ಫ್ಲೈಟ್​ ಲೇಟ್​ ಆಗೂಯ್ತು ಅಂತ ಸಮಂತಾ ಮಾಡಿದ್ದೇನು ಗೊತ್ತಾ? ವಿಡಿಯೋ ಸಿಕ್ಕಾಪಟ್ಟೆ ವೈರಲ್….​!

ತೆಲುಗಿನ ನಟಿ ಸಮಂತಾ ರುತ್ ಪ್ರಭು(Samantha Ruthu Prabhu) ಒಂದಲ್ಲ ಒಂದು ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುವ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರು ತಾವು ನಟಿಸುವ ಚಿತ್ರಗಳಿಂದ ಹಿಡಿದು, ಇವರು ಜಿಮ್(Gym) ನಲ್ಲಿ ತೂಕಗಳನ್ನು ಎತ್ತುವ ತಾಲೀಮುಗಳ ವರೆಗೆ ಯಾವುದಾದರೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ ಎಂದು ಹೇಳಬಹುದು.ಪುಷ್ಪ'(Pushpa) ಸಿನಿಮಾ ಹೆಚ್ಚು ಸೌಂಡ್​ ಮಾಡಿದ್ದೇ ‘ಊ ಅಂಟಾವಾ ಮಾವ…’
ಎಂಬ ಸಾಂಗ್​ನಿಂದ. ಈ ಚಿತ್ರದಲ್ಲಿ ಅಲ್ಲು ಅರ್ಜುನ್(Allu Arjun)​ ಅಭಿನಯಿಸಿದ್ದರೂ, ಈ ಹಾಡು ನೋಡಲೆಂದೇ ಅದೆಷ್ಟೋ ಮಂದಿ ಚಿತ್ರಮಂದಿರಕ್ಕೆ ತೆರಳಿದ್ದರು.ಅಲ್ಲು ಅರ್ಜುನ್ ಜೊತೆನೇ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದ ಸಮಂತಾ(Samantha) ಬಗ್ಗೆನೂ ಮೆಚ್ಚುಗೆ ಮಾತುಗಳು ವ್ಯಕ್ತವಾಗಿದ್ದವು.ದೇವಿಶ್ರೀ ಪ್ರಸಾದ್(Devi Sri Prasad) ಟ್ಯೂನ್‌ಗೆ ಹೆಜ್ಜೆ ಹಾಕಿದ್ದ ಸಮಂತಾಗೆ ಥಿಯೇಟರ್‌ಗಳಲ್ಲಿ ಶಿಳ್ಳೆಗಳು ಬಿದ್ದಿದ್ದವು. ಮತ್ತೆ ಮತ್ತೆ ಈ ಹಾಡು ರಿಪೀಟ್​ ಮಾಡುವಂತೆ ಚಿತ್ರಮಂದಿರ(Theaters)ದಲ್ಲೇ ಪಡ್ಡೆ ಹೈಕ್ಳು ಗಲಾಟೆ ಮಾಡಿದ್ದರು. ಇದೀಗ ಅದೇ ರೀತಿಯ ಸ್ಟೆಪ್​ ಹಾಕಿ ಸಮಂತಾ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಇದು ಯಾವ ಸಿನಿಮಾದಲ್ಲೂ ಅಲ್ಲ.

ಏರ್​​ಪೋರ್ಟ್​ನಲ್ಲಿ ಮಸ್ತ್​ ಡ್ಯಾನ್ಸ್​ ಮಾಡಿದ ಸಮಂತಾ!

ಸಮಂತಾ ಅದ್ಭುತ ಡ್ಯಾನ್ಸರ್​ ಅನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಅವರು ಏರ್​ಪೋರ್ಟ್​ನಲ್ಲಿ (Airport) ಸ್ಟೆಪ್​ ಹಾಕಿರೋ ಹೊಸ ವಿಡಿಯೋ​ ಸಖತ್​ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು ಫುಲ್​ ಥ್ರಿಲ್​ ಆಗಿದ್ದಾರೆ. ಸಮಂತಾ ಸಖತ್ತಾಗಿ ಡ್ಯಾನ್ಸ್​ ಮಾಡುತ್ತೀರ ಅಂತ ಕಮೆಂಟ್​ ಮಾಡುತ್ತಿದ್ದಾರೆ. ನಟಿ ಸಮಂತಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೀಗಾಗಿ ಶೂಟಿಂಗ್​ನಲ್ಲಿ ಭಾಗಿಯಾಗಲು ವಿಮಾನ ಏರುವುದು ಸಮಂತಾ ಅವರಿಗೆ ಕಾಮನ್​. ಆದರೆ, ಕೆಲವೊಂದು ಬಾರಿ ವಿಮಾನ ಬರುವುದು ತಡವಾಗುತ್ತೆ, ಹೀಗೆ ಮೊನ್ನೆ ವಿಮಾನ ಬರುವುದು ತಡವಾಗಿದೆ. ಹೀಗಾಗಿ ಸಮಂತಾ ಭರ್ಜರಿ ಡ್ಯಾನ್ಸ್​ ಮಾಡಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಥಾಣೆ ಮತ್ತು ದಿವಾವನ್ನು ಸಂಪರ್ಕಿಸುವ ರಾಷ್ಟ್ರ ರೈಲು ಮಾರ್ಗಗಳಿಗೆ ಪ್ರಧಾನಿ ಮೋದಿ ಸಮರ್ಪಿಸಿದರು

Fri Feb 18 , 2022
  ಹೊಸದಿಲ್ಲಿ, ಫೆ.18: ಮಹಾರಾಷ್ಟ್ರದ ಥಾಣೆ ಮತ್ತು ದಿವಾ ನಡುವಿನ ಎರಡು ರೈಲು ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಕಲ್ಯಾಣ್ ಕೇಂದ್ರ ರೈಲ್ವೆಯ ಮುಖ್ಯ ಜಂಕ್ಷನ್ ಆಗಿದೆ. ದೇಶದ ಉತ್ತರ ಭಾಗದಿಂದ ಮತ್ತು ದಕ್ಷಿಣ ಭಾಗದಿಂದ ಬರುವ ಸಂಚಾರ ಕಲ್ಯಾಣದಲ್ಲಿ ವಿಲೀನಗೊಳ್ಳುತ್ತದೆ ಮತ್ತು CSMT (ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್) ಕಡೆಗೆ ಚಲಿಸುತ್ತದೆ. ಕಲ್ಯಾಣ್ ಮತ್ತು CSTM ನಡುವಿನ ನಾಲ್ಕು ಹಳಿಗಳ ಪೈಕಿ […]

Advertisement

Wordpress Social Share Plugin powered by Ultimatelysocial