ಬಾಲಕನೊಂದಿಗೆ ಫುಟ್ಬಾಲ್ ಆಡುವ ಶ್ವಾನ

ಶ್ವಾನಗಳು ಎಲ್ಲರ ಪ್ರೀತಿಯ ಗೆಳೆಯರು. ಇದಕ್ಕೆ ಸಾಕ್ಷಿಯಾದ ಸಾಕಷ್ಟು ದೃಶ್ಯಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಇಂತಹ ದೃಶ್ಯಗಳನ್ನು ನೋಡಿದಷ್ಟು ಮನಸ್ಸು ಖುಷಿಯಿಂದ ಅರಳುತ್ತದೆ. ಶ್ವಾನಗಳೂ ಮನುಷ್ಯರೊಂದಿಗಿನ ಸ್ನೇಹವನ್ನು ಸಖತ್ ಎಂಜಾಯ್ ಮಾಡುತ್ತವೆ. ಅದರಲ್ಲೂ ಮಕ್ಕಳೊಂದಿಗೆ ಆಡುವುದೆಂದರೆ ಶ್ವಾನಗಳಿಗೆ ಬಲು ಇಷ್ಟ.ಮಕ್ಕಳು ಮತ್ತು ಶ್ವಾನಗಳ ಸ್ನೇಹದ ಸುಂದರ ವಿಡಿಯೋಗಳು ಆಗಾಗ ನಮಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇದೀಗ, ಇದೇ ಸುಂದರ ದೃಶ್ಯಗಳ ಸಾಲಿಗೆ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದೆ. ಇಲ್ಲೊಂದು ಶ್ವಾನ ತನ್ನ ಪ್ರೀತಿಯ ಫ್ರೆಂಡ್ ಜತೆಗೆ ಫುಟ್ಬಾಲ್ ಆಡಿ ಖುಷಿಪಟ್ಟಿದೆ. ಈ ಸುಂದರ ಗೆಳೆತನವನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ.ಬಾಲಕ ಚೆಂಡಿನಲ್ಲಿ ಆಡುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಬಾಲಕನಿಗೆ ಸ್ವಲ್ಪ ದೂರದಲ್ಲಿ ಆತನ ಪ್ರೀತಿಯ ಶ್ವಾನ ಕೂಡಾ ಕಾಣಿಸುತ್ತದೆ. ಹೀಗೆ ಚೆಂಡನ್ನು ಹಿಡಿದ ಬಾಲಕ ಅದನ್ನು ಶ್ವಾನದತ್ತ ಒದೆಯುತ್ತಾನೆ. ಅಷ್ಟರಲ್ಲಿ ಆ ಶ್ವಾನ ಕೂಡಾ ಅದೇ ಉತ್ಸಾಹದಿಂದ ಚೆಂಡನ್ನು ಬಾಲಕನತ್ತ ಬರುವಂತೆ ಮಾಡುತ್ತದೆ. ಈ ದೃಶ್ಯವೇ ಸುಂದರ. `ಜತೆಯಾಗಿ ಖುಷಿ ಅನುಭವಿಸುವುದು’ ಎಂಬ ಕ್ಯಾಪ್ಶನ್‌ನೊಂದಿಗೆ ಈ ಮುದ್ದಾದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.ಇಂತಹ ದೃಶ್ಯಗಳು ನೋಡಿದಷ್ಟು ಖುಷಿಕೊಡುತ್ತವೆ. ಜತೆಗೆ, ಮತ್ತೆ ಮತ್ತೆ ನೋಡುವಂತೆಯೂ ಮಾಡುತ್ತವೆ. ಅಂತೆಯೇ ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಬಲು ಆನಂದದಿಂದಲೇ ಈ ದೃಶ್ಯವನ್ನು ನೋಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸೋಂಕು ಪತ್ತೆಯಾಗಿದೆ.

Mon Jan 9 , 2023
ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಭೀತಿ ನಡುವೆಯೇ ಕಳೆದ 24 ಗಂಟೆಯಲ್ಲಿ 170 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ.24 ಗಂಟೆಯಲ್ಲಿ ಕೋವಿಡ್ ಮಹಾಮಾರಿಗೆ ಓರ್ವರು ಬಲಿಯಾಗಿದ್ದಾರೆ.ಈ ಮೂಲಕ ದೇಶದಲ್ಲಿ ಈವರೆಗೆ 5,30721 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ 2,371 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಶೇ.98.80ರಷ್ಟು ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,41,47,002 ಜನರು ಕೋವಿಡ್ ನಿಂದ […]

Advertisement

Wordpress Social Share Plugin powered by Ultimatelysocial