ನನ್ನ ಪಾಲಿಗೆ ‘ಮನ್ ಕಿ ಬಾತ್’ ದೇವರಂತಿರುವ ಜನರ ಪಾದದಲ್ಲಿನ ಪ್ರಸಾದದ ತಟ್ಟೆಯಂತೆ; ಪ್ರಧಾನಿ ಮೋದಿ

 

 

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ತಿಂಗಳ ಕೊನೆಯ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಸಂಚಿಕೆ ಇದಾಗಿದೆ.

‘ಮನ್ ಕಿ ಬಾತ್’ ನ ಐತಿಹಾಸಿಕ 100ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ʻನನ್ನ ಪಾಲಿಗೆ ‘ಮನ್ ಕಿ ಬಾತ್’ ದೇವರಂತಿರುವ ಸಾರ್ವಜನಿಕರ ಪಾದದಲ್ಲಿನ ಪ್ರಸಾದದ ತಟ್ಟೆ ಇದ್ದಂತೆʼ ಎಂದಿದ್ದಾರೆ.

‘ಜನರು ದೇವರನ್ನು ಪೂಜಿಸಲು ಹೋದಾಗ, ಅವರು ಪ್ರಸಾದದ ತಟ್ಟೆಯನ್ನು ತರುತ್ತಾರೆ. ನನಗೆ, ‘ಮನ್ ಕಿ ಬಾತ್’ ಎಂದರೆ ‘ಜನತಾ-ಜನಾರ್ದನ್’ ರೂಪದಲ್ಲಿ ದೇವರ ರೂಪದಲ್ಲಿರುವ ಜನರ ಪಾದದ ಮೇಲಿನ ಪ್ರಸಾದದ ತಟ್ಟೆಯಂತೆ. ‘ಮನ್ ಕಿ ಬಾತ್’ ನನ್ನ ಅಸ್ತಿತ್ವದ ಆಧ್ಯಾತ್ಮಿಕ ಪಯಣವಾಗಿದೆ. ‘ಮನ್ ಕಿ ಬಾತ್’ ಎಂಬುದು ಆತ್ಮದಿಂದ ಸಮಷ್ಟಿಯೆಡೆಗೆ ಸಾಗುವ ಪಯಣ. ‘ಮನ್ ಕಿ ಬಾತ್’ ಎಂಬುದು ನನ್ನಿಂದ ನಮ್ಮತ್ತ ಸಾಗುವ ಪಯಣ. ಇದು ನಾನಲ್ಲ, ನೀನೇ ಅದರ ಸಂಸ್ಕಾರ ಸಾಧನಾ ಎಂದು ಪ್ರಧಾನಿ ಮೋದಿ ಹೇಳಿದರು.

ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಸಂಚಿಕೆಯನ್ನು ಐತಿಹಾಸಿಕಗೊಳಿಸಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ದೇಶದ ಪ್ರತಿ ವಿಧಾನಸಭೆಯಲ್ಲಿ 100 ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ಆಲಿಸಲು ವ್ಯವಸ್ಥೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಸ್ತಿಪಟುಗಳ ಪ್ರತಿಭಟನೆ ವಿರುದ್ಧ ಧಮನಕಾರಿ ಕ್ರಮ ಅನುಸರಿಸಲಾಗುತ್ತದೆ : ಕಪಿಲ್ ಸಿಬಲ್

Sun Apr 30 , 2023
      ನವದೆಹಲಿ,ಏ.30- ಲೈಂಗಿಕ ಕಿರುಕುಳದ ನೀಡಿದ ಕುಸ್ತಿ ಫೆಡರೇಶನ್ ಮುಖ್ಯಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ವಿರುದ್ಧ ಧಮನಕಾರಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಸಂಸದರೂ ಆಗಿರುವ ಬಿಜೆಪಿ ಮುಖಂಡನನ್ನು ಬಂಧಿಸುವ ಬದಲಿಗೆ ಆರೋಪ ಮಾಡಿದವರನ್ನೇ ಸಂಕಷ್ಟ ಹೆದರಿಸುವಂತೆ ಮಾಡಲಾಗುತ್ತಿದೆ. ಇದು ದಮನಕಾರಿ ತನಿಖೆಯೇ ಎಂದು ಕಿಡಿಕಾರಿದ್ದಾರೆ. ಹಿರಿಯ ವಕೀಲರೂ ಆದ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್‍ನಲ್ಲಿ ಕುಸ್ತಿಪಟುಗಳ ಪರವಾಗಿ […]

Advertisement

Wordpress Social Share Plugin powered by Ultimatelysocial