ಅಸನ್ಸೋಲ್ ನಗರಗಳ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ ಗೆಲುವಿನ ನಗೆ ಬೀರಿದೆ.

ಕೋಲ್ಕತ್ತ: ಪಶ್ಚಿಮ ಬಂಗಾಳದ 4 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಕ್ಲೀನ್ ಸ್ವೀಪ್ ಮಾಡಿದೆ. ಬಿಧನ್‌ನಗರ, ಸಿಲಿಗುರಿ, ಚಂದರ್‌ನಗೊರ್ ಮತ್ತು ಅಸನ್ಸೋಲ್ ನಗರಗಳ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ ಗೆಲುವಿನ ನಗೆ ಬೀರಿದೆ.ಬಿಧನ್‌ ನಗರದ ಪಾಲಿಕೆಯ 41 ವಾರ್ಡ್‌ಗಳ ಪೈಕಿ 39ರಲ್ಲಿ ಗೆಲುವು ಸಾಧಿಸುವ ಮೂಲಕ ಟಿಎಂಸಿ ಅಧಿಕಾರವನ್ನು ಉಳಿಸಿಕೊಂಡಿದೆ. ಇಲ್ಲಿನ ಒಂದೇ ಒಂದು ವಾರ್ಡ್‌ನಲ್ಲಿ ಸಿಪಿಐ(ಎಂ) ಜಯ ಸಾಧಿಸಿದೆ.ಚಂದರ್‌ನಗೋರ್‌ನ 32 ವಾರ್ಡ್‌ಗಳ ಪೈಕಿ 31ರಲ್ಲಿ ಮಮತಾ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.ಇನ್ನೂ, ಸಿಲಿಗುರಿ ಪಾಲಿಕೆಯನ್ನು ಸಿಪಿಐ(ಎಂ)ನಿಂದ ಕಸಿದುಕೊಂಡಿರುವ ಟಿಎಂಸಿ 47 ವಾರ್ಡ್‌ಗಳ ಪೈಕಿ 37ರಲ್ಲಿ ಗೆದ್ದು ಬೀಗಿದೆ. 5 ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಎಡಪಕ್ಷ 4 ವಾರ್ಡ್‌ಗಳಲ್ಲಿ ಜಯ ಗಳಿಸಿದೆ. ಇಲ್ಲಿ ಶೇಕಡ 78.72ರಷ್ಟು ಮತಗಳನ್ನು ಟಿಎಂಸಿ ಗಳಿಸಿದೆ. 3,000 ಮತಗಳ ಅಂತರದಿಂದ ಗೆದ್ದ ಗೌತಮ್ ದೇವ್ ಅವರನ್ನು ಸಿಲಿಗುರಿಯ ಮೇಯರ್ ಎಂದು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.ಅಸನ್ಸೋಲ್‌ನಲ್ಲೂ ಟಿಎಂಸಿ ಕಮಾಲ್ ಮಾಡಿದೆ. ಇಲ್ಲಿನ 106 ವಾರ್ಡ್‌ಗಳ ಪೈಕಿ 66ರಲ್ಲಿ ಟಿಎಂಸಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ 5 ವಾರ್ಡ್‌ಗಳಲ್ಲಿ ಗೆದ್ದರೆ, ಕಾಂಗ್ರೆಸ್ ಮತ್ತು ಸಿಪಿಎಂ ತಲಾ ಎರಡರಲ್ಲಿ ಗೆಲುವು ಸಾಧಿಸಿದೆ.4 ಪಾಲಿಕೆ ಚುನಾವಣೆಗಳಲ್ಲಿ ತಮ್ಮ ಪಕ್ಷವೂ ಅಭೂತಪೂರ್ವ ಗೆಲುವು ಸಾಧಿಸಲು ನೆರವಾದ ಮತದಾರರಿಗೆ ಸಿಎಂ ಮಮತಾ ಬ್ಯಾನರ್ಜಿ ಧನ್ಯವಾದ ಹೇಳಿದ್ದಾರೆ. ಇದು ಜನರ ಗೆಲುವು ಎಂದು ಬಣ್ಣಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿ ಬಂದಿದ್ದರು

Mon Feb 14 , 2022
ಬೆಳಗಾವಿ: ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ನಡೆದಿದ್ದ ಹಿಜಾಬ್-ಕೇಸರಿ ಶಾಲು ವಿವಾದದ ಕಾರಣದಿಂದ ನೀಡಲಾಗಿದ್ದ ರಜೆ ಅವಧಿ ಮುಗಿದಿದ್ದು, ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ 9ನೇ ಹಾಗೂ 10ನೇ ತರಗತಿ ಶಾಲೆಗಳು ‌ಸೋಮವಾರದಿಂದ ಶಾಂತಿಯುತವಾಗಿ ಪುನರಾರಂಭಗೊಂಡಿವೆ.ನಗರದ ಸರ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ (ಶಿರವಸ್ತ್ರ)‌ ಧರಿಸಿ ಬಂದಿದ್ದರು. ಅವರನ್ನು ಬಿಡುವುದಕ್ಕಾಗಿ ತಾಯಂದಿರು ಕೂಡ ಬಂದಿದ್ದರು. ನ್ಯಾಯಾಲಯವ ಮಧ್ಯಂತರ ಆದೇಶದ ಪ್ರಕಾರ ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಶಿಕ್ಷಕರು ತಿಳಿ ಹೇಳಿದರು. […]

Advertisement

Wordpress Social Share Plugin powered by Ultimatelysocial