ಅರ್ಜೆಂಟ್​ ಕೆಲಸ ಎಂದು ಹೋಗಿದ್ದ ಅಪ್ಪ ನಡುರಸ್ತೆಯಲ್ಲೇ ಹೆಣ, 24 ಗಂಟೆಯಲ್ಲೇ ಆರೋಪಿ ಅರೆಸ್ಟ್​!

ಬೆಂಗಳೂರು: ಆಗಷ್ಟೇ‌ ಕೆಲಸ ಮುಗಿಸಿಕೊಂಡು ತರಕಾರಿ ಬ್ಯಾಗ್ (Vegetable Bag) ಸಮೇತ ಮನೆ ಕಡೆಗೆ ಹೊರಟಿದ್ದರು. ಮನೆಗೆ (Home) ಬರುವುದು ಮಗಳ (Daughter) ಕೈಗೆ ತರಕಾರಿ ಬ್ಯಾಗ್ ಕೊಟ್ಟು, ಅರ್ಜೆಂಟ್ ಕೆಲಸ ಇದೆ ಹೋಗಿ ಬರುತ್ತೇನೆ, ಮನೆ‌ ಲಾಕ್ ಮಾಡಿಕೊಂಡು ಮಲಗಿ ಅಂತ ಹೇಳಿ ಹೋಗಿದ್ದರು.

ಆದರೆ ಮುಂದೆ ಆಗಿದ್ದು ಮಾತ್ರ ಘನಘೋರ. ನಿರ್ಜನ ಪ್ರದೇಶದ ನಡು ರಸ್ತೆಯಲ್ಲಿ (Road) ವ್ಯಕ್ತಿಯನ್ನು ಕೊಚ್ಚಿ ಕೊಲೆ (Murder) ಮಾಡಿದ್ದರು. ಕೊಲೆಯಾದ ವ್ಯಕ್ತಿಯನ್ನು 56 ವರ್ಷದ ದಿನೇಶ್​ ಎಂದು ಗುರುತಿಸಲಾಗಿತ್ತು.
ರಾತ್ರಿ 9ರ ಸುಮಾರಿಗೆ ಕೊಚ್ಚಿ ಕೊಂದ ದುಷ್ಕರ್ಮಿಗಳು!
ಕೊಲೆಯಾದ ದಿನೇಶ್​ ಮಂಗನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಾರ್ಪೆಂಟರ್ ಜೊತೆಗೆ ಮನೆ ತೋರಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿ, ತರಕಾರಿ ತಗೊಂಡು ಮನೆಗೆ ಬಂದಿದ್ದ ದಿನೇಶ್, ಮನೆ ಮುಂದೆಯೇ ನಿಂತು ಹಾರ್ನ್ ಮಾಡಿ ಮಗಳನ್ನು ಕರೆದು ತರಕಾರಿ ಬ್ಯಾಗ್ ಕೊಟ್ಟಿದ್ದರು.
ಬಳಿಕ ಅರ್ಜೆಂಟ್ ಕೆಲಸ ಇಟೀಂಗಳಿಂದಲೂ ಸ್ಥಳ ಪರಿಶೀಲನೆ!ದೆ, ನಾನು ಬರೋದು ಸ್ವಲ್ಪ ತಡ ಆಗುತ್ತೆ, ಡೋರ್​ ಲಾಕ್ ಮಾಡಿಕೊಂಡು ಮಲಗಿರಿ ಅಂತ ಹೇಳಿ ಹೋಗಿದ್ದರು. ಹೀಗೆ ಹೋದ 10 ನಿಮಿಷಕ್ಕೆ ದಿನೇಶ್​ರನ್ನು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದರು.ಶ್ವಾನದಳ, ಬೆರಳಚ್ಚು
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಜ್ಞಾನಭಾರತಿಯ ಸರ್.ಎಂ ವಿಶ್ವೇಶ್ವರಯ್ಯ ಲೇಔಟ್​ನ ದೊಡ್ಡಬಸ್ತಿ ಬಳಿಯ ನಿರ್ಜನ ಪ್ರದೇಶದಲ್ಲಿ ಬರ್ಬರ ಕೊಲೆ ನಡೆದಿತ್ತು. ದಿನೇಶ್ ಬೈಕ್​ನಲ್ಲಿ ತೆರಳ್ತಿದ್ದಾಗ ಅಡ್ಡಗಟ್ಟಿರುವ ದುಷ್ಕರ್ಮಿಗಳು, ಮನಸೋ ಇಚ್ಛೆ ಲಾಂಗು, ಮಚ್ಚಿನಿಂದ‌ ದಾಳಿ ಮಾಡಿದ್ದಾರೆ. ಕತ್ತು ಸೀಳಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಬಂದ ಜ್ಞಾನಭಾರತಿ ಪೊಲೀಸರು ಸುತ್ತಮುತ್ತ ಪರಿಶೀಲನೆ ಮಾಡಿದಾಗ ಒಂದು ಲಾಂಗ್ ಸಿಕ್ಕಿದೆ.
ಬೆರಳಚ್ಚು ಹಾಗೂ ಶ್ವಾನದಳ ಪರಿಶೀಲನೆ ಮಾಡಿದ್ದು, ಆರೋಪಿಗಳಿಗಾಗಿ ಬಲೆಬೀಸಿ ಬಂಧಿಸಿದ್ದಾರೆ. ಕೊಲೆಗೂ ಮುನ್ನ ದಿನೇಶ್​ಗೆ ಬಾಪೂಜಿನಗರ ನಿವಾಸಿ ಪೇಂಟರ್ ಅರುಣ್ ಎಂಬಾತ ನಾಲ್ಕೈದು ಬಾರಿ ಕರೆ ಮಾಡಿದ್ದು, ಘಟನೆ ಬಳಿಕ ಅರುಣ್ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆ ಬಿಟ್ಟು ತೆರಳಿದ್ದ. ಕೊಲೆ ಹಿಂದೆ ಅರುಣ್ ಇದ್ದಾನ ಅನ್ನೋ ಶಂಕೆ ವ್ಯಕ್ತವಾಗಿತ್ತು, ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

'ಗ್ರೀನ್ ಟೀ'ಯಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಯಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣ.

Fri Feb 24 , 2023
  ವೈರಲ್ ಇನ್ಫೆಕ್ಷನ್ ಗೆ ಪ್ರಮುಖ ಕಾರಣ ಹವಾಮಾನ ಬದಲಾವಣೆ. ಮಳೆಗಾಲ ಶುರುವಾಯ್ತು ಅಂದಾಕ್ಷಣ ಹವಾಮಾನ ಬದಲಾಗೋದು ಸಹಜ. ಈ ಸಮಯದಲ್ಲೇ ವೈರಸ್ ಗಳ ಕಾಟ ಶುರುವಾಗುತ್ತೆ. ಇನ್ಫೆಕ್ಷನ್ ಇದ್ದಾಗ ನೆಗಡಿ ಹಾಗೂ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಸ್ವಲ್ಪ ಕಡಿಮೆಯಾದ ಕೂಡಲೇ ಕೆಮ್ಮು ಕಾಡಲಾರಂಭಿಸುತ್ತದೆ.ಹಾಗಾಗಿ ನಿಮ್ಮ ದಿನನಿತ್ಯದ ಡಯಟ್ ನಲ್ಲಿ ಗ್ರೀನ್ ಟೀಯನ್ನೂ ಸೇರಿಸಿಕೊಳ್ಳಿ. ತಪ್ಪದೇ ಪ್ರತಿನಿತ್ಯ ಗ್ರೀನ್ ಟೀ ಕುಡಿಯಿರಿ. ಯಾಕಂದ್ರೆ ಗ್ರೀನ್ ಟೀ, ನೆಗಡಿ ಹಾಗೂ ಕೆಮ್ಮಿಗೆ […]

Advertisement

Wordpress Social Share Plugin powered by Ultimatelysocial