ಆರ್.ಜಿ.ವಿ – ಉಪೇಂದ್ರ ಸಮಾಗಮದಲ್ಲಿ ಬರಲಿದೆ “I AM R” ಪ್ಯಾನ್ ಇಂಡಿಯಾ ಸಿನಿಮಾ!

ಟೈಟಲ್ ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ ಸುದೀಪ.

ಸಿನಿರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು ರಾಮ್ ಗೋಪಾಲ್ ವರ್ಮ ಮತ್ತು ಉಪೇಂದ್ರ. ಇವರಿಬ್ಬರ ಕಾಂಬಿನೇಶನಲ್ಲಿ “I AM R” ಸಿನಿಮಾ ಬರುತ್ತಿದೆ ‌. ರಾಮ್ ಗೋಪಾಲ್ ವರ್ಮ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಕಿಚ್ಚ ಸುದೀಪ ಮುಖ್ಯ ಅತಿಥಿಯಾಗಿ ಆಗಮಿಸಿ ಶೀರ್ಷಿಕೆ ಬಿಡುಗಡೆ ಮಾಡಿದರು.

ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ, ನನಗೆ ಈ ಸಮಾರಂಭಕ್ಕೆ ಬಂದ ಮೇಲೆ ಒಂಥರಾ ಅನಿಸುತ್ತಿದೆ. ನಾನು ಏಕೆ ಈ ಸಿ‌‌ನಿಮಾದಲ್ಲಿ ಇಲ್ಲ ಅಂತ? ಏಕೆಂದರೆ, ನಾನು ನಾಯಕನಾಗಲು ಉಪೇಂದ್ರ ಅವರೆ ಕಾರಣ. ನಿರ್ದೇಶಕನಾಗಬೇಕೆಂದಿದ್ದ ನನಗೆ ನಾಯಕನಾಗಲು ಪ್ರೇರೇಪಿಸಿದೇ ಅವರು. ಇನ್ನೂ ನನ್ನ ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನ ಸಿನಿಪಯಣ ಆರಂಭಿಸಿದ್ದು ಆರ್ ಜಿ ವಿ ಅವರು. ಇವರಿಬ್ಬರ ಜೋಡಿಯಲ್ಲಿ ಉತ್ತಮ ಚಿತ್ರ ಬರವುದು ಖಂಡಿತ. ನಿರ್ಮಾಪಕ ರಾಜ್ ಯಜಮಾನ್ ಅವರನ್ನು
ಬಹಳ ದಿನಗಳಿಂದ ಬಲ್ಲೆ. ಇಲ್ಲಿಗೆ ಬಂದು ಅವರ ಇತಿಹಾಸ ತಿಳಿದು ಇನ್ನೂ ಸಂತೋಷವಾಯಿತು. R ಎಂದರೆ ಏನು ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್, R ಎಂದರೆ ರಿಯಲ್ ಸ್ಟಾರ್. R ಎಂದರೆ ರಾಮ್ ಗೋಪಾಲ್ ವರ್ಮ ಅಂತ ಇರಬೇಕು. ಹಿಂದೆ ಮೂರು R ಬಂದಾಗ ಯಾರು ಕೇಳಲಿಲ್ಲ. ಈಗ ಒಂದು R ಬಗ್ಗೆ ಎಷ್ಟು ಕೇಳುತ್ತಿದ್ದಿರಾ? ನೋಡಿ ಎಂದು ಹೇಳಿದರು.

ಉಪೇಂದ್ರ ಅವರು ಈಗಾಗಲೇ ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಹೆಸರು ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ. ‍R ಎಂದರೆ ಏನು? ಎಂಬುದನ್ನು ಈಗಲೇ ಹೇಳುವುದಿಲ್ಲ. ಟ್ರೇಲರ್ ಬಿಡುಗಡೆ ಸಮಯದಲ್ಲಿ ಹೇಳುತ್ತೇನೆ. ಒಟ್ಟಿನಲ್ಲಿ ನಮ್ಮಿಬ್ಬರಿಂದ ಉತ್ತಮ ಚಿತ್ರ ಬರಲಿದೆ ಎಂದ ರಾಮ ಗೋಪಾಲ್ ವರ್ಮ, ದೇಶಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿರುವ “ಕೆ ಜಿ ಎಫ್ 2” ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಆರ್ ಜಿ ವಿ ಅವರ “ಶಿವ” ಸಿನಿಮಾ ನೋಡಿ, “ಓಂ” ಚಿತ್ರ‌ ಮಾಡಬೇಕೋ? ಬೇಡವೋ? ಎಂದು ಯೋಚಿಸಿದ್ದೆ. ಅಂತಹ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿರುವವರು ಆರ್ ಜಿ ವಿ ಸರ್ ಅವರ ಜೊತೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ.‌ ನೈಜಘಟನೆ ಆಧಾರಿತ ಚಿತ್ರವಿದು.‌
ಅವರು ಹೇಳಿದಂತೆ ಉತ್ತಮ ಚಿತ್ರ ಆಗಿ ಹೊರಹೊಮ್ಮುವ ವಿಶ್ವಾಸವಿದೆ. ಟೈಟಲ್ ರಿಲೀಸ್ ಮಾಡಿಕೊಟ್ಟ ಸುದೀಪ ಅವರಿಗೆ ‌ಧಾನ್ಯವಾದ. ಇನ್ನೂ ನಿರ್ಮಾಪಕ ರಾಜ್ ಅವರ ಬಗ್ಗೆ ಹೇಳಬೇಕಾದರೆ, ಇವರು ನನ್ನ ಜೊತೆ ನಟಿಸಿದ್ದಾರೆ. “ಉಪೇಂದ್ರ” ಚಿತ್ರದಲ್ಲಿ ನಾಯಕಿ ದಾಮಿನಿ‌‌ ಅವರ ಲವರ್ ಪಾತ್ರದಲ್ಲಿ ‌ಕಾಣಿಸಿಕೊಂಡಿದ್ದರು ಎಂದು ಉಪೇಂದ್ರ ನೆನಪಿಸಿಕೊಂಡರು.

ಇಂದು ನನ್ನ ಹುಟ್ಟುಹಬ್ಬ. ಈ ಮೂರು ದಿಗ್ಗಜರು ಸೇರಿ ನನ್ನ‌ ನಿರ್ಮಾಣದ ಚಿತ್ರಕ್ಕೆ ಚಾಲನೆ ನೀಡಿರುವುದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ಕಿಚ್ಚ ಸುದೀಪ, ಉಪೇಂದ್ರ ಹಾಗೂ ಆರ್ ಜಿ ವಿ ಅವರಿಗೆ ಅನಂತ ವಂದನೆ ಎಂದರು ನಿರ್ಮಾಪಕ ರಾಜ್ ಯಜಮಾನ್.

ನಿರ್ಮಾಪಕ ರಾಜ್ ಯಜಮಾನ್ ಕುಟುಂಬದವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ. ಇವರ ತಂದೆ ಹಾಗೂ ಅಜ್ಜಿಯವರು ರಾಜಕುಮಾರ್ ಅಭಿನಯದ
“ಭಲೇರಾಜ”, ” ಪ್ರೇಮದ ಕಾಣಿಕೆ”, “ಸಾಕ್ಷಾತ್ಕಾರ” ದಂತಹ ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿದವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆರ್ ಮಾಧವನ್ ಪುತ್ರ ವೇದಾಂತ್:'ನನ್ನ ತಂದೆಯ ನೆರಳಿನಲ್ಲಿ ನಾನು ಬದುಕಲು ಬಯಸಲಿಲ್ಲ'!

Mon Apr 25 , 2022
ಖ್ಯಾತ ನಟ ಆರ್ ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ಅವರು ಆರ್ ಮಾಧವನ್ ಅವರ ಮಗ ಎಂದು ಕರೆಯುವುದಕ್ಕಿಂತ ಹೆಚ್ಚಾಗಿ ತಮ್ಮದೇ ಹೆಸರಿನಿಂದ ಗುರುತಿಸಿಕೊಳ್ಳುವ ಬಗ್ಗೆ ತೆರೆದಿಟ್ಟರು. ಕ್ರೀಡೆಯಲ್ಲಿ ತನ್ನ ಅತ್ಯುತ್ತಮ ವೇಗದಿಂದ ಮಿಂಚಿರುವ ಯುವಕ ಭಯಂಕರ ಈಜುಗಾರ. ಇತ್ತೀಚೆಗೆ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ವೇದಾಂತ್, ಡಿಡಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ‘ತನ್ನ ತಂದೆಯ ನೆರಳಿನಲ್ಲಿ ಬದುಕಲು’ ಬಯಸುವುದಿಲ್ಲ ಎಂದು ಹೇಳಿದರು. ಅವರು […]

Advertisement

Wordpress Social Share Plugin powered by Ultimatelysocial