ಮಾಜಿ ಸಿಎಂ ಕುಮಾರಸ್ವಾಮಿಯ ಬ್ರಾಹ್ಮಣ ಸಿಎಂ ಹೇಳಿಕೆ,

ಮಾಜಿ ಸಿಎಂ ಕುಮಾರಸ್ವಾಮಿಯ ಬ್ರಾಹ್ಮಣ ಸಿಎಂ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಈಗಾಗಲೇ ವಿವಾದವೇರ್ಪಟ್ಟು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು ಆಗಿದೆ. ಆದ್ರೂ ಆಕ್ರೋಶ ತಣ್ಣಗಾಗಿಲ್ಲ. ಅತ್ತ ಹುಬ್ಬಳ್ಳಿಯಲ್ಲಿ ನಿನ್ನೆ ಕುಮಾರಸ್ವಾಮಿ ವಿರುದ್ಧ ಬ್ರಾಹ್ಮಣರ ಆಕ್ರೋಶ ಭುಗಿಲೆದ್ದಿತ್ತು.

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬ್ರಾಹ್ಮಣ ಸಮುದಾಯದ ನಾಯಕ ಸಿಎಂ ಆಗ್ತಾರೆ ಅಂತ ಕುಮಾರಸ್ವಾಮಿ ಸಿಡಿಸಿದ್ದ ಬಾಂಬ್​ ಕೇಸರಿಪಡೆ ತಲ್ಲಣಗೊಂಡಿತ್ತು. ದಳಪತಿ ವಿರುದ್ಧ ಇಡೀ ಕಮಲಪಾಳಯವೇ ಮುಗಿಬಿದ್ದಿತ್ತು. ಅಂದಿನಿಂದಲೂ ನನ್ನ ಹೇಳಿಕೆಗೆ ಬದ್ಧ ಎನ್ನುತ್ತಿರುವ ಕುಮಾರಸ್ವಾಮಿ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.

‘ನಾನು ಬ್ರಾಹ್ಮಣರು ಸಿಎಂ ಆಗಬಾರದು ಅಂತ ಹೇಳಿಲ್ಲ’
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮುಂದಿನ ಸಿಎಂ ಆಗ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ತತ್ತರಿಸಿತ್ತು. ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಆಗುವ ಡ್ಯಾಮೇಜ್ ತಪ್ಪಿಸಲು ಕಮಲ ನಾಯಕರು ಪ್ರಯತ್ನಿಸಿದ್ದರು. ಇವತ್ತು ಹುಬ್ಬಳ್ಳಿಯಲ್ಲಿ ಮತ್ತೆ ಪ್ರತಿಕ್ರಿಯೆ ನೀಡಿರೋ ಕುಮಾರಸ್ವಾಮಿ ನನ್ನ ಹೇಳಿಕೆಗೆ ನಾನು ಬದ್ಧ. ಬ್ರಾಹ್ಮಣರ ಬಗ್ಗೆ ನಮ್ಮ ಕುಟುಂಬಕ್ಕೆ ಗೌರವ ಇದೆ. ಪೇಶ್ವೆ ಡಿಎನ್​ಎ ಬಗ್ಗೆ ನನ್ನ ಪ್ರಶ್ನೆಗೆ ಬಿಜೆಪಿಯವರು ಮೊದಲು ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ನಾನು ಹೇಳಿರುವಂತ ಡಿಎನ್​ಎ ಪ್ರಶ್ನೆಗೆ ಮೊದಲು ಉತ್ತರ ಕೊಡಿ. ಬ್ರಾಹ್ಮಣ ಸಮುದಾಯಕ್ಕೆ ಅತ್ಯಂತ ಗೌರವ ಕೊಡೋದು ನಮ್ಮ ಕುಟುಂಬ. ಈಗಲೂ ಅದನ್ನ ಬಾಳ ಸ್ಪಷ್ಟವಾಗಿ ಹೇಳುತ್ತೀನಿ. ನಾವು ಮೊದಲಿನಿಂದಲೂ ಬ್ರಾಹ್ಮಣ ಸಮುದಾಯದ ಹೋಣಿಗಳಲ್ಲಿ ಬೆಳೆದಿದ್ದೇವೆ. ನಾವು ವಾಸ ಇದ್ದಿದ್ದು ಅಲ್ಲೇ. ಆ ಕಲ್ಚರ್​ ಏನ್​ ಅಂತ ಗೊತ್ತಿದೆ. ಪೇಶ್ವ ಕಲ್ಚರ್​ ಇದಿಯಲ್ಲಾ ಆ ಡಿಎನ್​ಎ ಅದರ ಬಗ್ಗೆ ಉತ್ತರ ಕೊಡಿ ಅಂದ್ರೆ ಯಾರು ಉತ್ತರ ಕೊಡುತ್ತಿಲ್ಲ.

ನಾನು ಬ್ರಾಹ್ಮಣರು ಸಿಎಂ ಆಗಬೇಕು ಅಂತ ಏನು ಹೇಳುತ್ತಿಲ್ಲ. ಪೇಶ್ವೆ ಡಿಎನ್​ಎ ಆಗಬಾರದು. ನನ್ನ ರಾಜ್ಯ ಹಾಳಗಬಾರದು. ಪ್ರಹ್ಲಾದ್​ ಜೋಶಿ ಬಗ್ಗೆನೂ ಹೇಳುತ್ತಿಲ್ಲ. ಪೇಶ್ವೆ ಡಿಎನ್​ಎ ಏನೀದೆ ಬ್ಯಾಗ್ರೌಂಡ್​ ಅಂತವರು ಈ ರಾಜ್ಯಕ್ಕೆ ಅಲ್ಲ.

H.D.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಸಿಎಂ ಹೆಚ್​ಡಿಕೆ ವಿರುದ್ಧ ಬ್ರಾಹ್ಮಣ ಸಮುದಾಯ ಸಮರ
ಒಂದ್ಕಡೆ ಬ್ರಾಹ್ಮಣರ ಬಗ್ಗೆ ಗೌರವವಿದೆ ಅಂತ ಕುಮಾರಸ್ವಾಮಿ ಹೇಳ್ತಿದ್ರೆ ಅತ್ತ ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ವಿರುದ್ಧ ಬ್ರಾಹ್ಮಣ ಸಮುದಾಯದ ಆಕ್ರೋಶ ಭುಗಿಲೆದ್ದಿದೆ. ವಿಶ್ವ ವಿಪ್ರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಕುಮಾರಸ್ವಾಮಿ ಯಾವುದೇ ಮಾಹಿತಿ‌ ಇಲ್ಲದೇ ನಾಲಿಗೆ ಹರಿಬಿಟ್ಟಿದ್ದಾರೆ. ಇಡೀ ಬ್ರಾಹ್ಮಣ ಕುಲಕ್ಕೆ ಅಪಮಾನ ಮಾಡಿದ್ದಾರೆ ಅಂತ ಕಿಡಿಕಾರಿದೆ. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿರುವ ಸಮುದಾಯ ಕುಮಾರಸ್ವಾಮಿ ಕೂಡಲೇ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದೆ.

ಬ್ರಾಹ್ಮಣರ ಸಂಬಂಧಿಸಿದ್ದು ಯಾವುದೇ ಮಾಹಿತಿ ಇಲ್ಲದೇ ಹೇಳಿರುವುದನ್ನ ಖಂಡಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಮಾಜಿ ಸಿಎಂ ಆದ ಕುಮಾರಸ್ವಾಮಿ ಅವರು ಕ್ಷೆಮೆ ಕೇಳಬೇಕು. ಕ್ಷೆಮ ಕೇಳದಿದ್ದರೆ ನಾವು ಬೀದಿಗೆ ಬಂದು ಹೋರಾಟ ಮಾಡ್ತೀವಿ. ಕಾನೂನು ಕ್ರಮವನ್ನು ಕೂಡ ತೆಗೆದುಕೊಳ್ಳುತ್ತೇವೆ.

ಬ್ರಾಹ್ಮಣ ಸಮುದಾಯದ ಮುಖಂಡ

ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಅಂತ ಬ್ರಾಹ್ಮಣ ಸಮುದಾಯ ಆಗ್ರಹಿಸಿದೆ. ನಾನು ಬ್ರಾಹ್ಮಣರಿಗೆ ಅವಮಾನ ಮಾಡಿಲ್ಲ ಎನ್ನುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೀರೋ ಮೋಟಾರ್ಸ್ ಹೊಸ HERO XOMO ಬಿಡುಗಡೆ

Tue Feb 14 , 2023
    ಹೀರೋ ಮೋಟಾರ್ಸ್ ಹೊಸ HERO XOMO ಬಿಡುಗಡೆ ಮಾಡಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೊಡ್ಡ ಅಗಲ ಟೈರ್ ಗಳನ್ನು ಇದು ಹೊಂದಿದ್ದು, ಸ್ಕೂಟರ್ ಉದ್ಯಮದಲ್ಲೇ ಪ್ರಥಮ ಬಾರಿಗೆ ಕಾರ್ನರ್ ಬಿಲ್ಡಿಂಗ್ ಲೈಟ್ಸ್ ಕೊಡಲಾಗಿದೆ. ಜೊತೆಗೆ ರಿಯರ್ LED ಲೈಟ್ ಸೌಲಭ್ಯವನ್ನು ಹೊಂದಿದೆ. ಬ್ಲೂಟೂತ್ ಕನೆಕ್ಟಿವಿಟಿ ಜೊತೆ ಡಿಜಿಟಲ್ ಸ್ಪೀಡೋಮೀಟರ್ ಇದ್ದು, ಕಂಪನಿಯ ಆಂತರಿಕ ಪರೀಕ್ಷೆಯ ಪ್ರಕಾರ 110 ಸಿಸಿ ಸ್ಕೂಟರ್ […]

Advertisement

Wordpress Social Share Plugin powered by Ultimatelysocial