ಎಲ್ಲೆಲ್ಲೂ ಕೆಜಿಎಫ್‌, ಚಾರ್ಲಿ, ಕಾಂತಾರದ್ದೇ ಕಮಾಲ್!

ಜಾನಪದ ಶಕ್ತಿಯ ಪರಿಚಯವನ್ನು ನೀಡಿದ ಡೊಳ್ಳು ಹಾಗೂ ಕಾಂತಾರ ಚಿತ್ರವಾಗಿರಬಹುದು, ಮನುಷ್ಯ ಹಾಗೂ ನಾಯಿ ನಡುವಿನ ಹೃದಯಸ್ಪರ್ಶಿ ಬಾಂಧವ್ಯವನ್ನು ತೆರೆದಿಟ್ಟು ಚಿತ್ರ 777 ಚಾರ್ಲಿಯಾಗಿರಬಹುದು, ಒಟ್ಟಿನಲ್ಲಿ 2022 ರ ಕನ್ನಡ ಚಿತ್ರೋದ್ಯಮ (Kannada Film Industry) ಮರೆಯಲಾರದ ವೈವಿಧ್ಯಮಯ ಚಿತ್ರಗಳನ್ನು ಕನ್ನಡ ಸಿನಿರಸಿಕರಿಗೆ ಕಟ್ಟಿಕೊಟ್ಟಿದೆ.

2022 ಕನ್ನಡ ಚಿತ್ರೋದ್ಯಮವು ಅಭೂತಪೂರ್ವ ಚಿತ್ರಗಳಿಗೆ (Movies) ಸಾಕ್ಷಿಯಾಗಿದೆ. ಉತ್ತಮ ಕಥೆ ಇದ್ದರೆ ಕಡಿಮೆ ಬಜೆಟ್‌ನಲ್ಲೂ (Low Budget) ಸಿನಿಮಾ ತೆಗೆಯಬಹುದೆಂಬ ಆತ್ಮವಿಶ್ವಾಸವನ್ನು ನಿರ್ಮಾಪಕ ನಿರ್ದೇಶಕರಿಗೆ ತಿಳಿಸಿಕೊಟ್ಟಿದೆ.ಹೊಡೆ ಬಡಿ ಚಿತ್ರಗಳಿಗಿಂತ ಭಿನ್ನವಾಗಿ ಸರಳ ಹಾಗೂ ಹೃದಯಸ್ಪರ್ಶಿ ಕತೆಗಳೂ ಸಿನಿ ರಸಿಕರಿಗೆ ಪ್ರಿಯವಾಗುತ್ತದೆ ಎಂಬ ಅಂಶವನ್ನು ತೋರಿಸಿಕೊಟ್ಟಿದೆ.ಒಟ್ಟಾರೆಯಾಗಿ, 2022 ಹಲವಾರು ರೋಚಕ ಮತ್ತು ಸ್ಮರಣೀಯ ಚಲನಚಿತ್ರಗಳೊಂದಿಗೆ ಕನ್ನಡ ಚಿತ್ರಲೋಕಕ್ಕೆ ಅತ್ಯುತ್ತಮ ವರ್ಷ ಎಂದೆನಿಸಿದೆ. ಹಾಗಿದ್ದರೆ ವೀಕ್ಷಕರ ಗಮನ ಸೆಳೆದ ಹಾಗೂ ಮನಗೆದ್ದ ಚಿತ್ರಗಳು ಯಾವುವು ಎಂಬುದನ್ನು ನೋಡೋಣ.ಡೊಳ್ಳು

ಸಾಗರ್ ಪುರಾಣಿಕ್ ಅವರ ಚೊಚ್ಚಲ ನಿರ್ದೇಶನದ ಡೊಳ್ಳು ಚಲನಚಿತ್ರವು ಸಾಂಪ್ರದಾಯಿಕ ಕಲೆಯಾದ ಡೊಳ್ಳು ಕುಣಿತದವರ ಜೀವನವನ್ನು ವೀಕ್ಷಕರ ಮುಂದೆ ತೆರೆದಿಟ್ಟ ಚಿತ್ರವಾಗಿದೆ.

ಸ್ಥಳೀಯ ಸಂಸ್ಕೃತಿ ಮತ್ತು ಜಾನಪದದ ಸಂರಕ್ಷಣೆಯ ಮೇಲೆ ನಗರ ಹಾಗೂ ಇತರ ಅಂಶಗಳ ಪ್ರಭಾವವನ್ನು ಚಿತ್ರ ಪ್ರದರ್ಶಿಸಿದೆ. ಡೊಳ್ಳು 2022 ರಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ವಿಕ್ರಾಂತ್ ರೋಣ

ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಸಹಯೋಗದಲ್ಲಿ ಮೂಡಿಬಂದ ವಿಕ್ರಾಂತ್ ರೋಣ ಅಷ್ಟೊಂದು ನಿರೀಕ್ಷಿತ ಮಟ್ಟವನ್ನು ತಲುಪಲಿಲ್ಲ. ಅದಾಗ್ಯೂ ಚಿತ್ರ ನಿರ್ಮಾಣದ ಮಹತ್ವಾಕಾಂಕ್ಷೆ ವೀಕ್ಷಕ ಪ್ರಭುವಿಗೆ ಮೆಚ್ಚುಗೆಯಾಗಿದ್ದಂತೂ ನಿಜ.

ವಿಕ್ರಾಂತ್ ರೋಣ ಚಿತ್ರವನ್ನು ಗ್ರಾಫಿಕ್ಸ್ ಹಾಗೂ ಅದ್ಭುತವಾದ ಸೆಟ್‌ಗಳ ನಿರ್ಮಾಣದೊಂದಿಗೆ ಚಿತ್ರಿಸಲಾಗಿದೆ. ಕಿಚ್ಚ ಗಂಭೀರ ನಟನೆ ಅಭಿಮಾನಿ ವರ್ಗಕ್ಕೆ ಹೆಚ್ಚು ಪ್ರಿಯವಾಗಿದೆ.

ಕೆಜಿಎಫ್ ಚಾಪ್ಟರ್ 2

2018 ರ ಹಿಟ್‌ ಚಿತ್ರದ ನಂತರದ ಭಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಬಾಲಿವುಡ್‌ನ ಪ್ರಸಿದ್ಧ ಕಲಾವಿದರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಜೊತೆಯಾಗಿದ್ದರು.

ಅದಾಗ್ಯೂ ಚಿತ್ರದ ಯಶಸ್ಸಿನ ಸಿಂಹಪಾಲು ಸೇರಬೇಕಾದ್ದು ನಿರ್ದೇಶಕ ಹಾಗೂ ಬರಹಗಾರ ಪ್ರಶಾಂತ್ ನೀಲ್, ಛಾಯಾಗ್ರಹಣದ ನಿರ್ದೇಶಕ ಭುವನ್ ಗೌಡ, ಸಂಕಲನ ಉಜ್ವಲ್ ಕುಲಕರ್ಣಿ, ಮತ್ತು ಸಂಗೀತ ಸಂಯೋಜಕ ರವಿ ಬಸ್ರೂರ್ ಅವರಿಗೆ. ಕಥಾವಸ್ತುವು ಹಲವಾರು ಟೀಕೆಗಳನ್ನು ಎದುರಿಸಿದ್ದರೂ ಪ್ರಚಂಡ ಗೆಲುವನ್ನು ಕಂಡಿತು.

ಕಾಂತಾರ

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರವು ಬಹುತೇಕ ಎಲ್ಲಾ ಭಾಷೆಗಳಲ್ಲಿ ಡಬ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಚಿತ್ರ ಎಂಬ ಕೀರ್ತಿಗೆ ಕಾರಣವಾಯಿತು.
ಭೂತಕೋಲದ ಕಥಾವಸ್ತುವಿನ ಚಿತ್ರವು ವೈವಿಧ್ಯಮಯವಾಗಿದ್ದು, ಇದುವರೆಗೆ ಚಿತ್ರರಂಗದಲ್ಲಿ ಅನ್ವೇಷಿಸದ ವಿಷಯದ ಕುರಿತು ರಿಷಬ್ ಶೆಟ್ಟಿ ಗಮನ ಸೆಳೆದಿದ್ದು, ಸಿನಿ ಪ್ರೇಕ್ಷಕರು ಚಿತ್ರದ ಪ್ರತಿಯೊಂದು ಅಂಶಗಳಿಗೂ ಜೈಕಾರ ಹಾಕಿದರು.
ಚಿತ್ರದ ಅಂತಿಮ 20 ನಿಮಿಷಗಳು ವಿಶೇಷವಾಗಿ ಗಮನಸೆಳೆದವು, ಇದು ರಿಷಬ್‌ನ ಜಾಗತಿಕ ಖ್ಯಾತಿಗೆ ಕಾರಣವಾಯಿತು ಮತ್ತು ಹೊಂಬಾಳೆ ಫಿಲ್ಮ್ಸ್ ಎಂಬ ಪ್ರೊಡಕ್ಷನ್ ಹೌಸ್‌ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡಿತು.

ಗಂಧದ ಗುಡಿ
ಅಮೋಘವರ್ಷ ನಿರ್ದೇಶನದ ಗಂಧದ ಗುಡಿ ಕರ್ನಾಟಕದ ಶ್ರೀಮಂತ ಮತ್ತು ವೈವಿಧ್ಯಮಯ ಭೌತಿಕ ಪರಂಪರೆಯನ್ನು ಸಾರಿದ ಮತ್ತು ನಟ ಪುನೀತ್ ರಾಜ್‌ಕುಮಾರ್ ಅವರ ಸೃಜನಶೀಲ ಶಕ್ತಿಯನ್ನು ಪ್ರದರ್ಶಿಸಿದ ಮಹತ್ವದ ಚಲನಚಿತ್ರವಾಗಿ ನೆನಪಿನಲ್ಲಿ ಉಳಿಯುತ್ತದೆ.
ಪವರ್ ಸ್ಟಾರ್ ಪುನೀತ್ ಅಭಿನಯದ ಚಿತ್ರ ಒಂದು ರೀತಿಯಲ್ಲಿ ಪ್ರೇಕ್ಷಕ ವರ್ಗಕ್ಕೆ ವಿದಾಯವನ್ನು ಸಾರಿದ ಚಿತ್ರವೂ ಹೌದು. ಹಾಗಾಗಿ, ಅಪ್ಪು ಅಭಿಮಾನಿಗಳಿಗೆ ಹಾಗೂ ಸಂಪೂರ್ಣ ಕರುನಾಡಿಗೆ ಗಂಧದ ಗುಡಿ ಅತಿವಿಶೇಷ ಹಾಗೂ ಮಹತ್ವದ ಚಿತ್ರ ಎಂದೆನಿಸಿದೆ.

777 ಚಾರ್ಲಿ
777 ಚಾರ್ಲಿ ಸಿನಿಮಾವು ಮಾನವ ಹಾಗೂ ನಾಯಿಯ ನಡುವಿನ ಅಮೋಘ ಬಾಂಧವ್ಯವನ್ನು ಮನಮುಟ್ಟುವಂತೆ ಚಿತ್ರಿಸಿರುವ ಚಿತ್ರವಾಗಿದೆ.

ನಾಯಕ (ರಕ್ಷಿತ್ ಶೆಟ್ಟಿ) ಹಾಗೂ ಆತನ ನಾಯಿ ಚಾರ್ಲಿಯ ಜೊತೆಗಿನ ಪ್ರಯಾಣವನ್ನು ಚಿತ್ರವು ವೀಕ್ಷಕರ ಮುಂದೆ ಪ್ರಸ್ತುತಪಡಿಸಿದೆ.

ನಾಯಿ ಹಾಗೂ ಮಾನವನ ನಡುವಿನ ಅಪ್ರತಿಮ ಬಾಂಧವ್ಯಕ್ಕೆ ಚಾರ್ಲಿ ಚಿತ್ರ ಸಾಕ್ಷಿಯಾಗಿದೆ. ಚಿತ್ರವು ಸಿನಿ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆಮಾಡುವಷ್ಟು ಮನಮೋಹಕವಾಗಿ ಮೂಡಿಬಂದಿದೆ.
Pathaan Movie: ಶಾರುಖ್ ಫೋಟೋ ಅಂಟಿಸಿದ್ದ ಮಡಿಕೆ ಒಡೆದು ಅಂತಿಮ ವಿಧಿವಿಧಾನ ಮಾಡಿದ ಅಯೋಧ್ಯೆ ಸ್ವಾಮೀಜಿ!

ಗುರುಶಿಷ್ಯರು

ಗುರುಶಿಷ್ಯರು ಚಿತ್ರವು ಕ್ರೀಡಾ ಚಿತ್ರವೆಂದೆನಿಸಿದ್ದು ಚಿತ್ರದ ನಾಯಕ ಶರಣ್ ಆಸಕ್ತಿರಹಿತ ಯುವ ಕೋಕೋ ಆಟಗಾರರ ಕೋಚ್ ಆಗಿ ಚಿತ್ರದಲ್ಲಿ ವಿಜೃಂಭಿಸಿದ್ದಾರೆ.
ಹದಿಹರೆಯದ ಕೋಕೋ ಪಟುಗಳಿಗೆ ಆಟದಲ್ಲಿ ಆಸಕ್ತಿ ಇರುವುದಿಲ್ಲ ಅದಾಗ್ಯೂ ಶರಣ್, ಅವರಿಗೆ ಆಟದಲ್ಲಿ ಆಸಕ್ತಿಯನ್ನು ಹೇಗೆ ಮೂಡಿಸುತ್ತಾರೆ ಹಾಗೂ ತರಬೇತುದಾರನಾಗಿ ಅವರಿಗೆ ಹೇಗೆ ಮಾರ್ಗದರ್ಶನ ನೀಡುತ್ತಾರೆ ಎಂಬುದೇ ಚಿತ್ರದ ಮುಖ್ಯ ಸಾರವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಟ್ರೀಟ್ಮೆಂಟ್​ಗೆ ಅಂತ 5 ಸಾವಿರ ಖರ್ಚು ಮಾಡಿದ ಖಾಕಿ ಪಡೆ!​

Thu Dec 29 , 2022
ಕೋಳಿ ಕಾಳಗವನ್ನು ಕೇಳಿದ್ದೀರಾ? ಎರಡು ಕೋಳಿಗಳ ಕಾಲಿಗೆ ಚಾಕುವನ್ನು ಕಟ್ಟಿ ಫೈಟ್​ ಆಡಲು ಬಿಡುತ್ತಾರೆ. ಜಾತ್ರೆಗಳಲ್ಲಿ, ಊರಿನ ಕೆಲವು ಹಬ್ಬಗಳಲ್ಲಿ ಇದನ್ನು ಕಾಣಬಹುದಾಗಿದೆ. ಆದರೆ, ನಿಜವಾಗಿಯೂ ಇದು ಕಾನೂನು ಪ್ರಕಾರ ಅಕ್ರಮ ಆಟ (Illegal Game). ಆದರೂ ಕೂಡ ದುಡ್ಡಿಗಾಗಿ ಪ್ರಾಣಿಗಳಿನ್ನು (Animal) ಮುಂದಕ್ಕೆ ಇಡುತ್ತಾರೆ. ಹಾಗೆಯೇ ಅವುಗಳಿಗಾಗಿ ಅದೆಷ್ಟೋ ದಿನಗಳಿಂದ ಟ್ರೈನಿಂಗ್​ ಕೂಡ ನೀಡುತ್ತಾರೆ, ಅದಕ್ಕಾಗಿಯೇ ಆಹಾರ ಕ್ರಮಗಳನ್ನು ಪಾಲಿಸುತ್ತಾರೆ. ಇದಕ್ಕೆ ಸಿಕ್ಕಿಬಿದ್ದ ಅದೆಷ್ಟೋ ಕೇಸ್​ಗಳು ಇವೆ. ಆದರೂ […]

Advertisement

Wordpress Social Share Plugin powered by Ultimatelysocial