ಎಲ್ಲರಿಗೂ ತಮ್ಮ ಕೂದಲು, ಮುಖ ಹೊಳೆಯುತ್ತಿರಬೇಕು ಎಂಬ ಆಸೆ!

ಹಾಗಾಗಿ ದುಬಾರಿ, ಕ್ರೀಮ್, ಶಾಂಪೂ ತಂದು ಉಪಯೋಗಿಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನೈಸರ್ಗಿಕವಾಗಿ ಸಿಗುವ ಹಣ್ಣು, ತರಕಾರಿಗಳಿಂದ ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.

ಕುಂಬಳಕಾಯಿಂದ ಸಾಂಬಾರು, ಹಲ್ವಾ ಹೀಗೆ ನಾನಾ ತರಹದ ಖಾದ್ಯಗಳನ್ನು ಮಾಡಿಕೊಂಡು ಸವಿಯುತ್ತೇವೆ. ಅದೇ ಕುಂಬಳಕಾಯಿಯಿಂದ ನಮ್ಮ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ನಮ್ಮ ಚರ್ಮ ಹಾಗೂ ಕೂದಲಿನ ಕಾಂತಿಗೆ ಇದು ಹೇಳಿ ಮಾಡಿಸಿದ್ದು.

ಮುಖದಲ್ಲಿ ಕಪ್ಪು ಕಲೆ, ಚುಕ್ಕಿಗಳಿದ್ದರೆ ಒಂದು ಟೇಬಲ್ ಸ್ಪೂನ್ ಕುಂಬಳಕಾಯಿ ತಿರುಳು ತೆಗೆದುಕೊಳ್ಳಿ. ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ 1 ಟೀ ಸ್ಪೂನ್ ಜೇನು ತುಪ್ಪ, 1 ಟೀ ಸ್ಪೂನ್ ಲಿಂಬೆ ಹಣ್ಣಿನ ರಸ, 1 ಟೀ ಸ್ಪೂನ್ ವಿಟಮಿನ್ ಇ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಡಿ. ಆಮೇಲೆ ಮುಖ ತೊಳೆಯಿರಿ. ಇದರಿಂದ ನಿಮ್ಮ ಮುಖದ ಅಂದ ಹೆಚ್ಚುತ್ತದೆ.

ಇನ್ನು ಒರಟಾದ ಕೂದಲಿಗೆ 2 ಕಪ್ ಬೇಯಿಸಿದ ಕುಂಬಳಕಾಯಿ ಹೋಳಿಗೆ 1 ಟೇಬಲ್ ಸ್ಪೂನ್ ತೆಂಗಿನೆಣ್ಣೆ, 1 ಟೇಬಲ್ ಸ್ಪೂನ್ ಜೇನುತುಪ್ಪ, 1 ಟೇಬಲ್ ಸ್ಪೂನ್ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ನಿಮ್ಮ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತಲೆ ತೊಳೆದುಕೊಳ್ಳಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜ್ಞಾನ್ವಾಪಿ ಮಸೀದಿಯ ಸಮೀಕ್ಷೆಯನ್ನು ತಕ್ಷಣವೇ ತಡೆಹಿಡಿಯಬೇಕೆಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

Fri May 13 , 2022
ನವದೆಹಲಿ: ಜ್ಞಾನ್ವಾಪಿ ಮಸೀದಿಯ ಸಮೀಕ್ಷೆಯನ್ನು ತಕ್ಷಣವೇ ತಡೆಹಿಡಿಯಬೇಕೆಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆದಾಗ್ಯೂ, ಸುಪ್ರೀಂ ಕೋರ್ಟ್ ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. ಅಂಜುಮನ್ ಸಮನ್ ಸಖಾರಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ‘ಈ ವಿಷಯದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲ. ಇಂಥಹ ಪರಿಸ್ಥಿತಿಯಲ್ಲಿ, ನಾವು ತಕ್ಷಣವೇ ಆದೇಶವನ್ನು ಹೇಗೆ ಹೊರಡಿಸಬಹುದು? ನಾವು ಈ ಪ್ರಕರಣವನ್ನು ಪಟ್ಟಿ ಮಾಡಬಹುದು. ಈ ಪ್ರಕರಣಕ್ಕೆ […]

Advertisement

Wordpress Social Share Plugin powered by Ultimatelysocial