ಎರಡು ವರ್ಷಗಳಲ್ಲಿ ನಾಲ್ಕು ಮಕ್ಕಳು:

ನ್ಯೂಯಾರ್ಕ್​: ಅಮೆರಿಕದ ಮಹಿಳೆಯೊಬ್ಬಳು ಎರಡು ವರ್ಷಗಳಲ್ಲಿ ಎರಡು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎರಡನೆಯ ಬಾರಿ ಮೊಮೊ ಟ್ವಿನ್ಸ್​ಗೆ ಜನ್ಮ ನೀಡಿದ್ದಾಳೆ. ಬ್ರಿಟ್ನಿ ಆಲ್ಬಾ ಎಂಬ ಮಹಿಳೆ ಎರಡು ವರ್ಷಗಳಲ್ಲಿ ನಾಲ್ಕು ಮಕ್ಕಳ ತಾಯಿಯಾಗಿದ್ದಾರೆ.ಅವಳಿ ಮಕ್ಕಳು ಜನಿಸಿದ ಆರು ತಿಂಗಳ ನಂತರ ಬ್ರಿಟ್ನಿ ಆಲ್ಬಾಗೆ ಮತ್ತೆ ತಾನು ಗರ್ಭಿಣಿ ಎಂಬುದು ತಿಳಿದಿದೆ. ಆಗಲೂ ಅವಳಿ ಭ್ರೂಣವಿರೋದು ಗೊತ್ತಾಗಿದೆ. ಮೊದಲು ಜನಿಸಿದ ಮಕ್ಕಳ ಹೆಸರು ಲುಕಾ ಮತ್ತು ಲೆವಿ. ಎರಡನೇ ಬಾರಿ ಜನಿಸಿದ ಮಕ್ಕಳಿಗೆ ಹೆಸರು ಲಿಡಿಯಾ ಮತ್ತು ಲಿನ್ಲೀ ಎಂದು ಹೆಸರು ಇಡಲಾಗಿದೆ. .ಮೊಮೊ ಅಂದ್ರೆ ಅವಳಿಗಳು ಗರ್ಭದಲ್ಲಿ ಒಂದೇ ಜರಾಯು ಮತ್ತು ಅಮಿಟೋಟಿಕ್ ಚೀಲವನ್ನು ಹಂಚಿಕೊಳ್ಳುತ್ತವೆ. ಜರಾಯು ಎಂಬುದು ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ. ಮೊದಲ ಅವಳಿ ಮಕ್ಕಳು ಕೂಡ ಒಂದೇ ಜರಾಯುವಿನಲ್ಲಿದ್ದರು. ಜರಾಯು ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ. ಇದು ತಾಯಿಯಿಂದ ಬರುವ ರಕ್ತದಿಂದ ಮಗು ಪೌಷ್ಠಿಕಾಂಶ ಪಡೆಯಲು, ದೇಹದ ಕೊಳಕನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಇದು ಗರ್ಭಾಶಯವನ್ನು ಹೊಕ್ಕುಳ ಬಳ್ಳಿಗೆ ಸಂಪರ್ಕಿಸುತ್ತದೆ. ಭ್ರೂಣಕ್ಕೆ ಆಮ್ಲಜನಕವನ್ನು ಪೂರೈಸುವ ಕೆಲಸವನ್ನೂ ಜರಾಯು ಮಾಡುತ್ತದೆ.ಇಂಥ ಗರ್ಭಧಾರಣೆಯಲ್ಲಿ ಅಪಾಯ ಹೆಚ್ಚು. ಗರ್ಭಪಾತ, ಸತ್ತ ಮಗು ಜನನ ಮತ್ತು ಭ್ರೂಣದ ವೈಪರೀತ್ಯಗಳಂತಹ ತೊಡಕುಗಳು ಕಾಡುವ ಸಾಧ್ಯತೆಯಿರುತ್ತದೆ. ಅಮೆರಿಕಾದಲ್ಲಿ 35 ಸಾವಿರ ಪ್ರಕರಣಗಳಲ್ಲಿ ಅಥವಾ 60 ಸಾವಿರ ಪ್ರಕರಣಗಳಲ್ಲಿ ಒಂದು ಇಂಥ ಪ್ರಕರಣ ಪತ್ತೆಯಾಗುತ್ತದೆ. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪ್ರಕಾರ, ಇಂಥ ಪ್ರಕರಣದಲ್ಲಿ ಜೀವಂತವಾಗಿ ಮಗು ಜನಿಸೋದು ಬಹಳ ಕಷ್ಟ. 1,000ರಲ್ಲಿ ಶೇಕಡಾ 3ರಷ್ಟು ಸಾಧ್ಯತೆಯಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Where to find a Oriental Woman On-line

Mon Feb 27 , 2023
When it comes to web based online dating, there are many different asian women looking for american men options available. Probably the most popular is normally Asian dating. This type of online dating can be a great way to satisfy new people in order to find a potential partner. However […]

Advertisement

Wordpress Social Share Plugin powered by Ultimatelysocial