ರಾಜಧಾನಿಯಲ್ಲಿ ಹೆಚ್ಚುತ್ತಿವೆ ಕರೋನಾ ಕೇಸ್ ಗಳು ! ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಸೂಚನೆ

ಪಾಲಿಕೆಯ ವಿಶೇಷ ಆಯುಕ್ತರ ತ್ರಿಲೋಕ್ ಚಂದ್ರರಿಂದ ಸೂಚನೆ

ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು, ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(PHANA) ಮತ್ತು ಅನೇಕ ಪ್ರಮುಖ ಖಾಸಗಿ ಆಸ್ಪತ್ರೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(RWAs), ವರ್ತಕರ ಸಂಘಗಳು, ಮಾಲ್ ಗಳು, ಹೋಟೆಲ್ ಗಳು, ಚಿತ್ರಮಂದಿರಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳಿಗೆ ಎಚ್ಚರಿವಿರಲು ಕ್ರಮ

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಗಳಿಗೆ ಸೂಚನೆ ‌ನೀಡಿದ ತ್ರಿಲೋಲ್ ಚಂದ್ರ

1. ಹೊರ ರೋಗಿಗಳ ವಿಭಾಗ(OPD)ಗಳಲ್ಲಿ ಎಲ್ಲಾ ILI/ SARI ಪ್ರಕರಣಗಳನ್ನು ಪರೀಕ್ಷಿಸಿ. ಒಳರೋಗಿಗಳಿಗೆ ಕೋವಿಡ್-19 ಪರೀಕ್ಷೆ ಮಾಡಬೇಕು.

2. ICMR ಪೋರ್ಟಲ್ ನಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಎಲ್ಲಾ ಪರೀಕ್ಷಾ ವಿವರಗಳನ್ನು ಅಪ್ಲೋಡ್ ಮಾಡಿ. CT ವ್ಯಾಲ್ಯು 30 ಕ್ಕಿಂತ ಕಡಿಮೆ ಇರುವ ಎಲ್ಲಾ ಪಾಸಿಟಿವ್ ಪ್ರಕರಣಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಹಿಸಲು ಸೂಚನೆ

3. ಖಾಸಗಿ ಆಸ್ಪತ್ರೆಯ ಹಾಸಿಗೆ ಗಳನ್ನು ಕಾಯ್ದಿರಿಸುವ ಕುರಿತು ಚರ್ಚಿಸಲಾಯಿತು ಮತ್ತು ಶೇ. 10 ಮೀಸಲಾತಿಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಹಿಂದಿನ ಆದೇಶವು ಇನ್ನೂ ಪ್ರಸ್ತುತವಾಗಿದೆ ಮತ್ತು ಆಸ್ಪತ್ರೆಗಳು ಅದನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕು

4. ಖಾಸಗಿ ಆಸ್ಪತ್ರೆಯ ಹಾಸಿಗೆ ಗಳಿಗಾಗಿ ರಿಯಲ್ ಟೈಮ್ ಬೆಡ್ ಲಭ್ಯತೆ ಪೋರ್ಟಲ್ ಅನ್ನು ತಕ್ಷಣವೇ ಸಕ್ರಿಯಗೊಳಿಸಬೇಕು

ಸಿನಿಮಾ ಹಾಲ್ ಗಳು, ಮಾಲ್ ಗಳು, ರೆಸ್ಟೋರೆಂಟ್ ಗಳು, ಹೋಟೆಲ್ ಗಳು, ವ್ಯಾಪಾರಿ ಒಕ್ಕೂಟಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳಿಗೆ ನೀಡಲಾದ ಸೂಚನೆಗಳು:

1. ಹೋಟೆಲ್ ಗಳು, ಮಾಲ್ ಗಳು, ಅಂಗಡಿಗಳು, ಚಿತ್ರಮಂದಿರಗಳು ಇತ್ಯಾದಿ ವಾಣಿಜ್ಯ ಸ್ಥಳಗಳಲ್ಲಿ ಕೋವಿಡ್ ಸಮುಚಿತ ನಡವಳಿಕೆಯನ್ನು(CAB) ಖಚಿತಪಡಿಸಿಕೊಳ್ಳುವುದು

2. ಸಿನಿಮಾ ಹಾಲ್ ಗಳು, ಮಾಲ್ ಗಳು, ರೆಸ್ಟೋರೆಂಟ್ ಗಳು, ಹೋಟೆಲ್ ಗಳಿಗೆ ಪ್ರವೇಶಕ್ಕಾಗಿ ಡಬಲ್ ಡೋಸ್ ವ್ಯಾಕ್ಸಿನೇಷನ್ ಅನ್ನು ಕಟ್ಟುನಿಟ್ಟಾಗಿ ಕಡ್ಡಾಯಗೊಳಿಸಬೇಕು

3. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟಿನ ಜಾರಿ ಮತ್ತು ಪ್ರವೇಶ ದ್ವಾರಗಳಲ್ಲಿ ತಾಪಮಾನ ತಪಾಸಣೆ

4. ಎಲ್ಲಾ ಸಿಬ್ಬಂದಿಗಳ ಲಸಿಕಾಕರಣವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅವರನ್ನು ಆಗಾಗ್ಗೆ ಪರೀಕ್ಷೆಗೊಳಪಡಿಸುವುದು

5. ಹೆಚ್ಚಿನ ಪ್ರಕರಣಗಳಿರುವ ಪ್ರದೇಶಗಳಿಂದ ಬರುವವರ, ಅದರಲ್ಲೂ ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚು ಜಾಗರೂಕರಾಗಿರುವುದು

6. ಹೆಚ್ಚು ಜನರು ಸೇರುವ ವ್ಯಾಪಾರ ಪ್ರದೇಶಗಳಲ್ಲಿ ಮಾರ್ಷಲ್ ಗಳು ಗಸ್ತು ತಿರುಗಬೇಕು ಮತ್ತು ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ(RWAs) ನೀಡಲಾದ ಸೂಚನೆಗಳು:

1. ಹೆಚ್ಚಿನ ಕಣ್ಗಾವಲು ಚಟುವಟಿಕೆಗಳಿಗೆ ಸಹಕಾರ ನೀಡಿ

2. ಮುನ್ನೆಚ್ಚರಿಕೆ ಡೋಸ್ ಕವರೇಜ್ ಮತ್ತು ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ RWA ಮಟ್ಟದಲ್ಲಿ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳಬೇಕು

3. ಎಲ್ಲಾ ವಯೋಮಾನದವರೂ ಶೇ. 100 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು RWA ಗಳಲ್ಲಿ ಶಿಬಿರಗಳನ್ನು ಆಯೋಜಿಸಬೇಕು

4. ದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳಿಂದ ಜೀನೋಮಿಕ್ ಕಣ್ಗಾವಲಿಗಾಗಿ ಸೀವೇಜ್ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ

5. ಚಾಲ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಕಾರ RWA ಗಾಗಿ ಪರಿಷ್ಕೃತ ಸಲಹೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಮತ್ತು ಅದನ್ನು ಹಂಚಿಕೊಳ್ಳಬೇಕು

6. ಉಗುಳುವಿಕೆ ವಿರುದ್ಧ ಆಂದೋಲನ ಮತ್ತು ಮಾಸ್ಕ್ ಧಾರಣೆ ಅಭಿಯಾನದ ಪುನರಾರಂಭ

7. ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು ಪರೀಕ್ಷಿಸಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿಬಿಎಂಪಿ ಆವರಣದಲ್ಲೆ ಬಿಂದಾಸ್ ಎಣ್ಣೆ ಪಾರ್ಟಿ...!

Sat Apr 30 , 2022
ಬಿಬಿಎಂಪಿ ಮುಖ್ಯ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆ ಪಕ್ಕದಲ್ಲೆ ಎಣ್ಣೆಪಾರ್ಟಿ…! ರಾತ್ರಿ 10 ಗಂಟೆಯಾಗ್ತಿದ್ದಂತೆ ಬಿಂದಾಸ್ ಎಣ್ಣೆಪಾರ್ಟಿ…! ಬಿಬಿಎಂಪಿ ಡ್ತೈವರ್ ಗೋಪಾಲ್ & ಟೀಂ ನಿಂದ ಮಸ್ತ್ ಎಣ್ಣೆಪಾರ್ಟಿ ಕ್ಯಾಮೆರಾ ನೋಡ್ತಿದ್ದಂತೆ ಎಣ್ಣೆಬಿಟ್ಟು ಜೂಟ್ ಕತ್ತಲಾಗ್ತಿದ್ದಂತೆ ಬಿಬಿಎಂಪಿ ಕಚೇರಿ ಆವರಣದಲ್ಲೆ ಎಣ್ಣೆಪಾರ್ಟಿ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರ ಭೇಟಿ ಪರಿಶೀಲನೆ ಹೊಯ್ಸಳ ವಾಹನ ಬರ್ತಿದ್ದಂತೆ ಬಿಬಿಎಂಪಿ ಆವರಣದಿಂದ ಕಾಲ್ಕಿತ್ತ ಎಣ್ಣೆಪಾರ್ಟಿಗಳು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪರ ಕಾರು ಚಾಲಕ ಗೋಪಾಲ್ & […]

Advertisement

Wordpress Social Share Plugin powered by Ultimatelysocial