ಸಣ್ಣ ಮೊತ್ತದ ರೋಚಕ ಏಕದಿನ ಹಣಾಹಣಿ!

ಢಾಕಾ: ಸಣ್ಣ ಮೊತ್ತದ ರೋಚಕ ಏಕದಿನ ಹಣಾಹಣಿ ಯೊಂದರಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ ಬಾಂಗ್ಲಾದೇಶವನ್ನು 3 ವಿಕೆಟ್‌ಗಳಿಂದ ಸೋಲಿಸಿತು.

ಬಾಂಗ್ಲಾದೇಶ 47.2 ಓವರ್‌ಗಳಲ್ಲಿ 209ಕ್ಕೆ ಆಲೌಟಾದರೆ, ಇಂಗ್ಲೆಂಡ್‌ 48.4 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 212 ರನ್‌ ಬಾರಿಸಿತು.

ವನ್‌ಡೌನ್‌ ಆಟಗಾರ ಡೇವಿಡ್‌ ಮಲಾನ್‌ ಅವರ ಅಜೇಯ ಶತಕ ಇಂಗ್ಲೆಂಡ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು 114 ರನ್‌ ಹೊಡೆದರು (145 ಎಸೆತ, 8 ಬೌಂಡರಿ, 4 ಸಿಕ್ಸರ್‌).

ಇಂಗ್ಲೆಂಡ್‌ ನಿರಂತರವಾಗಿ ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದಾಗ ಒಂದೆಡೆ ಕ್ರೀಸ್‌ ಕಚ್ಚಿಕೊಂಡು ನಿಂತ ಡೇವಿಡ್‌ ಮಲಾನ್‌ ಬಾಂಗ್ಲಾದ ಆಸೆಗೆ ತಣ್ಣೀರೆರಚಿದರು. ಮೊದಲ ಓವರ್‌ನಲ್ಲೇ ಜೇಸನ್‌ ರಾಯ್‌ (4) ಅವರನ್ನು ಕಳೆದುಕೊಂಡ ಬಳಿಕ ಮಲಾನ್‌ ಕ್ರೀಸ್‌ ಇಳಿದಿದ್ದರು. 65ಕ್ಕೆ 4 ವಿಕೆಟ್‌, 103ಕ್ಕೆ 5 ವಿಕೆಟ್‌, 161ಕ್ಕೆ 7 ವಿಕೆಟ್‌… ಹೀಗೆ ಇಂಗ್ಲೆಂಡ್‌ ಹಂತ ಹಂತಕ್ಕೂ ಆತಂಕ ಎದುರಿಸುತ್ತ ಹೋಯಿತು. ಆದರೆ ಮಲಾನ್‌ ಮಾತ್ರ ಪಟ್ಟು ಸಡಿಲಿಸಲಿಲ್ಲ. ಅವರಿಗೆ ವಿಲ್‌ ಜಾಕ್ಸ್‌ (26), ಕೊನೆಯಲ್ಲಿ ಆದಿಲ್‌ ರಶೀದ್‌ (ಅಜೇಯ 17) ಉತ್ತಮ ಬೆಂಬಲ ನೀಡಿದರು.

ಬಾಂಗ್ಲಾವನ್ನು ನಿಯಂತ್ರಿಸುವಲ್ಲಿ ಇಂಗ್ಲೆಂಡ್‌ನ‌ ನಾಲ್ವರು ಬೌಲರ್‌ಗಳ ಪಾಲಿತ್ತು. ಜೋಫ‌Å ಆರ್ಚರ್‌, ಮಾರ್ಕ್‌ ವುಡ್‌, ಮೊಯಿನ್‌ ಅಲಿ ಮತ್ತು ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಉರುಳಿಸಿದರು. ಬಾಂಗ್ಲಾ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದವ ರೆಂದರೆ ನಜ್ಮುಲ್‌ ಹುಸೇನ್‌ (58) ಮತ್ತು ಮಹಮದುಲ್ಲ (31).

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲತಾ ಮಂಗೇಶ್ಕರ್ ಬಗ್ಗೆ ರಾನು ಮಂಡಲ್ ಆಡಿದ ಮಾತು ಕೇಳಿ ,

Thu Mar 2 , 2023
ರಾತ್ರೋರಾತ್ರಿ ಸ್ಟಾರ್ ಆದ ಗಾಯಕಿ ರಾನು ಮಂಡಲ್ ಇದೀಗ ಕಣ್ಮರೆಯಾಗಿರಬಹುದು, ಆದರೆ ಈಕೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಲೇ ಇರುತ್ತವೆ.ಬಾಲಿವುಡ್ ಗಾಯಕ ಮತ್ತು ಸಂಗೀತ ಸಂಯೋಜಕ ಹಿಮೇಶ್ ಅವರ ಚಿತ್ರಗಳಲ್ಲಿ ಹಾಡಲು ಅವಕಾಶ ನೀಡಿದರು. ಆದಾಗ್ಯೂ, ಅವಳು ಈ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಶೀಘ್ರದಲ್ಲೇ ತನ್ನ ಖ್ಯಾತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದಳು. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ರಾನು ಮಂಡಲ್ ವಿಡಿಯೋ ಒಂದು ವೈರಲ್ ಆಗಿದೆ. ದಿವಂಗತ ಗಾಯಕಿ ಲತಾ […]

Advertisement

Wordpress Social Share Plugin powered by Ultimatelysocial