದು ದೊಡ್ಡ ಕಂಪನಿ ಅಂತಾನೇ ಹೇಳಲಾಗ್ತಿದೆ. ಈ ಕೆಲಸವನ್ನು ಒಪ್ಪಿ ಸೇರಿಕೊಂಡರೆ ಅಂಥವರಿಗೆ ರಜಾದಿನದ ವೇತನವು ದಿನಕ್ಕೆ 3,877 ರೂಪಾಯಿ ಇರುತ್ತದೆ. ಒಂದು ವಾರದವರೆಗೆ ಅನಾರೋಗ್ಯದ ರಜೆ ಕೂಡ ಸಿಗಲಿದೆ. ಈ ಆಫರ್‌ ಕೇಳಿದ ತಕ್ಷಣ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಹೊರಡಲು ರೆಡಯಾಗಿಬಿಡಬೇಡಿ. ಯಾಕಂದ್ರೆ ಈ ಉದ್ಯೋಗವು ಎಲ್ಲರಿಗೂ ಅಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತವನ್ನು ಭಾರತದ ನೆಲದಲ್ಲೇ ಮಣಿಸುವುದು ಅಸಾಧ್ಯ!

Mon Feb 20 , 2023
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಅಮೋಘ ಗೆಲುವು ಸಾಧಿಸಿದೆ. ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿಯೂ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಪಿಸಿಬಿಯ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಪ್ರತಿಕ್ರಿಯೆ ನೀಡಿದ್ದು ಭಾರತ ತಂಡದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತದ ವಿರುದ್ಧ ಆಸ್ಟ್ರೇಲಿಯಾದ ದಾಂಡಿಗರು ಸ್ಪಿನ್ ದಾಳಿಯನ್ನು […]

Advertisement

Wordpress Social Share Plugin powered by Ultimatelysocial